* ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಒಲಿದ 4ನೇ ಚಿನ್ನ* ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಮನು ಭಾಕರ್* ಐಎಸ್‌ಎಸ್‌ಎಫ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಲಿಮಾ(ಅ.04): ವಿಶ್ವ ಜೂನಿಯರ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ (ISSF Junior World Championship) ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಿದ್ದು, ಕೂಟದ 3ನೇ ದಿನವಾದ ಭಾನುವಾರ ನಾಲ್ಕು ಚಿನ್ನ ಸೇರಿ 6 ಪದಕ ಜಯಿಸಿದೆ. ಇದರೊಂದಿಗೆ ಒಟ್ಟು 6 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 14 ಪದಕಗಳ ಸಹಿತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಮನು ಭಾಕರ್‌ (Manu Bhaker) ಮತ್ತೆರಡು ಬಂಗಾರ ಗೆಲ್ಲುವ ಮೂಲಕ ಸ್ವರ್ಣ ಪದಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸರಬ್‌ಜೋತ್‌ ಸಿಂಗ್‌ ಜೊತೆ ಚಿನ್ನ ಗೆದ್ದ ಭಾಕರ್‌, ಬಳಿಕ ರಿಧಮ್‌ ಸಂಗ್ವಾನ್‌ ಹಾಗೂ ಶಿಖಾ ನರ್ವಾಲ್‌ ಜೊತೆ 10 ಮೀಟರ್ ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಚಿನ್ನಕ್ಕೆ ಕೊರಲೊಡ್ಡಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಮನು ಭಾಕರ್ ಇದೀಗ ಮತ್ತೊಮ್ಮೆ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. 

Scroll to load tweet…
Scroll to load tweet…

ಪುರುಷರ ತಂಡ ವಿಭಾಗದಲ್ಲಿ ನವೀನ್‌, ಸರಬ್‌ಜೋತ್‌ ಹಾಗೂ ಶಿವ ನರ್ವಾಲ್‌ ಬೆಲಾರಸ್‌ ತಂಡದ ವಿರುದ್ಧ ಚಿನ್ನಕ್ಕೆ ಗುರಿಯಿಟ್ಟರು. ಇದಕ್ಕೂ ಮೊದಲು 10 ಮೀ. ಏರ್‌ ರೈಫಲ್‌ ಪುರುಷರ ತಂಡ ವಿಭಾಗದಲ್ಲಿ ಶ್ರೀಕಾಂತ್‌ ಧನುಷ್‌, ರಜ್‌ಪ್ರೀತ್‌ ಸಿಂಗ್‌, ಪಾರ್ಥ್ ಮಖೀಜಾ ಅವರನ್ನೊಳಗೊಂಡ ತಂಡ ಚಿನ್ನ ಗೆದ್ದಿತ್ತು.

Scroll to load tweet…

ISSF ಜೂನಿಯರ್‌ ಶೂಟಿಂಗ್‌: ಮನು ಭಾಕರ್‌ಗೆ 2ನೇ ಚಿನ್ನ

10 ಮೀ. ಏರ್‌ ರೈಫಲ್‌ ಮಹಿಳಾ ತಂಡ ವಿಭಾಗದಲ್ಲಿ ನಿಶಾ ಕನ್ವಾರ್‌, ಝೀನಾ ಕಿಟ್ಟಾ, ಅತ್ಮಿಕಾ ಗುಪ್ತಾ ತಂಡ ಹಂಗೇರಿಯಾದ ವಿರುದ್ಧ 2ನೇ ಸ್ಥಾನ ಪಡೆದು ಬೆಳ್ಳಿ ಪಡೆಯಿತು. ದಿನದ ಆರಂಭದಲ್ಲಿ ಅತ್ಮಿಕಾ 10 ಮೀಟರ್ ಏರ್‌ ರೈಫಲ್‌ ಮಿಶ್ರ ತಂಡದಲ್ಲಿ ರಜ್‌ಪ್ರೀತ್‌ ಜೊತೆ ಬೆಳ್ಳಿ ಗೆದ್ದಿದ್ದರು.

ಇನ್ನು ಅಮೆರಿಕ(ಯುಎಸ್‌ಎ) ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.