ನ್ಯೂಯಾರ್ಕ್(ಸೆ.11): ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಜಪಾನ್‌ನ ನವೊಮಿ ಒಸಾಕ ಅನಾಯಾಸವಾಗಿ ಫೈನಲ್ ಪ್ರವೇಶಿಸಿದ್ದಾರೆ. ಅಮೆ​ರಿ​ಕದ ಜೆನಿ​ಫರ್‌ ಬ್ರಾಡಿ ವಿರುದ್ಧ ಸುಲಭ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ನವೊಮಿ ಒಸಾಕ ಯುಎಸ್ ಓಪನ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ನವೊಮಿ 7-6(1), 3-6 ಹಾಗೂ 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ.

ಇನ್ನು ಗುರುವಾರ ನಡೆದ ಪಂದ್ಯದಲ್ಲಿ ದಾಖಲೆಯ 24ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿ​ರುವ ಅಮೆ​ರಿಕದ ಸೆರೆನಾ ವಿಲಿ​ಯಮ್ಸ್‌, ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ನ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿ​ದ್ದಾರೆ. 

ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಬಲ್ಗೇ​ರಿ​ಯಾದ ಪಿರೊ​ನ್ಕೋವಾ ವಿರುದ್ಧ 4-6, 6-3, 6-2 ಸೆಟ್‌ಗಳಲ್ಲಿ ಜಯ​ಗ​ಳಿಸಿ ಸೆಮೀಸ್‌ಗೇರಿ​ದರು. ಪುರು​ಷರ ಹಾಗೂ ಮಹಿಳಾ ಸಿಂಗಲ್ಸ್‌ ಎರ​ಡೂ ವಿಭಾ​ಗಗಳಲ್ಲಿ ಸೆಮಿ​ಫೈ​ನಲ್‌ ಮುಖಾ​ಮುಖಿ ಅಂತಿ​ಮ​ಗೊಂಡಿದೆ. 

ಯುಎಸ್ ಓಪನ್: ಒಸಾಕ, ಜ್ವರೆವಾ ಸೆಮಿಫೈನಲ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್‌ನಲ್ಲಿ ಡೊಮಿ​ನಿಕ್‌ ಥೀಮ್‌ಗೆ ರಷ್ಯಾದ ಡೆನಿಲ್‌ ಮೆಡ್ವೆ​ಡೆವ್‌ ಎದು​ರಾಳಿಯಾದರೆ, ಸ್ಪೇನ್‌ನ ಕರ್ರೆನೊ ಬುಸ್ಟಾ ವಿರುದ್ಧ ಜರ್ಮ​ನಿಯ ಅಲೆ​ಕ್ಸಾಂಡರ್‌ ಜ್ವೆರೆವ್‌ ಸೆಣ​ಸ​ಲಿದ್ದಾರೆ. ಮಹಿಳಾ ಸಿಂಗಲ್ಸ್‌ ಸೆಮೀಸ್‌ನಲ್ಲಿ ಸೆರೆ​ನಾಗೆ ಬೆಲಾ​ರುಸ್‌ನ ವಿಕ್ಟೋ​ರಿಯಾ ಅಜ​ರೆಂಕಾ ಎದು​ರಿಸಲಿದ್ದಾರೆ.