ಆ್ಯಂಟಿಗಾ[ನ.04]: ಮೊದಲ ಏಕ​ದಿನದಲ್ಲಿ ವೆಸ್ಟ್‌ ಇಂಡೀಸ್‌ ಇನ್ನಿಂಗ್ಸ್‌ನ ಕೊನೆಯ ಎಸೆ​ತ​ದಲ್ಲಿ ಭಾರತದ ಹರ್ಮ​ನ್‌​ಪ್ರೀತ್‌ ಕೌರ್ ಅದ್ಭುತ ಕ್ಯಾಚ್‌ ಪಡೆ​ದ​ರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!

ಸ್ಪಿನ್ನರ್‌ ಏಕ್ತಾ ಬಿಶ್ತ್ ಹಿಂದಿನ ಎಸೆ​ತವನ್ನು ಲಾಂಗ್‌ ಆನ್‌ ಕ್ಷೇತ್ರ​ದಲ್ಲಿ ಸಿಕ್ಸ​ರ್‌​ಗ​ಟ್ಟಿದ ವಿಂಡೀಸ್‌ ನಾಯಕಿ ಸ್ಟೆಫಾನಿ ಟೇಲರ್‌ 94 ರನ್‌ ಗಳಿಸಿ ಕ್ರೀಸ್‌​ನ​ಲ್ಲಿ​ದ್ದ​ರು. ಮುಂದಿನ ಎಸೆ​ತ​ವನ್ನೂ ಸಿಕ್ಸರ್‌ಗಟ್ಟಿ ಶತಕ ದಾಖ​ಲಿ​ಸ​ಲು ಯತ್ನಿ​ಸಿ​ದ​ರು. ಆದರೆ ಲಾಂಗ್‌ ಆನ್‌ ಕ್ಷೇತ್ರ​ದಲ್ಲಿದ್ದ ಹರ್ಮ​ನ್‌​ಪ್ರೀತ್‌ ಗಾಳಿ​ಯಲ್ಲಿ ಜಿಗಿದು ಎಡ​ಗೈಯಿಂದ ಕ್ಯಾಚ್‌ ಪಡೆದು ಮಿಂಚಿ​ದ​ರು.

ಕ್ಯಾಚ್‌ ಪಡೆದಾ​ಗಲೂ ಕೌರ್‌ ಸಮ​ತೋ​ಲನ ಸಾಧಿಸಿದರು. ಸಿಕ್ಸರ್‌ ಹೋಗುವ ಚೆಂಡನ್ನು ಕೌರ್‌ ತಡೆ​ದಿದ್ದರಿಂದ, ಟೇಲರ್‌ ಶತ​ಕ ಪೂರೈ​ಸ​ಲಿ​ಲ್ಲ. ಹರ್ಮನ್‌ ಕ್ಯಾಚ್‌ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹರ್ಮನ್‌ಪ್ರೀತ್ ಕೌರ್ ಹಿಡಿದ ಕ್ಯಾಚ್, ಐಪಿಎಲ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ನೆನಪಿಸುವಂತಿತ್ತು.

11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅತ್ಯದ್ಭುತ ಕ್ಯಾಚ್ ಹಿಡಿದಿದ್ದರು. ಆ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಮಹಿಳಾ ಏಕ​ದಿನ: ಭಾರ​ತಕ್ಕೆ 1 ರನ್‌ ಸೋಲು!

ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಏಕ​ದಿ​ನ​ದಲ್ಲಿ ಭಾರತ ಮಹಿಳಾ ತಂಡ 1 ರನ್‌ನ ವೀರೋ​ಚಿತ ಸೋಲು ಕಂಡಿದೆ.

ಶುಕ್ರ​ವಾರ ತಡರಾತ್ರಿ ಮುಕ್ತಾಯವಾದ ಐಸಿಸಿ ಮಹಿಳಾ ಚಾಂಪಿ​ಯ​ನ್‌​ಶಿಪ್‌ನ ಮೊದಲ ಪಂದ್ಯ​ದಲ್ಲಿ ಸವಾಲಿನ 226 ರನ್‌ ಗುರಿ ಬೆನ್ನ​ತ್ತಿದ ಭಾರತ ವನಿ​ತೆ​ಯರು 50 ಓವ​ರ್‌​ಗ​ಳಲ್ಲಿ 224 ರನ್‌​ಗ​ಳಿಗೆ ಆಲೌ​ಟಾ​ದ​ರು. ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 75 ರನ್‌, ಜೆಮಿಮಾ 41 ರನ್‌ ಗಳಿ​ಸಿ​ದ​ರು. ಆದರೆ ಆಫ್‌ ​ಸ್ಪಿ​ನ್ನರ್‌ ಅನಿಸಾ ಮೊಹ​ಮ್ಮದ್‌ 46 ರನ್‌​ಗೆ 5 ವಿಕೆಟ್‌ ಕಬ​ಳಿ​ಸಿದ್ದು, ಕೆಳ ಕ್ರಮಾಂಕ​ದ ಕುಸಿ​ತ​ಕ್ಕೆ ಒಳ​ಗಾ​ಯಿ​ತು. ಕೊನೆಯ ಓವ​ರ್‌​ನಲ್ಲಿ ಭಾರ​ತಕ್ಕೆ 8 ರನ್‌ ಬೇಕಿತ್ತು. ಆದರೆ 2 ವಿಕೆಟ್‌ ಕಿತ್ತು ಅನಿಸಾ ವಿಂಡೀಸ್‌ ತಂಡಕ್ಕೆ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ ನಿಗ​ದಿತ 50 ಓವ​ರ್‌​ಗ​ಳಲ್ಲಿ 7 ವಿಕೆಟ್‌ ನಷ್ಟಕ್ಕೆ 225 ರನ್‌ ಪೇರಿ​ಸಿ​ತು. 94 ರನ್‌ ಹೊಡೆ​ದಿದ್ದ ವಿಂಡೀಸ್‌ ನಾಯಕಿ ಸ್ಟೆಫಾನಿ ಟೇಲರ್‌ ಪಂದ್ಯ​ಶ್ರೇಷ್ಠ ಪ್ರಶ​ಸ್ತಿಗೆ ಭಾಜ​ನ​ರಾ​ದ​ರು.