Asianet Suvarna News Asianet Suvarna News

PV Sindhu: ಮತ್ತೊಮ್ಮೆ ಬಿಡಬ್ಲ್ಯೂಎಫ್‌ ಅಥ್ಲೀಟ್ಸ್‌ ಚುನಾವಣೆಯಲ್ಲಿ ಸ್ಪರ್ಧೆ

* ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

* ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್ ಅಥ್ಲೆಟಿಕ್ಸ್ ಚುನಾವಣೆ ಡಿಸೆಂಬರ್ 17ರಂದು ಚುನಾವಣೆ ನಡೆಯಲಿದೆ

* ಈಗಾಗಲೇ ಹಾಲಿ ಸದಸ್ಯೆಯಾಗಿರುವ ಸಿಂಧು, ಮರು ಆಯ್ಕೆ ಬಯಸಿ ಸ್ಪರ್ಧೆ

2 Time Olympic Medallist Badminton Star PV Sindhu to Contest BWF Athletes Commission Elections once Again kvn
Author
Bengaluru, First Published Nov 24, 2021, 10:45 AM IST
  • Facebook
  • Twitter
  • Whatsapp

ನವದೆಹಲಿ(ನ.24): ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು (PV Sindhu) ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌(ಬಿಡಬ್ಲ್ಯೂಎಫ್‌) ಅಥ್ಲೀಟ್ಸ್‌ ಆಯೋಗದ ಚುನಾವಣೆಯಲ್ಲಿ (BWF Athletes Commission Elections) ಸ್ಪರ್ಧಿಸಲಿದ್ದಾರೆ. 2017ರಲ್ಲಿ ಆಯೋಗದ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸಿಂಧು, ಮರು ಆಯ್ಕೆ ಬಯಸಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆಯೋಗದ 6 ಸ್ಥಾನಗಳಿಗಾಗಿ ಸಿಂಧು ಸೇರಿದಂತೆ ಒಟ್ಟು 9 ಮಂದಿ ಕಣದಲ್ಲಿದ್ದಾರೆ. 

ಸ್ಪೇನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಡೆಯುವ ವೇಳೆ ಡಿಸೆಂಬರ್ 17ರಂದು ಚುನಾವಣೆ ನಡೆಯಲಿದೆ. ಸಿಂಧು ಜೊತೆ ಇಂಡೋನೇಷ್ಯಾದ ಗ್ರೇಸಿಯಾ ಪೋಲಿ, ಸ್ಕಾಟ್ಲೆಂಡ್‌ನ ಆ್ಯಡಂ ಹಾಲ್‌, ಈಜಿಪ್ಟ್‌ನ ಹಾದಿಯಾ ಹೊಸ್ನಿ, ಅಮೆರಿಕಾದ ಐರಿಸ್‌ ವ್ಯಾಂಗ್‌, ಕೊರಿಯಾದ ಕಿಮ್‌ ಸೋಯೊಂಗ್‌, ನೆದರ್‌ಲೆಂಡ್ಸ್‌ನ ರಾಬಿನ್‌ ಟಾಬೆಲಿಂಗ್‌, ಇರಾನಿನ ಸೊರಯಾ ಹಾಗೂ ಚೀನಾದ ಜೆಂಗ್‌ ಸಿ ವೀ ಕಣದಲ್ಲಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ವಿಜೇತೆ ಪಿ.ವಿ. ಸಿಂಧು, ಸದ್ಯ ಬಾಲಿಯಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್‌ (Indonesia Open Super 1000) ಸೂಪರ್‌ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಮತ್ತೊಮ್ಮೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಿಂಧು ಜತೆಗೆ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಇಂಡೋನೇಷ್ಯಾದ ಆಟಗಾರ್ತಿ ಗ್ರೇಸಿಯಾ ಪೋಲಿ ಕೂಡಾ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 

Junior Hockey World Cup: ಒಡಿಶಾದಲ್ಲಿ ಇಂದಿನಿಂದ ಜೂನಿಯರ್ ಹಾಕಿ ವಿಶ್ವಕಪ್ ಆರಂಭ

6 ವರ್ಷಗಳ ಅವಧಿಯ(2021-2025) ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್ ಚುನಾವಣೆಯು ಡಿಸೆಂಬರ್ 17ರ ಶುಕ್ರವಾರ ನಡೆಯಲಿದೆ. ಸ್ಪೇನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಡೆಯುವ ವೇಳೆಯೇ ಈ ಚುನಾವಣೆಯು ನಡೆಯಲಿದೆ ಎಂದು ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪಿ.ವಿ. ಸಿಂಧು ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಾಲಿ ಸದಸ್ಯೆಯಾಗಿದ್ದಾರೆ. 2017ರಲ್ಲಿ ಆಯ್ಕೆಯಾದ ಬ್ಯಾಡ್ಮಿಂಟನ್ ಪಟುಗಳ ಪೈಕಿ ಸಿಂಧು ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. 

ಕಳೆದ ಮೇ ತಿಂಗಳಿನಲ್ಲಿ ಪಿ.ವಿ. ಸಿಂಧು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಬ್ರ್ಯಾಂಡ್ ಅಂಬಾಸಿಡರ್(ರಾಯಭಾರಿ) ಆಗಿ ಆಯ್ಕೆಯಾಗಿದ್ದರು. ಪಿ.ವಿ. ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ (Rio Olympics) ಬೆಳ್ಳಿ ಪದಕ (Silver) ಜಯಿಸಿದ್ದರು. ಇನ್ನು ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ (Bronze Medal) ಗೆಲ್ಲುವ ಮೂಲಕ, ಒಲಿಂಪಿಕ್ಸ್‌ನಲ್ಲಿ ಸತತ 2 ಪದಕ ಗೆದ್ದ ಭಾರತದ ಏಕೈಕ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿಗೆ ಹೈದರಾಬಾದ್ ಮೂಲದ ಸಿಂಧು ಪಾತ್ರರಾಗಿದ್ದರು.

ಇಂಡೋನೇಷ್ಯಾ ಓಪನ್‌: ಲಕ್ಷ್ಯ, ಕಶ್ಯಪ್‌ಗೆ ಆಘಾತ

ಬಾಲಿ(ಇಂಡೋನೇಷ್ಯಾ): ಮಂಗಳವಾರ ಆರಂಭವಾದ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೆನ್‌ (Lakshya Sen) ಹಾಗೂ ಪಾರುಪಳ್ಳಿ ಕಶ್ಯಪ್‌ (Parupalli Kashyap) ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೆನ್‌, ಜಪಾನ್‌ನ ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟ (Kento Momota) ವಿರುದ್ಧ 21​-23, 15-​21 ನೇರ ಗೇಮ್‌ಗಳಿಂದ ಪರಾಭವಗೊಂಡರು. ಕಶ್ಯಪ್‌ ಸಿಂಗಾಪುರದ ಲೊಹ್‌ ಕೀನ್‌ ವಿರುದ್ಧ 11-​21, 14​-21ರಲ್ಲಿ ಸೋತು ನಿರಾಸೆ ಅನುಭವಿಸಿದರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಕಪಿಲಾ ಜೋಡಿ ಕೊರಿಯಾದ ಚೊಯ್‌ ಸೊಲ್‌ಗ್ಯು- ಕಿಮ್‌ ವೊನ್ಹೊ ಜೋಡಿ ವಿರುದ್ಧ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ವೆಂಕಟ್‌ ಗೌರವ್‌ ಪ್ರಸಾದ್‌-ಜುಹಿ ದೇವಾಂಗನ್‌ ಜೋಡಿ ಜರ್ಮನಿಯ ಜೆನ್ಸೆನ್‌-ಲಿಂಡಾ ಜೋಡಿ ವಿರುದ್ಧ ಸೋತು ಹೊರಬಿತ್ತು.

Follow Us:
Download App:
  • android
  • ios