* ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ರಾಹಿ ಸರ್ನೋಬಾತ್‌ * ಕ್ರೊವೇಷಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌* 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ರಾಹಿ ಸರ್ನೋಬಾತ್‌ 

ಒಸಿಯಾಕ್(ಜೂ.29)‌: ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಯಾಡುವ ಹುಮ್ಮಸ್ಸಿನಲ್ಲಿರುವ ಭಾರತದ ರಾಹಿ ಸರ್ನೋಬಾತ್‌ ಕ್ರೊವೇಷಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಹೊಡೆದಿದ್ದಾರೆ.

ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಒಂದು ಬೆಳ್ಳಿ, ಎರಡು ಕಂಚಿನ ಪದಕ ಗೆದ್ದಿರುವ ಭಾರತಕ್ಕಿದು ಮೊದಲ ಚಿನ್ನ. ಇದೇ ಸ್ಪರ್ಧೆಯಲ್ಲಿ ಯುವ ಶೂಟರ್‌ ಮನು ಭಾಕರ್‌ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Scroll to load tweet…

ದೀಪಿಕಾ ಕುಮಾರಿ ಈಗ ವಿಶ್ವದ ನಂ.1 ರ‍್ಯಾಂಕಿಂಗ್‌ ಬಿಲ್ಗಾರ್ತಿ

ಪ್ಯಾರಿಸ್‌: ಮೊನ್ನೆಯಷ್ಟೇ ಮುಗಿದ ವಿಶ್ವಕಪ್‌ ಸ್ಟೇಜ್‌-3 ಬಿಲ್ಗಾರಿಕೆಯಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕಗಳನ್ನು ಕಬಳಿಸಿದ ಭಾರತದ ತಾರಾ ಬಿಲ್ಗಾರ್ತಿ ದೀಪಿಕಾ ಕುಮಾರಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 

ಆರ್ಚರಿ ವಿಶ್ವಕಪ್‌: 3 ಚಿನ್ನ ಗೆದ್ದ ದೀಪಿಕಾ ಕುಮಾರಿ!

2012ರಲ್ಲಿ ಮೊತ್ತಮೊದಲ ಬಾರಿಗೆ ವಿಶ್ವದ ನಂ.1 ಬಿಲ್ಗಾರ್ತಿ ಎನಿಸಿಕೊಂಡಿದ್ದ 27 ವರ್ಷದ ದೀಪಿಕಾ, ವಿಶ್ವಕಪ್‌ನ 3 ರಿಕರ್ವ್ ವಿಭಾಗದಲ್ಲಿ ಮಹಿಳಾ ವೈಯಕ್ತಿಕ, ತಂಡ ಹಾಗೂ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.