ಬೆಂಗಳೂರಲ್ಲಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ; ಅಶ್ವಿನಿ ಜೊತೆ ಆಡೋ ಅವಕಾಶ!
ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಿತ್ತಿದೆ. ಈಗಾಗಲೇ 4 ನಗರಗಳಲ್ಲಿನ ಚರಣ ಮುಕ್ತಾಯಗೊಂಡು, ಬೆಂಗಳೂರಿಗೆ ಆಗಮಿಸಿದೆ. ವಿಶೇಷ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ವಿಶೇಷತೆ ಇಲ್ಲಿದೆ.
ಬೆಂಗಳೂರು(ನ.16): ಮಹಿಳೆಯರಿಗೆಂದೇ ವಿಶೇಷವಾದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ರೆಡ್ ಬುಲ್ ಸಂಸ್ಥೆ ಆಯೋಜಿಸಿದ್ದು, ಬೆಂಗಳೂರು ಚರಣ ಶನಿವಾರ(ನ.16) ನಡೆಯಲಿದೆ. ಮುಂದಿನ ಪೀಳಿಗೆಯ ಮಹಿಳಾ ಡಬಲ್ಸ್ ಆಟಗಾರ್ತಿರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಈ ಟೂರ್ನಿ ಆಯೋಜಿಸಲಾಗಿದೆ.
ಇದನ್ನೂ ಓದಿ: ಹಾಂಕಾಂಗ್ ಓಪನ್: ಸೆಮಿಫೈನಲ್ಗೆ ಲಗ್ಗೆ ಇಟ್ಟ ಶ್ರೀಕಾಂತ್!
ಈಗಾಗಲೇ ದೆಹಲಿ, ಹೈದರಾಬಾದ್, ಗುವಾಹಟಿ ಹಾಗೂ ಚಂಡೀಗಢ ಚರಣಗಳು ಮುಕ್ತಾಯಗೊಂಡಿದ್ದು, ಡಿ.8ರಂದು ಹೈದರಾಬಾದ್ನಲ್ಲಿ ಫೈನಲ್ ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುವ ಜೋಡಿ, ಭಾರತದ ತಾರಾ ಶಟ್ಲರ್ ಅಶ್ವಿನಿ ಪೊನ್ನಪ್ಪ ಹಾಗೂ ಅವರ ಜತೆಗಾರ್ತಿ ವಿರುದ್ಧ ಆಡುವ ಅವಕಾಶ ಪಡೆಯಲಿದೆ.
ಇದನ್ನೂ ಓದಿ: ಹಾಂಕಾಂಗ್ ಓಪನ್: ಪ್ರಿ ಕ್ವಾರ್ಟರ್‌ಗೆ ಸಾತ್ವಿಕ್-ಅಶ್ವಿನಿ ಪೊನ್ನಪ್ಪ!
ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಿ ದೇಶದ ಪ್ರಮುಖ 6 ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಬೆಂಗಳೂರು ಚರಣದ ಬಳಿಕ ಮುಂಬೈನಲ್ಲಿ ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯಕ್ಕೆ ಹೈದರಾಬಾದ್ ಆತಿಥ್ಯ ವಹಿಸಲಿದೆ. ಮಹಿಳಾ ಡಬಲ್ಸ್ ಗೆದ್ದವರು, ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಜೊತೆ ಆಡುವ ಅವಕಾಶ ಪಡೆಯಲಿದ್ದಾರೆ.