Asianet Suvarna News Asianet Suvarna News

Indonesia Open Badminton: ಕ್ವಾರ್ಟರ್‌ಗೆ ಸಿಂಧು, ಪ್ರಣೀತ್‌ ಲಗ್ಗೆ

* ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು, ಪ್ರಣೀತ್ ಮಿಂಚಿನ ಪ್ರದರ್ಶನ

* ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ

* ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ಗೆ ಸೋಲಿನ ಶಾಕ್

 

Indonesia Open Badminton PV Sindhu Sai Praneeth cruise into quarter Final kvn
Author
Bengaluru, First Published Nov 26, 2021, 9:47 AM IST

ಬಾಲಿ(ನ.26): ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Indonesia Open Badminton) ಹಾಲಿ ವಿಶ್ವ ಚಾಂಪಿಯನ್‌, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ಹಾಗೂ ಸಾಯಿ ಪ್ರಣೀತ್‌ (Sai Praneeth) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು, ಜರ್ಮನಿಯ ವೊನ್ನೆ ಲಿ ವಿರುದ್ಧ 21-​12, 21-​18 ಗೇಮ್‌ಗಳಿಂದ ಗೆಲುವು ಸಾಧಿಸಿದರು.

ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಪ್ರಣೀತ್‌, ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್‌ ವಿರುದ್ಧ 21-17, 14-21, 21-19 ಅಂತರದಲ್ಲಿ ಗೆದ್ದು ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಆದರೆ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ ಸೋತು ನಿರ್ಗಮಿಸಿದರು. ಮಿಶ್ರ ಡಬಲ್ಸ್‌ನಲ್ಲಿ ರಂಕಿರೆಡ್ಡಿ- ಚಿರಾಗ್‌ ಶೆಟ್ಟಿ ಜೋಡಿ, ದ.ಕೊರಿಯಾದ ಕಂಗ್‌ ಮಿನ್‌ಹ್ಯುಂಕ್‌-ಸೆವೊ ಸೆವುಂಜೀ ಜೋಡಿ ವಿರುದ್ಧ ಗೆಲುವು ಸಾಧಿಸಿತು.

ವರ್ಲ್ಡ್‌ ಟೂರ್‌ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿದ ಲಕ್ಷ್ಯ

ನವದೆಹಲಿ: ಭಾರತದ ಯುವ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೆನ್‌ (Lakshya Sen) ವರ್ಷಾಂತ್ಯದಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್‌ ವರ್ಲ್ಡ್ ಟೂರ್‌ ಫೈನಲ್ಸ್‌ಗೆ (BWF World Tour Finals) ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ವರ್ಲ್ಡ್‌ ಟೂರ್‌ ಫೈನಲ್ಸ್‌ಗೆ ಅರ್ಹತೆ ಪಡೆದ ಭಾರತದ ಅತೀ ಕಿರಿಯ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರಾಗಿದ್ದಾರೆ. 

PV Sindhu: ಮತ್ತೊಮ್ಮೆ ಬಿಡಬ್ಲ್ಯೂಎಫ್‌ ಅಥ್ಲೀಟ್ಸ್‌ ಚುನಾವಣೆಯಲ್ಲಿ ಸ್ಪರ್ಧೆ

ಟೂರ್ನಿಯು ಇಂಡೋನೇಷ್ಯಾದ ಬಾಲಿಯಲ್ಲಿ ಡಿಸೆಂಬರ್ 1ರಿಂದ ಆರಂಭವಾಗಲಿದೆ. ವಿಶ್ವ ರಾರ‍ಯಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ 20 ವರ್ಷದ ಸೆನ್‌ ಅವರು ಕಿದಂಬಿ ಶ್ರೀಕಾಂತ್‌, ಪಿ.ವಿ.ಸಿಂಧು, ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಜೊತೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯ ನಡೆಯುತ್ತಿರುವ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತ ಹೊರತಾಗಿಯೂ ಲಕ್ಷ್ಯ ವರ್ಲ್ಡ್‌ ಟೂರ್‌ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಮೊದಲು 2018ರಲ್ಲಿ ಸಿಂಧು ವರ್ಲ್ಡ್‌ ಟೂರ್‌ ಫೈನಲ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದಿದ್ದು, ಭಾರತದ ಏಕೈಕ ಚಾಂಪಿಯನ್‌ ಎನಿಸಿಕೊಂಡಿದ್ದಾರೆ.

ವಿಶ್ವ ಟಿಟಿ: ಸತ್ಯನ್‌ 3ನೇ ಸುತ್ತಿಗೆ ಲಗ್ಗೆ

ಹೌಸ್ಟನ್‌(ಅಮೆರಿಕಾ): ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ (World Table Tennis Championship) ಭಾರತದ ಸತ್ಯನ್‌ ಜ್ಞಾನಶೇಕರನ್‌ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸತ್ಯನ್‌, ರಷ್ಯಾದ ವ್ಲಾದಿಮಿರ್‌ ಸಿಡೊರೆಂಕೊ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಸತ್ಯನ್‌ ನೈಜೀರಿಯಾದ ಅರುಣ ಕ್ವಾದ್ರಿ ವಿರುದ್ಧ ಸೆಣಸಲಿದ್ದಾರೆ.

World Skating Games:ಭಾರತಕ್ಕೆ ಮೊದಲ ಪದಕ ಗೆದ್ದ ಆನಂದ್ ವೆಲ್ಕುಮಾರ್, ಯಾರೂ ಮಾಡದ ಸಾಧನೆಗೆ ಸಲಾಂ!

 ಇನ್ನು, ಶರತ್‌ ಕಮಲ್‌-ಅರ್ಚನಾ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಅಂತಿಮ 32ರ ಸುತ್ತು ಪ್ರವೇಶಿಸಿದೆ. ಮಿಶ್ರ ಡಬಲ್ಸ್‌ನಲ್ಲಿ ಸತ್ಯನ್‌-ಮನಿಕಾ ಬಾತ್ರಾ ಜೋಡಿಗೆ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಮನಿಕಾ- ಅರ್ಚನಾ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ.

ಡಿಸೆಂಬರ್ 29ರಂದು ಮುಂಬೈ ಹಾಫ್‌ ಮ್ಯಾರಥಾನ್‌

ಮುಂಬೈ: ಕೋವಿಡ್‌ ಕಾರಣದಿಂದ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಏಜೀಸ್‌ ಫೆಡರಲ್‌ ಲೈಫ್‌ ಇನ್ಶೂರೆನ್ಸ್‌ ಮುಂಬೈ ಹಾಫ್‌ ಮ್ಯಾರಥಾನ್‌ಗೆ ಮತ್ತೆ ಚಾಲನೆ ದೊರೆಯಲಿದ್ದು, ಡಿ.19ರಂದು ಸ್ಪರ್ಧೆ ನಡೆಯಲಿದೆ. ಮಾಜಿ ಕ್ರಿಕೆಟಿಗ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ (Sachin Tendulkar) ಸಹ ಮ್ಯಾರಥಾನ್‌ಗೆ ಶುಭ ಹಾರೈಸಿದ್ದಾರೆ.

ದೊಡ್ಡ ಮ್ಯಾರಥಾನ್‌, ಹಾಫ್‌ ಮ್ಯಾರಥಾನ್‌(21.1 ಕಿ.ಮೀ.), 10ಕೆ ಹಾಗೂ 5ಕೆ ಮ್ಯಾರಥಾನ್‌ ಹೀಗೆ 4 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮ್ಯಾರಥಾನ್‌ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶ-ವಿದೇಶಗಳ ಓಟಗಾರರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದು, ಡಿಸೆಂಬರ್ 4ರ ತನಕ ನೋಂದಣಿಗೆ ಅವಕಾಶವಿದೆ ಎಂದು ರೇಸ್‌ನ ನಿರ್ದೇಶಕ ನಾಗರಾಜ್‌ ಅಡಿಗ ತಿಳಿಸಿದ್ದಾರೆ.

Follow Us:
Download App:
  • android
  • ios