ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಮತ್ತೆರಡು ಪದಕ
ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ಗಳ ಪದಕದ ಭೇಟೆ ಲೀಲಾಜಾಲವಾಗಿ ಮುನ್ನಡೆದಿದ್ದು, ಗುರುವಾರ(ಮಾ.26) ಮತ್ತೆರಡು ಪದಕಗಳು ಭಾರತದ ಪಾಲಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮಾ.26): ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.
ಗುರುವಾರ ಮಹಿಳೆಯರ 25 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ತಂಡ ಚಿನ್ನದ ಪದಕ ಜಯಿಸಿತು. ಬುಧವಾರ ವೈಯಕ್ತಿಕ ವಿಭಾಗದಲ್ಲಿ ಪದಕ ಕ್ಲೀನ್ ಸ್ವೀಪ್ ಮಾಡಿದ್ದ ಚಿಂಕಿ ಯಾದವ್, ರಾಹಿ ಸರ್ನೊಬತ್ ಹಾಗೂ ಮನು ಭಾಕರ್, ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಪೋಲೆಂಡ್ ವಿರುದ್ಧ ಭಾರತ 17-7ರಲ್ಲಿ ಗೆಲುವು ಸಾಧಿಸಿತು.
ಶೂಟಿಂಗ್ ವಿಶ್ವಕಪ್: ಗನೀಮತ್-ಅಂಗದ್ ಜೋಡಿಗೆ ಚಿನ್ನದ ಪದಕ
ಇದಕ್ಕೂ ಮುನ್ನ, ಮಹಿಳೆಯರ 50 ಮೀ. ಏರ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಜಯಿಸಿತು. ಅಂಜುಮ್ ಮೌದ್ಗಿಲ್, ಶ್ರೇಯಾ ಸಕ್ಸೇನಾ ಹಾಗೂ ಗಾಯತ್ರಿ ನಿತ್ಯಾನಂದಮ್ ಅವರಿದ್ದ ತಂಡ ಫೈನಲ್‌ನಲ್ಲಿ ಪೋಲೆಂಡ್ ವಿರುದ್ಧ ಸೋಲು ಕಂಡಿತು. ಟೂರ್ನಿಯಲ್ಲಿ ಭಾರತ 10 ಚಿನ್ನ, 6 ಬೆಳ್ಳಿ, 5 ಕಂಚು (ಒಟ್ಟು 21 ಪದಕ) ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 6 ಪದಕಗಳನ್ನು ಗೆದ್ದಿರುವ ಅಮೆರಿಕ 2ನೇ ಸ್ಥಾನದಲ್ಲಿದೆ.