Asianet Suvarna News Asianet Suvarna News

ISSF ಜೂನಿಯರ್‌ ಶೂಟಿಂಗ್‌: ಮನು ಭಾಕರ್‌ಗೆ 2ನೇ ಚಿನ್ನ

* ಕಿರಿಯರ ಶೂಟಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಮನು ಭಾಕರ್‌ಗೆ ಒಲಿದ ಎರಡನೇ ಚಿನ್ನ

* ಐಎಸ್‌ಎಸ್‌ಎಫ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್‌ಗಳ ಪಾರಮ್ಯ

* 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಪುರುಷರ ತಂಡವು ಚಿನ್ನದ ಪದಕ ಜಯಿಸಿತು

ISSF Junior World Championships Manu Bhaker wins second gold in the Computation kvn
Author
Lima, First Published Oct 3, 2021, 9:59 AM IST
  • Facebook
  • Twitter
  • Whatsapp

ಲಿಮಾ(ಅ.03): ಐಎಸ್‌ಎಸ್‌ಎಫ್‌ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (ISSF Junior World Championships) ಭಾರತದ ಶೂಟರ್‌ಗಳ ಪಾರಮ್ಯ ಮುಂದುವರೆದಿದ್ದು, ಶನಿವಾರ 2 ಚಿನ್ನದ ಪದಕ ಜಯಿಸಿದ್ದಾರೆ.

ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಮನು ಭಾಕರ್‌ (Manu Bhaker), ಶನಿವಾರ ನಡೆದ ಮಿಶ್ರ ತಂಡದ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸರಬ್‌ಜೋತ್‌ ಸಿಂಗ್‌ ಜೊತೆ ಸೇರಿ 2ನೇ ಸ್ವರ್ಣ ಪದಕಕ್ಕೆ ಗುರಿಯಿಟ್ಟರು. 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಪುರುಷರ ತಂಡವು ಚಿನ್ನದ ಪದಕ ಜಯಿಸಿತು. ಇನ್ನು ಶುಕ್ರವಾರ ಸ್ಕೀಟ್‌ ತಂಡ ವಿಭಾಗದಲ್ಲಿ ಮಹಿಳೆಯರ ತಂಡವು ಚಿನ್ನ ಗೆದ್ದರೆ, ಪುರುಷರ ತಂಡ ಕಂಚಿನ ಪದಕಕ್ಕೆ ಕೊರಲೊಡ್ಡಿತ್ತು.

ಇಂದು ಡುರಾಂಡ್‌ ಕಪ್‌ ಫೈನಲ್‌ ಹಣಾಹಣಿ

ಕೋಲ್ಕತ: ಭಾರತದ ಅತ್ಯಂತ ಹಳೆದ ಫುಟ್ಬಾಲ್‌ ಟೂರ್ನಿಯಾಗಿರುವ ಡುರಾಂಡ್‌ ಕಪ್‌ನ (Durand Cup) 130ನೇ ಆವೃತ್ತಿಯ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಭಾನುವಾರ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಹಾಗೂ ಎಫ್‌ಸಿ ಗೋವಾ ನಡುವೆ ಸೆಣಸಾಟ ನಡೆಯಲಿದೆ. 

6ನೇ ಬಾರಿ ಫೈನಲ್‌ ಪ್ರವೇಶಿಸಿರುವ ಮೊಹಮೆಡನ್‌ 3ನೇ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ. ಮೊಹಮೆಡನ್‌ ಸೆಮಿಫೈನಲ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವನ್ನು ಸೋಲಿಸಿತ್ತು. ಬೆಂಗಳೂರು ಎಫ್‌ಸಿ ವಿರುದ್ಧ ಗೆದ್ದು ಪೈನಲ್‌ ಪ್ರವೇಶಿಸಿರುವ ಗೋವಾ ಚೊಚ್ಚಲ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದೆ. ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ.

ನಾಳೆಯಿಂದ ಬೆಂಗ್ಳೂರಲ್ಲಿ ಹಾಕಿ ಶಿಬಿರ

ನವದೆಹಲಿ: ಭಾರತೀಯ ಹಾಕಿ ತಂಡದ ರಾಷ್ಟ್ರೀಯ ಶಿಬಿರ ಬೆಂಗಳೂರಿನ ಸಾಯ್(ಭಾರತೀಯ ಕ್ರೀಡಾ ಪ್ರಾಧಿಕಾರ)ನಲ್ಲಿ ಅಕ್ಟೋಬರ್ 04ರಿಂದ ಆರಂಭವಾಗಲಿದೆ. ಶಿಬಿರಕ್ಕಾಗಿ ಅನುಭವಿಗಳ ಜತೆಗೆ ಯುವ ಆಟಗಾರರನ್ನು ಒಳಗೊಂಡ 30 ಆಟಗಾರರ ಪಟ್ಟಿಯಲ್ಲಿ ಹಾಕಿ ಇಂಡಿಯಾ (Hockey India) ಶನಿವಾರ ಬಿಡುಗಡೆಗೊಳಿಸಿದೆ.

ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ ವಿ ಸುನಿಲ್‌ ಗುಡ್‌ಬೈ

ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್‌, ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಹರ್ಮನ್‌ ಪ್ರೀತ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತೆರಳುವ ಮುನ್ನಾ ಭಾರತ ಹಾಕಿ ತಂಡ ಬೆಂಗಳೂರಿನ ಸಾಯ್ ಕೇಂದ್ರದಲ್ಲೇ ಅಭ್ಯಾಸ ನಡೆಸಿತ್ತು. ಇದಾದ ಬಳಿಕ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿತ್ತು. ಇದೀಗ ಮುಂಬರುವ ಪ್ರೊ ಲೀಗ್  ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಜಯ ಸಾಧಿಸುವ ಮಹತ್ವದ ಗುರಿಯೊಂದಿಗೆ ತಂಡ ಅಭ್ಯಾಸ ನಡೆಸಲಿದೆ.

Follow Us:
Download App:
  • android
  • ios