ಪಾಕಿಸ್ತಾನಕ್ಕೆ ತೆರಳಿದ ಭಾರತದ ಕಬಡ್ಡಿ ಪಟುಗಳ ವಿರುದ್ಧ ಕ್ರಮ; ಕ್ರೀಡಾ ಸಚಿವ!
ಭಾರತೀಯ ಕಬಡ್ಡಿ ಫೆಡರೇಶನ್ ಅನುಮತಿ ಪಡೆಯದೆ ಗುಟ್ಟಾಗಿ ಪಾಕಿಸ್ತಾನ ತೆರಳಿ ಮುಗ್ಗರಿಸಿದ ಭಾರತೀಯ ಕಬಡ್ಡಿಪಟುಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವವ ಕಿರಣ ರಿಜಿಜು ಸೂಚಿಸಿದ್ದಾರೆ. ಪಾಕ್ ಟ್ರಿಪ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.22): ಪಾಕಿಸ್ತಾನ ಆಯೋಜಿಸಿದ್ದ ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಕಬಡ್ಡಿ ಪಟುಗಳು ಸದ್ದಿಲ್ಲದೇ ಭಾಗವಹಿಸಿ ಬಂದ ಘಟನೆ ನಡೆದಿದೆ. ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ ಕಬಡ್ಡಿ ಪಟುಗಳು ಮರಳಿ ಭಾರತಕ್ಕೆ ಬರುತ್ತಿದ್ದಂತೆ ಕ್ರಮಕ್ಕೆ ಸೂಚಿಸಲಾಗಿದೆ.
ಇದನ್ನೂ ಓದಿ:ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್ ಪಿ ರವಿ ಚನ್ನಣ್ಣನವರ್
ಭಾರತೀಯ ಕಬಡ್ಡಿ ಫೆಡರೇಶನ್ ಅನುಮತಿ ಪಡೆಯದೇ ಕಬಡ್ಡಿ ಪಟುಗಳು ಪಾಕಿಸ್ತಾನ ತೆರಳಿದ್ದರು. ಇಷ್ಟೇ ಅಲ್ಲ ಭಾರತವನ್ನು ಪ್ರತಿನಿಧಿಸಿದ್ದರು. ಇದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಯಾರೂ ಬೇಕಾದರೂ ಟೂರ್ನಿಗೆ ತೆರಳಿ ಭಾರತವನ್ನು ಪ್ರತಿನಿಧಿಸುವುದು ಸರಿಯಲ್ಲ ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಕಬಡ್ಡಿ ಶಿಬಿರ: ರಾಜ್ಯದ ನಾಲ್ವರಿಗೆ ಸ್ಥಾನ
ಯಾವದೇ ಅನುಮತಿ ಇಲ್ಲದೆ ಪಾಕಿಸ್ತಾನಕ್ಕೆ ತೆರಳಿರುವ ಕಬಡ್ಡಿ ಪಟುಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಕಿರಣ್ ರಿಜಿಜು ಸೂಚಿಸಿದ್ದಾರೆ. ಪಾಕ್ ಆಯೋಜಿಸಿದ್ದ ಕಬಡ್ಡಿ ಟೂರ್ನಿಗೆ ಮಾನ್ಯತೆ ಇಲ್ಲ. ಭಾರತಯ ಕ್ರೀಡಾಪಟುಗಳು ಅವರಸಕ್ಕೆ ಬಿದ್ದು ಕರಿಯರ್ ಅಂತ್ಯಗೊಳಿಸಬೇಡಿ ಎಂದು ಕಿರಣ್ ಮನವಿ ಮಾಡಿದ್ದಾರೆ.