Paris Olympics 2024 ಕೂಟಕ್ಕೆ ಅರ್ಹತೆ ಪಡೆದ ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ..!
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಶೂಟರ್ ಸ್ವಪ್ನಿಲ್ ಕುಸಾಲೆ
ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್ 4ನೇ ಸ್ಥಾನ
ರುದ್ರಾಂಕ್‌್ಷ ಪಾಟೀಲ್, ಭೌನೀಶ್ ಮೆಂಡಿರಟ್ಟಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ
ಕೈರೋ(ಅ.23): ಭಾರತದ ತಾರಾ ಶೂಟರ್ ಸ್ವಪ್ನಿಲ್ ಕುಸಾಲೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕೈರೋದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್ 4ನೇ ಸ್ಥಾನ ಪಡೆದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಮೂಲಕ ಒಲಿಂಪಿಕ್ಸ್‌ಗೆ ನಿರ್ಧಾರವಾಗುವ 4 ಸ್ಥಾನಗಳ ಪೈಕಿ 3ನೇ ಸ್ಥಾನವನ್ನು ಅವರು ತಮ್ಮದಾಗಿಸಿಕೊಂಡರು.
ಕೂಟದಲ್ಲಿ ಕಳೆದ ವಾರ 10 ಮೀ. ಏರ್‌ರೈಫಲ್‌ನಲ್ಲಿ ಸ್ವರ್ಣ ಜಯಿಸಿದ್ದ ರುದ್ರಾಂಕ್‌್ಷ ಪಾಟೀಲ್, ಕಳೆದ ತಿಂಗಳು ಕ್ರೊವೇಷಿಯಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನ ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಭೌನೀಶ್ ಮೆಂಡಿರಟ್ಟಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.
ಡೆನ್ಮಾರ್ಕ್ ಓಪನ್ 2022: ಲಕ್ಷ್ಯ ಸೇನ್ ಸವಾಲು ಕ್ವಾರ್ಟರಲ್ಲಿ ಅಂತ್ಯ
ಒಡೆನ್ಸೆ(ಡೆನ್ಮಾರ್ಕ್): ತಾರಾ ಶಟ್ಲರ್ ಲಕ್ಷ್ಯ ಸೇನ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಸೋಲು ಅನುಭವಿಸಿದ ಪರಿಣಾಮ ಟೂರ್ನಿಯಲ್ಲಿ ಭಾರತದ ಹೋರಾಟ ಕೊನೆಗೊಂಡಿದೆ. ಪ್ರಿ ಕ್ವಾರ್ಟರ್‌ನಲ್ಲಿ ಭಾರತದವರೇ ಆದ ಎಚ್.ಎಸ್.ಪ್ರಣಯ್‌ಗೆ ಸೋಲುಣಿಸಿದ್ದ ವಿಶ್ವ ನಂ.8 ಸೇನ್ ಶುಕ್ರವಾರ ರಾತ್ರಿ ಪುರುಷರ ಸಿಂಗಲ್ಸ್ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಜಪಾನಿನ ಕೊಡಾಯ್ ನರವೊಕಾ ವಿರುದ್ಧ 17-21, 12-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 2018ರ ಯುವ ಒಲಿಂಪಿಕ್ಸ್ ಕಂಚು ವಿಜೇತ ನರವೊಕಾ ಇದರೊಂದಿಗೆ ಸೇನ್ ವಿರುದ್ಧದ ಗೆಲುವಿನ ದಾಖಲೆಯನ್ನು 3-1ಕ್ಕೆ ಏರಿಸಿಕೊಂಡರು.
ಜೋಹರ್ ಕಪ್: ಭಾರತಕ್ಕೆ ಮಲೇಷ್ಯಾ ವಿರುದ್ಧ ಜಯ
ಜೋಹರ್ ಬಹ್ರು(ಮಲೇಷ್ಯಾ): ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಭಾರತ, ಮಲೇಷ್ಯಾ ವಿರುದ್ಧ 5-2 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿದೆ. ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ ಮೊದಲ 10 ನಿಮಿಷಗಳಲ್ಲೇ 2 ಗೋಲು ಬಾರಿಸಿತು. ಅಮನ್‌ದೀಪ್, ಅರ್ಜೀತ್ ಸಿಂಗ್ ಆರಂಭಿಕ ಮೇಲುಗೈಗೆ ಕಾರಣರಾದರು. ಬಳಿಕ ಬಾಬಿ ಸಿಂಗ್(20ನೇ ನಿಮಿಷ), ಸುದೀಪ್(26ನೇ ನಿ.), ಶಾರ್ದಾ ತಿವಾರಿ(56ನೇ ನಿ.) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ ಭಾನುವಾರ 2ನೇ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ಆಡಲಿದೆ.
Pro Kabaddi League ಸೆಕೆಂಡ್ ಹಾಫ್‌ನಲ್ಲಿ ಪಂದ್ಯದ ಗತಿ ಬದಲು, ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಗೆಲುವು!
ಐಎಸ್‌ಎಲ್: ಹೈದ್ರಾಬಾದ್ ವಿರುದ್ಧ ಸೋತ ಬಿಎಫ್‌ಸಿ
ಹೈದರಾಬಾದ್: ಐಎಸ್‌ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಮೊದಲ ಸೋಲು ಅನುಭವಿಸಿದೆ. ಶನಿವಾರ ಹಾಲಿ ಚಾಂಪಿಯನ್ ಹೈದರಾಬಾದ್ ಎಫ್‌ಸಿ ವಿರುದ್ಧ ಬಿಎಫ್‌ಸಿ 0-1 ಗೋಲುಗಳಿಂದ ಪರಾಭವಗೊಂಡಿತು. ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂತು. ಆದರೆ 83ನೇ ನಿಮಿಷದಲ್ಲಿ ಬಾರ್ತೊಲೊಮೆವ್ ಬಾರಿಸಿದ ಗೋಲು ಹೈದರಾಬಾದ್‌ಗೆ ಗೆಲುವು ತಂದುಕೊಟ್ಟಿತು. ಹೈದರಾಬಾದ್ 7 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿರುವ ಬಿಎಫ್‌ಸಿ 4ನೇ ಸ್ಥಾನದಲ್ಲಿದೆ.