ನವದೆಹಲಿ(ಮಾ.28): ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಶನಿವಾರ ಸಹ ಒಂದು ಚಿನ್ನದ ಪದಕವನ್ನು ಬೇಟೆಯಾಡಿದೆ.

ಭಾರತೀಯ ಶೂಟರ್‌ಗಳಾದ ವಿಜಯವೀರ್‌ ಸಿಧು ಮತ್ತು ತೇಜಸ್ವಿನಿ ಐಎಸ್‌ಎಸ್‌ಎಫ್‌ ವಿಶ್ವಕಪ್‌ 25 ಮೀಟರ್‌ ರ‍್ಯಾಪಿಡ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಗೆದ್ದು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿರುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. 

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೆ 4 ಪದಕ

ಡಾ.ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಸಿಧು ಮತ್ತು ತೇಜಸ್ವಿನಿ ಅವರು ಭಾರತೀಯರೇ ಆದ ಗುರುಪ್ರೀತ್‌ ಸಿಂಗ್‌ ಮತ್ತು ಅಶೋಕ್‌ ಅಭಿಂದ್ಯಾ ಪಾಟೀಲ್‌ ಅವರನ್ನು 9-1 ಅಂತರದಲ್ಲಿ ಸೋಲಿಸಿದರು. ಶುಕ್ರವಾರ ನಡೆದ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಧು ಬೆಳ್ಳಿ ಗೆದ್ದುಕೊಂಡಿದ್ದರು. ಇದೀಗ ಇನ್ನೊಂದು ಸ್ವರ್ಣಗೆದ್ದು ಸಂಭ್ರಮಿಸಿದ್ದಾರೆ. ಭಾರತ ಈ ವಿಶ್ವಕಪ್‌ ಪದಕ ಪಟ್ಟಿಯಲ್ಲಿ ಒಟ್ಟು 13 ಸ್ವರ್ಣ ಗೆದ್ದು ಅಗ್ರ ಸ್ಥಾನದಲ್ಲಿದೆ.