ಕಿಕ್‌ ಬಾಕ್ಸಿಂಗ್‌ ವೀಕ್ಷಿಸಿದ 72 ಮಂದಿಗೆ ಸೋಂಕು!

ಕೊರೋನಾ ವೈರಸ್ ಇದೀಗ ವ್ಯಾಪಕವಾಗಿ ಹಬ್ಬಲಾರಂಭಿಸಿದೆ. ಬ್ಯಾಂಕಾಕ್‌ನಲ್ಲಿ ಕಿಕ್‌ ಬಾಕ್ಸಿಂಗ್ ನೋಡಲು ಹೋಗಿ ಸುಮಾರು 70ಕ್ಕೂ ಅಧಿಕ ಮಂದಿಗೆ ಕೋವಿಡ್ 19 ಸೋಂಕು ತಗುಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Kickboxing match leads to jump in KOVID 19 infections in Thailand

ಬ್ಯಾಂಕಾಕ್‌(ಮಾ.22): ಮಾ.6ರಂದು ಇಲ್ಲಿನ ಲುಂಪಿನಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮುಯಿ ಥಾಯ್‌ ಕಿಕ್‌ ಬಾಕ್ಸಿಂಗ್‌ ಪಂದ್ಯಗಳನ್ನು ವೀಕ್ಷಿಸಲು ಥಾಯ್ಲೆಂಡ್‌ನ ಮೂಲೆ ಮೂಲೆಗಳಿಂದ ಅಭಿಮಾನಿಗಳು ಉತ್ಸಾಹದಿಂದ ಆಗಮಿಸಿದ್ದರು. ಆದರೆ ಮನೆಗಳಿಗೆ ತೆರಳುವಾಗ ಅದೆಷ್ಟೋ ಜನ ಕೊರೋನಾ ಸೋಂಕಿತರಾಗಿ ತೆರಳಿದರು. 

ಕೊರೋನಾಗೆ 77 ‘ಔಷಧ’ ಪತ್ತೆ ಹಚ್ಚಿದ ಸೂಪರ್‌ ಕಂಪ್ಯೂಟರ್‌!

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಲು, ಕಿಕ್‌ ಬಾಕ್ಸಿಂಗ್‌ ಪಂದ್ಯಗಳೂ ಪ್ರಮುಖ ಕಾರಣ ಎನ್ನುವಂತಾಗಿದೆ. ಶುಕ್ರವಾರದ ವರೆಗೂ ಸಿಕ್ಕ ಲೆಕ್ಕದ ಪ್ರಕಾರ 72 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಖ್ಯಾತ ನಟ, ಸೇನಾಧಿಕಾರಿ, ರಾಜಕಾರಣಿ, ಬಾಕ್ಸಿಂಗ್‌ ಕೋಚ್‌ ಹಾಗೂ ಹಲವಾರು ಅಭಿಮಾನಿಗಳಿದ್ದಾರೆ. ಸೋಂಕು ಇನ್ನಷ್ಟು ಮಂದಿಗೆ ತಗುಲಿರಬಹುದು ಎನ್ನುವ ಆತಂಕವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದು, ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲು ಪ್ರಯತ್ನಗಳು ನಡೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಮಹಾಮಾರಿ ಕೊರೋನಾದಿಂದ ಬಚಾವ್ ಆಗಲು ಇದೊಂದೆ ಪರಿಹಾರ’

ಥಾಯ್ಲೆಂಡ್‌ನಲ್ಲಿ ಇದುವರೆಗೂ ಒಟ್ಟು 411 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಹಬ್ಬದಂತೆ ತಡೆಯಲು ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜತೆಗೆ ಜನರು ಹೆಚ್ಚು ಹೆಚ್ಚು ಸೇರುವ ಪ್ರದೇಶಗಳನ್ನು ನಿರ್ಬಂಧಿಸಲಾಗಿದೆ.
 

Latest Videos
Follow Us:
Download App:
  • android
  • ios