210 ಕೆಜಿ ಭಾರ ಎತ್ತಲು ಹೋಗಿ ಕತ್ತು ಮುರಿದು ದುರಂತ ಸಾವು ಕಂಡ ಬಾಡಿಬಿಲ್ಡರ್!
ಪ್ರತಿ ದಿನ ತರಬೇತಿ, ವರ್ಕೌಟ್‌ನಿಂದ ಕಟ್ಟು ಮಸ್ತಾದ ದೇಹ ಬೆಳೆಸಿಕೊಂಡಿದ್ದ. ಬಾಡಿಬಿಲ್ಡರ್ ಶೋಗಳಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದ. ಫಿಟ್ನೆಸ್ ತರಬೇತುದಾರನಾಗಿ ಹಲವರಿಗೆ ಟ್ರೈನಿಂಗ್ ನೀಡುತ್ತಿದ್ದ. ಆದರೆ ಜಿಮ್‌ನಲ್ಲಿ ಸಾಹಸ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾನೆ. ಭಯಾನಕ ವಿಡಿಯೋ ಇಲ್ಲಿದೆ.
ಬಾಲಿ(ಜು.22) ಖ್ಯಾತ ಬಾಡಿಬಿಲ್ಡರ್, ಫಿಟ್ನೆಸ್ ತರಬೇತುದಾರ ಜಸ್ಟಿನ್ ವಿಕ್ಕಿ ದುರಂತ ಅಂತ್ಯ ಕಂಡಿದ್ದಾರೆ. ಹಲವು ಬಾಲಿಬಿಲ್ಡಿಂಗ್ ಶೋ ಮೂಲಕ ಖ್ಯಾತಿ ಗಳಿಸಿದ ಜಸ್ಟಿನ್ ವಿಕ್ಕಿ, ಜಿಮ್‌ನಲ್ಲಿ ಬರೋಬ್ಬರಿ 210 ಕೆಜಿ ಭಾರ ಎತ್ತಲು ಹೋಗಿ ಎಡವಟ್ಟು ಮಾಡಿದ್ದಾರೆ. ಅತೀವ ಭಾರ ಎತ್ತುವ ವೇಳೆ ಕತ್ತು ಮುರಿತಕ್ಕೊಳಗಾಗಿದೆ. ಇದರಿಂದ ಜಸ್ಟಿನ್ ವಿಕ್ಕಿ ದುರಂತ ಸಾವು ಕಂಡಿದ್ದಾರೆ. 33 ವರ್ಷದ ಜಸ್ಟಿನ್ ವಿಕ್ಕಿ ಇಂಡೋನೇಷಿಯಾದ ಖ್ಯಾತ ಬಾಡಿಬಿಲ್ಡರ್ ಸಾವಿಗೆ ದೇಶದ ವಿದೇಶದ ಹಲವರು ಸಂತಾಪ ಸೂಚಿಸಿದ್ದಾರೆ.
ಜುಲೈ 15 ರಂದು ಜಸ್ಟಿನ್ ವಿಕ್ಕಿ ಜಿಮ್‌ನಲ್ಲಿ ವ್ಯಾಯಾಮದಲ್ಲಿ ಬ್ಯೂಸಿಯಾಗಿದ್ದರು. ತನ್ನ ಕಟ್ಟುಮಸ್ತಾದ ದೇಹವನ್ನು ದಂಡಿಸಲು ಆರಂಭಿಸಿದ್ದರು. ಫಿಟ್ನೆಸ್ ಕುರಿತು ಅತೀವ ಕಾಳಜಿವಹಿಸುವ ಜಸ್ಟಿನ್ ವಿಕ್ಕಿ, ಬರೋಬ್ಬರಿ 210 ಕೆಜಿ ಭಾರ ಎತ್ತಲು ಮುಂದಾಗಿದ್ದರು. ಜಿಮ್‌ನಲ್ಲಿ ಇತರ ತರೇಬೇತು ದಾರರು ಜಸ್ಟಿನ್ ವಿಕ್ಕಿಗೆ ನೆರವು ನೀಡಿದ್ದಾರೆ. ಅತೀವ ಭಾರ ಎತ್ತುವ ವೇಳೆ ಜಸ್ಟಿನ್ ವಿಕ್ಕಿ ಹಿಂಭಾಗದಲ್ಲಿ ನಿಂತು ತರಬೇತುದಾರರು ಸಹಾಯ ಮಾಡಿದ್ದಾರೆ.
ಅತಿಯಾದ ಬಾಡಿಬಿಲ್ಡಿಂಗ್ ಜೋ ಲಿಂಡ್ನರ್ ಜೀವಕ್ಕೇ ಮುಳುವಾಯ್ತಾ? ಏನಿದು ರಿಪ್ಲಿಂಗ್ ಮಸಲ್ ಕಾಯಿಲೆ?
ಸಾಮರ್ಥ್ಯಕ್ಕೂ ಮೀರಿದ ಸಾಹಸ ಮಾಡುವಾಗ ವಿಕ್ಕಿ ಸಮತೋಲನ ತಪ್ಪಿದೆ. ಇದರಿಂದ ಜಸ್ಟಿನ್ ವಿಕ್ಕಿ ಹಿಂಭಾಗಕ್ಕೆ ಜಾರಿದ್ದಾರೆ. ಇದರಿಂದ ಹಿಂಭಾಗದಲ್ಲಿದ್ದ ತರಬೇತುದಾರ ಕೂಡ 210 ಕೆಜಿ ಭಾರವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಬ್ಯಾಲೆನ್ಸ್ ತಪ್ಪಿದ ಬೆನ್ನಲ್ಲೇ ವೈಟ್ ಲಿಫ್ಟಿಂಗ್ ಜಾರಿದೆ. ಇದರಿಂದ ಜಸ್ಟಿನ್ ವಿಕ್ಕಿ ಕತ್ತು ಮುರಿತಕ್ಕೊಳಗಾಗಿದೆ. ಇನ್ನು ಮೆದುಳು ಸಂಪರ್ಕಿಸುವ ನರಗಳಿಗೆ ಸಮಸ್ಸೆಯಾಗಿದೆ.
ಕುಸಿದು ಬಿದ್ದ ಜಸ್ಟಿನ್ ವಿಕ್ಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ನಿಘಾ ಘಟಕ್ಕೆ ದಾಖಲಿಸಿದ ವಿಕ್ಕಿಗೆ ವೈದ್ಯರು ತ್ವರಿತ ಶಸ್ತ್ರಚಿಕಿತ್ಸೆಗೆ ಮುಂದಾದರು. ಆದರೆ ಶಸ್ತ್ರಚಿಕಿತ್ಸೆ ವೇಳೆ ಜಸ್ಟಿನ್ ವಿಕ್ಕಿ ದುರಂತ ಅಂತ್ಯಕಂಡಿದ್ದಾರೆ. ಜಸ್ಟಿನ್ ವಿಕ್ಕಿ ಸಾವಿನ ಸುದ್ದಿ ದೇಶ ವಿದೇಶದಲ್ಲಿ ಆತಂಕ ತಂದಿತ್ತು. ಜಿಮ್ ವರ್ಕೌಟ್ ಮಾಡುವ, ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡ ಹಲವರಿಗೆ ಆಘಾತ ತಂದಿತ್ತು.
ಬಾಲಿಯ ಪ್ಯಾರಡೈಸ್ ಜಿಮ್ ವಿಕ್ಕಿಗೆ ಗೌರವ ನಮನ ಸಲ್ಲಿಸಿದೆ. ವಿಕ್ಕೆ ಕೇವಲ ಬಾಡಿಬಿಲ್ಡರ್ ಅಲ್ಲ, ಇದರ ಜೊತೆಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಅತೀವ ಸಾಧನೆ ಮಾಡಿದ ಫಿಟ್ನೆಸ್ ಮ್ಯಾನ್ ಎಂದು ಪ್ಯಾರಡೈಸ್ ಜಿಮ್ ಹೇಳಿದೆ. ವಿಕ್ಕಿ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಹಲವರು ಎಚ್ಚರಿಕೆಯನ್ನು ನೀಡಿದ್ದಾರೆ. ಸಾಮರ್ಥ್ಯಕ್ಕೆ ತಕ್ಕ ಪ್ರಯತ್ನ ಇರಲಿ, ದುಸ್ಸಾಹಸ ಬೇಡ ಎಂದಿದ್ದಾರೆ.
ಮಿಸ್ಟೇಕ್ ಮಾಡ್ಕೋಬೇಡಿ, ಈತನಿಗೆ ಮೂವತ್ತಲ್ಲ, ಕೇವಲ 72 ವರ್ಷ!
ಇತ್ತೀಚೆಗೆ ಜರ್ಮನಿಯ ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ಹೃದಯಾಘಾತದಿಂದ ನಿಧನರಾಗಿದ್ದರು. ಸಾಮಾಜಿಕ ತಾಣಗಳಲ್ಲಿ ತಮ್ಮ ಫಿಟ್ನೆಸ್ ಸಲಹೆಯ ವಿಡಿಯೋಗಳಿಂದಲೇ ಖ್ಯಾತಿ ಗಳಿಸಿದ್ದ ಜೊ ಲಿಂಡ್ನರ್ ಥಾಯ್ಲೆಂಡ್‌ನಲ್ಲಿ ನಿಧನರಾಗಿದ್ದರು. ಲಿಂಡ್ನರ್ ಸಾವಿಗೆ ರಕ್ತನಾಳ ಸಮಸ್ಯೆಯೇ ಕಾರಣ ಎಂದು ಹೇಳಲಾಗುತ್ತಿದೆ. ಥಾಯ್ಲೆಂಡ್‌ನಲ್ಲಿ ನೆಲೆಸಿದ್ದ ಲಿಂಡ್ನರ್ ಫಿಟ್ನೆಸ್ ಟಿಪ್ಸ್ ನೀಡುವ ಮೂಲಕ ಸಾಮಾಜಿಕ ತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದರು. ಅವರ ಕನ್ನಡದ ‘ಪೊಗರು’ ಸಿನಿಮಾದಲ್ಲೂ ನಟಿಸಿದ್ದರು.