ಸಾಖಿರ್‌(ಡಿ.07): ಭಾರತದ ಯುವ ರೇಸ್‌ಪಟು ಜೆಹನ್‌ ದಾರುವಾಲಾ ಇಲ್ಲಿ ಭಾನುವಾರ ನಡೆದ ಸಾಖಿರ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ 2 (ಎಫ್‌2) ರೇಸ್‌ನಲ್ಲಿ ಜಯಗಳಿಸುವ ಮೂಲಕ, ಈ ಸಾಧನೆ ಮಾಡಿದ ಭಾರತದ ಮೊದಲ ರೇಸರ್‌ ಎನ್ನುವ ದಾಖಲೆ ಬರೆದರು. ರಾಯೊ ರೇಸಿಂಗ್‌ ತಂಡವನ್ನು ಪ್ರತಿನಿಧಿಸುವ ಮುಂಬೈನ 22 ವರ್ಷದ ಜೆಹನ್‌ ಈ ವರ್ಷದ ಕೊನೆ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು.

ಶೂಮಾಕರ್‌ ಮಗ ಚಾಂಪಿಯನ್‌:

2020ರ ಫಾರ್ಮುಲಾ 2 ಚಾಂಪಿಯನ್‌ ಆಗಿ ಫಾರ್ಮುಲಾ 1ನ ದಿಗ್ಗಜ, 7 ಬಾರಿ ವಿಶ್ವ ಚಾಂಪಿಯನ್‌ ಮೈಕಲ್‌ ಶೂಮಾಕರ್‌ ಪುತ್ರ ಮಿಕ್‌ ಶೂಮಾಕರ್‌ ಹೊರಹೊಮ್ಮಿದ್ದಾರೆ. 

2021ರ ಫಾರ್ಮುಲಾ 1 ರೇಸಲ್ಲಿ ಶೂಮಾಕರ್‌ ಮಗ

ಭಾನುವಾರ ನಡೆದ ಸಾಖಿರ್‌ ಗ್ರ್ಯಾನ್‌ ಪ್ರಿಯಲ್ಲಿ 18ನೇ ಸ್ಥಾನ ಪಡೆದರೂ, ಈ ಋುತುವಿನಲ್ಲಿ ಒಟ್ಟು 215 ಅಂಕ ಕಲೆಹಾಕಿದ ಮಿಕ್‌ ಚಾಂಪಿಯನ್‌ ಪಟ್ಟಅಲಂಕರಿಸಿದರು. ಮುಂದಿನ ವರ್ಷದಿಂದ ಮಿಕ್‌ ಎಫ್‌ 1 ರೇಸ್‌ನಲ್ಲಿ ಸ್ಪರ್ಧಿಸಲಿದ್ದು, ಹಾಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.