ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋಗೆ 2ನೇ ಬಾರಿ ಕೊರೋನಾ ಸೋಂಕು..!
ಯುವೆಂಟಸ್ ತಂಡದ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋಗೆ 2ನೇ ಬಾರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಮಿಲನ್(ಅ.23): ತಾರಾ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋಗೆ 2ನೇ ಬಾರಿಯ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಇದರಿಂದಾಗಿ ಮುಂದಿನ ವಾರ ನವೆಂಬರ್ 29 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಬಾರ್ಸಿಲೋನಾ ವಿರುದ್ಧದ ಪಂದ್ಯಕ್ಕೆ ರೊನಾಲ್ಡೋ ಅಲಭ್ಯರಾಗಿದ್ದಾರೆ. ರೊನಾಲ್ಡೋ ಯುವೆಂಟಸ್ ತಂಡದ ಪರ ಆಡುತ್ತಿದ್ದಾರೆ. ಮೆಸ್ಸಿ ಎದುರಿನ ಪಂದ್ಯದಲ್ಲಿ ರೊನಾಲ್ಡೋ ಆಡದಂತಾಗಿದೆ.
ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ವಿರುದ್ಧದ ಕದನವನ್ನು ಫುಟ್ಬಾಲ್ ಅಭಿಮಾನಿಗಳು ತಪ್ಪಿಸಿಕೊಂಡಂತಾಗಿದೆ. ಈ ಹಿಂದೆ 35 ವರ್ಷದ ಫುಟ್ಬಾಲ್ ಆಟಗಾರ ರೊನಾಲ್ಡೋಗೆ ಅಕ್ಟೋಬರ್ 13 ರಂದು ಮೊದಲ ಬಾರಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.
ಮಾಸ್ಕ್ ಹಾಕದೇ ಪಂದ್ಯ ವೀಕ್ಷಿಸಿದ 30ಸಾವಿರ ಫ್ಯಾನ್ಸ್: 7 ತಿಂಗಳ ಬಳಿಕ ದಾಖಲೆ!
ಇನ್ನು ಯುಎಸ್ ಮಿಡ್ ಫೀಲ್ಡರ್ ಆಗಿರುವ ವೆಸ್ಟನ್ ಮೆಕ್ಕೇನಿಗೆ ಅಕ್ಟೋಬರ್ 14ರಂದು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಯುವೆಂಟಸ್ ತಂಡ ಐಸೋಲೇಷನ್‌ಗೆ ಒಳಗಾಗಿತ್ತು.