Asianet Suvarna News Asianet Suvarna News

ISSF ವಿಶ್ವ ಕಿರಿಯರ ಶೂಟಿಂಗ್‌: 40 ಪದಕ ಗೆದ್ದ ಭಾರತ!

* ISSF ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 40 ಪದಕ ಗೆದ್ದ ಭಾರತ

* ಕ್ರೀಡಾಕೂಟದಲ್ಲಿ ಅತಿಹೆಚ್ಚು ಪದಕ ಗೆದ್ದು ನಂ.1 ಸ್ಥಾನದೊಂದಿಗೆ ಅಭಿಯಾನ ಮುಕ್ತಾಯ

* 4 ಚಿನ್ನ ಸೇರಿ ಒಟ್ಟು 5 ಪದಕ ಗೆದ್ದ ಮನು ಭಾಕರ್

ISSF Junior World Championship India Bags All Medals On Final Day finishes with 40 Medals kvn
Author
Lima, First Published Oct 11, 2021, 8:22 AM IST

ಲಿಮಾ(ಅ.11): ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ (ISSF Junior World Championship) ನಲ್ಲಿ ಭಾರತ 16 ಚಿನ್ನದ ಪದಕ ಸೇರಿ ಒಟ್ಟು 40 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಟೂರ್ನಿಯ ಅಂತಿಮ ದಿನವಾದ ಶನಿವಾರ ಎಲ್ಲಾ 4 ವಿಭಾಗಗಳಲ್ಲೂ ಭಾರತದ ಶೂಟರ್‌ಗಳು ಪದಕ ಕ್ಲೀನ್‌ಸ್ವೀಪ್‌ ಮಾಡಿದರು.

25 ಮೀಟರ್ ಸ್ಟಾಂಡರ್ಡ್‌ ಪಿಸ್ತೂಲ್‌ನ ಪುರುಷ ಹಾಗೂ ಮಹಿಳಾ ವಿಭಾಗ, 50 ಮೀಟರ್ ಪಿಸ್ತೂಲ್‌ ಸ್ಪರ್ಧೆಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಎಲ್ಲಾ ಪದಕ ಭಾರತದ ಪಾಲಾಯಿತು. ಟೂರ್ನಿಯಲ್ಲಿ ಸ್ಪರ್ಧಿಸಿದ ಎಲ್ಲಾ 5 ವಿಭಾಗದಲ್ಲೂ ಮನು ಭಾಕರ್‌ (Manu Bhaker) ಪದಕ ಗೆದ್ದು ದಾಖಲೆ ಬರೆದರು.  ಮನು ಭಾಕರ್ 4 ಚಿನ್ನ, 1 ಕಂಚು ಜಯಿಸಿದರು. ಈ ಮೂಲಕ  ಐಎಸ್‌ಎಸ್‌ಎಫ್‌ ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 5 ಪದಕ ಗೆದ್ದ ಭಾರತದ ಮೊದಲ ಶೂಟರ್ ಎನ್ನುವ ಕೀರ್ತಿ ಮನು ಭಾಕರ್ ಪಾಲಾಗಿದೆ.

ISSF ಕಿರಿಯರ ಶೂಟಿಂಗ್ ವಿಶ್ವಕಪ್‌: ಭಾರತ ಭರ್ಜರಿ ಪದಕ ಬೇಟೆ

16 ಚಿನ್ನ, 15 ಬೆಳ್ಳಿ, 9 ಕಂಚು ಸೇರಿ ಒಟ್ಟು 40 ಪದಕ ಗೆದ್ದ ಭಾರತ ಅಗ್ರಸ್ಥಾನ ಪಡೆದರೆ, ಅಮೆರಿಕ 21 ಪದಕದೊಂದಿಗೆ 2ನೇ ಸ್ಥಾನಿಯಾಯಿತು. 2017ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಭಾರತ 4 ಚಿನ್ನ ಸೇರಿ 10 ಪದಕ ಗೆದ್ದಿತ್ತು.

ಸ್ಯಾಫ್‌ ಕಪ್‌: ಭಾರತಕ್ಕೆ ಮೊದಲ ಜಯ

ಮಾಲೆ: ಸ್ಯಾಫ್‌ ಕಪ್‌ ಫುಟ್ಬಾಲ್‌ (Football) ಟೂರ್ನಿಯ ಫೈನಲ್‌ ಪ್ರವೇಶಿಸುವ ಆಸೆಯನ್ನು ಭಾರತ ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಜಯಿಸಿತು. 

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ಮೊದಲ ಗೆಲುವು ದಾಖಲಿಸಿತು. ನಾಯಕ ಸುನಿಲ್‌ ಚೆಟ್ರಿ (Sunil Chhetri) 82ನೇ ನಿಮಿಷದಲ್ಲಿ ಬಾರಿಸಿದ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು. 3 ಪಂದ್ಯಗಳಿಂದ 5 ಅಂಕ ಕಲೆಹಾಕಿರುವ ಭಾರತ, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅ.13ರಂದು ಅಂತಿಮ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್‌ ವಿರುದ್ಧ ಆಡಲಿರುವ ಭಾರತ, ಗೆದ್ದರಷ್ಟೇ ಫೈನಲ್‌ಗೇರಲಿದೆ.

ಉಬರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ತಂಡ ಶುಭಾರಂಭ

ಆರ್ಹಸ್‌(ಡೆನ್ಮಾರ್ಕ್): ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ (Saina Nehwal) ಗಾಯಗೊಂಡು ಪಂದ್ಯದಿಂದ ನಿವೃತ್ತಿ ಪಡೆದ ಹೊರತಾಗಿಯೂ ಭಾರತ ತಂಡ ಉಬರ್‌ ಕಪ್‌ನಲ್ಲಿ ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದೆ. ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸ್ಪೇನ್‌ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿತು. ಮೊದಲ ಪಂದ್ಯದ ಮೊದಲ ಗೇಮ್‌ನಲ್ಲಿ ಸೈನಾ, ಕ್ಲಾರಾ ಅಜುರ್‌ಮೆಂಡಿ ವಿರುದ್ಧ 20-22ರಲ್ಲಿ ಸೋತು ನಿವೃತ್ತಿ ಪಡೆದರು.

ಬಳಿಕ 2ನೇ ಸಿಂಗಲ್ಸ್‌ ಪಂದ್ಯದಲ್ಲಿ ಮಾಳ್ವಿಕಾ ಬನ್ಸೋದ್‌ 21-13, 21-15ರಲ್ಲಿ ಮಾಜಿ ವಿಶ್ವ ನಂ.20 ಬೀಟ್ರಿರ್‌್ಜ ಕೊರ್ರೆಲ್ಸ್‌ವಿರುದ್ಧ ಗೆದ್ದರೆ, ಡಬಲ್ಸ್‌ ಮೊದಲ ಪಂದ್ಯದಲ್ಲಿ ತನಿಷಾ ಕ್ರಾಸ್ಟೋ-ರುತುಪರ್ಣಾ ಪಾಂಡ ಜೋಡಿ ಪೌರಾ ಲೊಪೆಜ್‌ ಹಾಗೂ ಲೊರೆನಾ ಉಸ್ಲೆ ವಿರುದ್ಧ 21-10, 21-8ರಲ್ಲಿ ಜಯಿಸಿ 2-1ರ ಮುನ್ನಡೆ ಒದಗಿಸಿತು. 

3ನೇ ಸಿಂಗಲ್ಸ್‌ನಲ್ಲಿ ಅದಿತಿ ಭಟ್‌ 21-16, 21-14ರಲ್ಲಿ ಆ್ಯನಿಯಾ ಸೀಟೆನ್‌ ವಿರುದ್ಧ ಗೆದ್ದು 3-1ರ ಮುನ್ನಡೆ ನೀಡಿದರು. ಡಬಲ್ಸ್‌ 2ನೇ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಸೋಲುಂಡಿತು. 2ನೇ ಪಂದ್ಯದಲ್ಲಿ ಭಾರತ, ಸ್ಕಾಟ್ಲೆಂಡ್‌ ವಿರುದ್ಧ ಆಡಲಿದೆ.

Follow Us:
Download App:
  • android
  • ios