Pro Kabaddi League ಸೆಕೆಂಡ್ ಹಾಫ್‌ನಲ್ಲಿ ಪಂದ್ಯದ ಗತಿ ಬದಲು, ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಗೆಲುವು!
ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಬುಲ್ಸ್, ಸೆಕೆಂಡ್ ಹಾಫ್‌ನಲ್ಲಿ ಅತ್ಯುತ್ತಮ ಹೋರಾಟ ನೀಡುವ ಮೂಲಕ ಪಂದ್ಯವನ್ನೇ ಗೆದ್ದುಕೊಂಡಿದೆ. ಈ ಮೂಲಕ ಬುಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದೆ.
ಬೆಂಗಳೂರು(ಅ.22): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ರೋಚಕ ಹೋರಾಟ ಬೆಂಗಳೂರು ಬುಲ್ಸ್ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಬುಲ್ಸ್, ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್‌ಬ್ಯಾಕ್ ಮೂಲಕ ಯು ಮುಂಬಾಗೆ ಶಾಕ್ ನೀಡಿದೆ. ಮೊದಲಾರ್ಧದಲ್ಲಿ 11-24 ಅಂತರದಲ್ಲಿ ಹಿನ್ನಡೆ ಕಂಡಿದ್ದ ಬೆಂಗಳೂರು ಬುಲ್ಸ್ ದ್ವಿತಿಯಾರ್ಧದಲ್ಲಿ ತನ್ನ ನೈಜ ಸಾಮರ್ಥ್ಯವನ್ನು ತೋರಿ ಯು ಮುಂಬಾ ವಿರುದ್ಧ 42-32 ಅಂತರದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಬೆಂಗಳೂರು ಬುಲ್ಸ್ ಪರ ಭರತ್ ರೈಡಿಂಗ್‌ನಲ್ಲಿ 16 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಶ್ ಕಂಡೋಲ 8 ಅಂಕಗಳನ್ನು ಗಳಿಸಿ ಅದ್ಭುತ ಜಯದಲ್ಲಿ ನೆರವಾದರು. ದ್ವಿತಿಯಾರ್ಧದಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ಬೆಂಗಳೂರು ಬುಲ್ಸ್ ಆರಂಭದಲ್ಲೇ ಯು ಮುಂಬಾ ತಂಡವನ್ನು ಆಲೌಟ್ ಮಾಡಿ 21 ಅಂಕಗಳೊಂದಿಗೆ ಸವಾಲು ಮುಂದುವರಿಸಿತು.
ರೈಡಿಂಗ್‌ನಲ್ಲಿ ಭರತ್ 12 ಅಂಕಗಳನ್ನು ಗಳಿಸಿ ಸೂಪರ್ ಟೆನ್ ಸಾಧನೆ ಮಾಡಿದರು. 11 ನಿಮಿಷಗಳ ಪಂದ್ಯ ಬಾಕಿ ಇರುವಾಗ ಬೆಂಗಳೂರು ಎರಡನೇ ಬಾರಿ ಯು ಮುಂಬಾ ತಂಡವನ್ನು ಆಲೌಟ್ ಮಾಡಿ 29-27ರಲ್ಲಿ ಮುನ್ನಡೆ ಕಂಡಿತು. 10 ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್ 18 ಅಂಕಗಳನ್ನು ಗಳಿಸಿ ತಕ್ಕ ತಿರುಗೇಟು ನೀಡಿತು. ಈ ಸಂದರ್ಭ ಭರತ್ ರೈಡಿಂಗ್‌ನಲ್ಲಿ 14 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ದ್ವಿತಿಯಾರ್ಧಲ್ಲಿ ಬೆಂಗಳೂರು ಬುಲ್ಸ್ ಮೂರನೇ ಬಾರಿಗೆ ಯು ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಜಯ ಖಚಿತಪಡಿಸಿಕೊಂಡಿತು. ಭರತ್ 16 ರೈಡಿಂಗ್ ಅಂಕಗಳನ್ನು ಗಳಿಸುವುದರೊಂದಿಗೆ ಬೆಂಗಳೂರು ಬುಲ್ಸ್ 42-32 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಯು ಮುಂಬಾ ಪರ ಗುಮಾನ್ ಸಿಂಗ್ 11 ಅಂಕಗಳನ್ನು ಗಳಿಸಿದರು.
Pro kabaddi League ಯುಪಿ ಯೋಧಾಸ್ ಠಕ್ಕರ್‌ಗೆ ಗುಜರಾತ್ ಜೈಂಟ್ಸ್ ಪಂಚರ್!
ಯು ಮುಂಬಾ ಬೃಹತ್ ಮುನ್ನಡೆ: ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಯು ಮುಂಬಾ ಮೊದಲಾರ್ಧದಲ್ಲಿ 24-11 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ರೈಡಿಂಗ್‌ನಲ್ಲಿ ಗುಮಾನ್ ಸಿಂಗ್ 7 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಯು ಮುಂಬಾ ತಂಡದ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿರುವುದು ಪಂದ್ಯದ ವಿಶೇಷವಾಗಿತ್ತು. ಲೆಫ್ಟ್ ಕಾರ್ನರ್‌ನಲ್ಲಿ ಮೋಹಿತ್ ಹಾಗೂ ಸುರಿಂದರ್ ಸಿಂಗ್ ಒಟ್ಟು 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ರೈಟ್ ಕಾರ್ನರ್‌ನಲ್ಲಿ ರಾಹುಲ್ ಸತ್ಪಾಲ್ 3 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್ ತಂಡವನ್ನು ನಿಯಂತ್ರಿಸುವಲ್ಲಿ ಸಫಲರಾದರು.
ಬೆಂಗಳೂರು ಬುಲ್ಸ್ ರೈಡಿಂಗ್‌ನಲ್ಲಿ ಕೇವಲ 9 ಅಂಕಗಳನ್ನು ಗಳಿಸಿತು. ಎರಡು ಬಾರಿ ಆಲೌಟ್ ಆಗುವ ಮೂಲಕ ಬೆಂಗಳೂರು ಬೃಹತ್ ಹಿನ್ನಡೆಗೆ ಕಾರಣವಾಯಿತು. ಟ್ಯಾಕಲ್ ವಿಭಾಗದಲ್ಲಿ ಬೆಂಗಳೂರು ಸಂಪೂರ್ಣವಿಫಲಗೊಂಡು ಕೇವಲ 2 ಅಂಕಗಳನ್ನು ಗಳಿಸಿತು.
PKL ಪುಣೇರಿ ಮುಂದೆ ತೆಲುಗು ಟೈಟಾನ್ಸ್ ಪಲ್ಟಿ, ಪಿಂಕ್ ಪ್ಯಾಂಥರ್ಸ್ ಅಬ್ಬರಕ್ಕೆ ತಲೆಬಾಗಿದ ಬೆಂಗಾಲ್!