ಟೆನಿಸ್ ವೃತ್ತಿಜೀವನದಲ್ಲಿ 1000 ಗೆಲುವು ದಾಖಲಿಸಿದ ರಾಫೆಲ್ ನಡಾಲ್

ಕಿಂಗ್ ಆಫ್‌ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ತಮ್ಮ ವೃತ್ತಿಜೀವನದ ಸಿಂಗಲ್ಸ್ ವಿಭಾಗದಲ್ಲಿ 1000 ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 4ನೇ ಟೆನಿಸ್ ಆಟಗಾರ ಎನ್ನುವ ದಾಖಲೆ ನಡಾಲ್ ಪಾಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

King of clay Court Fame Rafael Nadal becomes fourth player to register 1000 singles wins in his Career kvn

ಪ್ಯಾರಿಸ್(ನ.06)‌: ಸ್ಪೇನ್‌ನ ತಾರಾ ಟೆನಿಸಿಗ ರಾಫೆಲ್‌ ನಡಾಲ್‌, ವೃತ್ತಿ ಜೀವನದ ಸಿಂಗಲ್ಸ್‌ ವಿಭಾಗದಲ್ಲಿ 1000ನೇ ಗೆಲುವು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 4ನೇ ಟೆನಿಸಿಗ ಎಂಬ ಹೆಗ್ಗಳಿಕೆಗೆ ನಡಾಲ್‌ ಪಾತ್ರರಾಗಿದ್ದಾರೆ. 

ಜಿಮ್ಮಿ ಕಾನರ್ಸ್‌ (1,274), ರೋಜರ್‌ ಫೆಡರರ್‌ (1,242) ಹಾಗೂ ಇವಾನ್‌ ಲೆಂಡ್ಲ್‌ (1,068) ಗೆಲುವಿನೊಂದಿಗೆ ಮೊದಲ 3 ಸ್ಥಾನದಲ್ಲಿದ್ದಾರೆ. ಕೊರೋನಾದಿಂದಾಗಿ ಖಾಲಿಯಿದ್ದ 20 ಸಾವಿರ ಆಸನದ ಸಾಮರ್ಥ್ಯ ಇರುವ ಸ್ಟೇಡಿಯಂನಲ್ಲಿ ನಡಾಲ್‌ ವೃತ್ತಿ ಜೀವನದ ಮಹತ್ವದ ಮೈಲಿಗಲ್ಲು ದಾಟಿದರು. 

'ಫ್ರೆಂಚ್ ಕಿಂಗ್' ನಡಾಲ್ ಹೊಸ ದಾಖಲೆ..!

ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್‌, ತಮ್ಮದೇ ರಾಷ್ಟ್ರದ ಫೆಲಿಸಿನೊ ಲೊಪೇಜ್‌ ವಿರುದ್ಧ 4-6, 7-6(7-5), 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

ಪ್ಯಾರಿಸ್‌ ಮಾಸ್ಟರ್ಸ್‌: ಬೋಪಣ್ಣ ಜೋಡಿ ಕ್ವಾರ್ಟರ್‌ಗೆ

ಪ್ಯಾರಿಸ್‌: ಭಾರತದ ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ, ಆಸ್ಪ್ರೇಲಿಯಾದ ಒಲಿವರ್‌ ಮರಾಚ್‌ ಜೋಡಿ, ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ. 

ಪುರುಷರ ಡಬಲ್ಸ್‌ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಇಂಡೋ-ಆಸೀಸ್‌ ಜೋಡಿ, 9ನೇ ಶ್ರೇಯಾಂಕಿತ ಫ್ರಾನ್ಸ್‌ನ ಮಾರ್ಟಿನ್‌ ಹಾಗೂ ಡಚ್‌ ಟೆನಿಸಿಗ ಜೂಲಿಯನ್‌ ರೋಜರ್‌ ಜೋಡಿ ವಿರುದ್ಧ 3-6, 6-4, 10-8 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ-ಒಲಿವರ್‌ ಜೋಡಿ, ಆಸ್ಟ್ರೀಯಾದ ಜರ್ಗೆನ್‌ ಮೆಲ್ಜರ್‌ ಹಾಗೂ ಫ್ರಾನ್ಸ್‌ನ ಎಡ್ವಡ್‌ ಜೋಡಿ ಎದುರು ಸೆಣಸಲಿದೆ.

Latest Videos
Follow Us:
Download App:
  • android
  • ios