ಕೊರೋನಾಗೆ 77 ‘ಔಷಧ’ ಪತ್ತೆ ಹಚ್ಚಿದ ಸೂಪರ್ ಕಂಪ್ಯೂಟರ್!
ವಿಶ್ವಾದ್ಯಂತ 11 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ | ಕೊರೋನಾ ವೈರಸ್ ತಡೆವ 77 ‘ಔಷಧ’ ಪತ್ತೆ ಹಚ್ಚಿದ ಸೂಪರ್ ಕಂಪ್ಯೂಟರ್|
ನ್ಯೂಯಾರ್ಕ್(ಮಾ.22): ವಿಶ್ವಾದ್ಯಂತ 11 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್ ಮತ್ತಷ್ಟುವ್ಯಾಪಿಸದಂತೆ ತಡೆಯಬಲ್ಲ 77 ರಾಸಾಯನಿಕಗಳನ್ನು ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ ಪತ್ತೆ ಹಚ್ಚಿದೆ. ಕೊರೋನಾ ವಿರುದ್ಧ ಲಸಿಕೆ ಶೋಧಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಐಬಿಎಂ ಕಂಪನಿಯ ‘ಸಮಿಟ್’ ಎಂಬ ಸೂಪರ್ ಕಂಪ್ಯೂಟರ್ ಸಹಸ್ರಾರು ಸಿಮ್ಯುಲೇಷನ್‌ಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಕೊರೋನಾ ವೈರಾಣು ತನಗೆ ಆಶ್ರಯ ನೀಡಿದ ಜೀವಕೋಶಕ್ಕೆ ಸೋಂಕು ಹರಡದಂತೆ ತಡೆಯುವ ಪರಿಣಾಮಕಾರಿ ಔಷಧಕ್ಕೆ ಹುಡುಕಾಡಿದೆ. 8 ಸಾವಿರ ಸಂಯುಕ್ತಗಳನ್ನು ಪರಿಶೀಲಿಸಿ, ಆ ಪೈಕಿ 77 ಪರಿಣಾಮಕಾರಿಯಾಗಿವೆ ಎಂದು ಸೂಚಿಸಿದೆ.
ಈ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡ್‌ಗೆ 20 ಕ್ವಾಡ್ರಿಲಿಯನ್ ವೇಗದಲ್ಲಿ ಲೆಕ್ಕ ಮಾಡುತ್ತದೆ. ಇದು ಜನಸಾಮಾನ್ಯರು ಬಳಸುವ ಅತ್ಯಂತ ವೇಗದ ಲ್ಯಾಪ್‌ಟಾಪ್‌ಗಿಂತ ದಶಲಕ್ಷಕ್ಕಿಂತ ಹೆಚ್ಚು ವೇಗ ಎಂಬುದು ಗಮನಾರ್ಹ.