ಐಎಸ್‌ಎಸ್‌ಎಫ್‌ ಶೂಟರ್‌ಗಳ ಪದಕ ಭೇಟೆ ಮುಂದುವರೆದಿದ್ದು, ಒಟ್ಟು 25 ಪದಕಗಳೊಂದಿಗೆ ಭಾರತ ಪದತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.27): ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆದರೆ 16ನೇ ಒಲಿಂಪಿಕ್‌ ಕೋಟಾ ಗಳಿಸುವಲ್ಲಿ ಭಾರತೀಯ ಶೂಟರ್‌ಗಳು ವಿಫಲರಾಗಿದ್ದಾರೆ. 

ಶುಕ್ರವಾರ ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ನೀರಜ್‌ ಕುಮಾರ್‌, ಸ್ವಪ್ನಿಲ್‌ ಹಾಗೂ ಚೈನ್‌ ಸಿಂಗ್‌ ಅವರಿದ್ದ ಭಾರತ ತಂಡ ಚಿನ್ನ ಜಯಿಸಿತು. 50 ಮೀ. ರೈಫಲ್‌ 3 ಪೊಸಿಷನ್‌ ಮಿಶ್ರ ತಂಡ ವಿಭಾಗದಲ್ಲಿ ಹಿರಿಯ ಶೂಟರ್‌ಗಳಾದ ತೇಜಸ್ವಿನಿ ಸಾವಂತ್‌ ಹಾಗೂ ಸಂಜೀವ್‌ ರಜಪೂತ್‌ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದರು. ಇದೇ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್‌ ಹಾಗೂ ಸುನಿಧಿ ಚೌವ್ಹಾಣ್‌ ಕಂಚಿನ ಪದಕ ಗೆದ್ದರು.

Scroll to load tweet…

25 ಮೀ. ರಾರ‍ಯಪಿಡ್‌ ಫೈಯರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ವಿಜಯ್‌ವೀರ್‌ಗೆ ಬೆಳ್ಳಿ ಪದಕಕ್ಕೆ ಕೊರೊಳ್ಳೊಡಿದರು. ಟೂರ್ನಿಯಲ್ಲಿ ಭಾರತ 12 ಚಿನ್ನ, 7 ಬೆಳ್ಳಿ ಹಾಗೂ 6 ಕಂಚಿನೊಂದಿಗೆ ಒಟ್ಟು 25 ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆರಡು ಪದಕ

ಪುರುಷರ ಟ್ರ್ಯಾಪ್‌ ಫೈನಲ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಕೈನಾನ್‌ ಚೆನೈ, ರಾರ‍ಯಪಿಡ್‌ ಫೈಯರ್‌ ಸ್ಪರ್ಧೆಯ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಅನೀಶ್‌ ಭನವಾಲಾ ಹಾಗೂ ಗುರ್‌ಪ್ರೀತ್‌ ಸಿಂಗ್‌ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.