ಆರ್ಚರಿ ವಿಶ್ವಕಪ್‌: 3 ಚಿನ್ನ ಗೆದ್ದ ದೀಪಿಕಾ ಕುಮಾರಿ!

*  ಆರ್ಚರಿ ವಿಶ್ವಕಪ್‌ ಸ್ಟೇಜ್‌ 3ನಲ್ಲಿ 3 ಚಿನ್ನದ ಪದಕಗಳಿಗೆ ಗುರಿಯಿಟ್ಟ ದೀಪಿಕಾ ಕುಮಾರಿ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ದೀಪಿಕಾ

* ಆರ್ಚರಿ ವಿಶ್ವಕಪ್ ಇತಿಹಾಸದಲ್ಲಿ ದೀಪಿಕಾ ಒಟ್ಟು 9 ಚಿನ್ನ, 12 ಬೆಳ್ಳಿ ಹಾಗೂ 7 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.

Deepika Kumari win Triple Gold At Archery World Cup Stage 3 In Paris kvn

ಪ್ಯಾರಿಸ್‌(ಜೂ.28): ಭಾರತದ ತಾರಾ ಆರ್ಚರಿ ಪಟು ದೀಪಿಕಾ ಕುಮಾರಿ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಸ್ಟೇಜ್‌ 3ನಲ್ಲಿ ಭಾನುವಾರ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಟೂರ್ನಿಯಲ್ಲಿ ಭಾರತ 4 ಚಿನ್ನದ ಪದಕ ಜಯಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಭಾರತದ ಆರ್ಚರ್‌ಗಳು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಮಹಿಳೆಯರ ವೈಯಕ್ತಿಕ ರೀಕರ್ವ್ ವಿಭಾಗದ ಫೈನಲ್‌ನಲ್ಲಿ 27 ವರ್ಷದ ರಾಂಚಿ ಮೂಲದ ದೀಪಿಕಾ ರಷ್ಯಾದ ಎಲೆನಾ ಒಸಿಪೊವಾ ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಮಹಿಳೆಯರ ರೀಕರ್ವ್ ವಿಭಾಗದಲ್ಲಿ ದೀಪಿಕಾ, ಅಂಕಿತಾ ಹಾಗೂ ಕೋಮಾಲಿಕಾ ಅವರನ್ನೊಳಗೊಂಡ ತಂಡ ಚಿನ್ನ ಗೆದ್ದರೆ, ಮಿಶ್ರ ವಿಭಾಗದಲ್ಲಿ ತಮ್ಮ ಪತಿ ಅತನು ದಾಸ್‌ ಜೊತೆ ಸೇರಿ ದೀಪಿಕಾ ಸ್ವರ್ಣಕ್ಕೆ ಗುರಿಯಿಟ್ಟರು.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ ಬಹುಮಾನ: ತಮಿಳುನಾಡು ಸಿಎಂ ಸ್ಟಾಲಿನ್‌

ಆರ್ಚರಿ ವಿಶ್ವಕಪ್ ಇತಿಹಾಸದಲ್ಲಿ ದೀಪಿಕಾ ಕುಮಾರಿ ಇದುವರೆಗೂ 9 ಚಿನ್ನ, 12 ಬೆಳ್ಳಿ ಹಾಗೂ 7 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ. ಸದ್ಯ ನಂ.1 ಶ್ರೇಯಾಂಕ್ಕೇರಿರುವ ದೀಪಿಕಾ ಕುಮಾರಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಲಿ ಎನ್ನುವುದು ಕೋಟ್ಯಾಂತರ ದೇಶವಾಸಿಗಳ ಹಾರೈಕೆಯಾಗಿದೆ. ಶನಿವಾರ ರಾತ್ರಿ ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಅಭಿಷೇಕ್‌ ವರ್ಮಾ ಚಿನ್ನದ ಪದಕ ಗೆದ್ದಿದ್ದರು.

Latest Videos
Follow Us:
Download App:
  • android
  • ios