Asianet Suvarna News

ಹಾಂಕಾಂಗ್‌ ಓಪನ್‌: ಸೆಮಿ​ಫೈ​ನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌!

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅದೃಷ್ಟದ  ಗೆಲವು ಸಾಧಿಸಿದ ಶ್ರೀಶಾಂತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 

Hong kong open badminton kidaambi Srikanth enters semifinal round
Author
Bengaluru, First Published Nov 16, 2019, 10:04 AM IST
  • Facebook
  • Twitter
  • Whatsapp

ಹಾಂಕಾಂಗ್‌(ನ.16) : ಭಾರ​ತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿ​ರುವ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿ​ದ್ದಾರೆ. ಶುಕ್ರ​ವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಒಲಿಂಪಿಕ್‌ ಚಾಂಪಿ​ಯನ್‌ ಚೀನಾದ ಚೆನ್‌ ಲಾಂಗ್‌ ಗಾಯ​ಗೊಂಡು ಹೊರ​ನ​ಡೆದ ಕಾರಣ, ಶ್ರೀಕಾಂತ್‌ ಸೆಮೀಸ್‌ ಹಾದಿ ಸುಗ​ಮ​ಗೊಂಡಿತು. 21-15ರಲ್ಲಿ ಮೊದಲ ಗೇಮ್‌ ಗೆದ್ದು ಮುನ್ನಡೆಯಲ್ಲಿದ್ದ ಶ್ರೀಕಾಂತ್‌, ನಿರಾ​ಯಾಸವಾಗಿ ಉಪಾಂತ್ಯಕ್ಕೆ ತಲು​ಪಿ​ದರು.

ಇದನ್ನೂ ಓದಿ: ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶ್ರೀಕಾಂತ್‌, ಸಿಂಧು ಔಟ್‌!

ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್‌, ಮಾಚ್‌ರ್‍ ಬಳಿಕ ಇದೇ ಮೊದಲ ಬಾರಿಗೆ ಟೂರ್ನಿ​ಯೊಂದ​ರಲ್ಲಿ ಸೆಮಿ​ಫೈನಲ್‌ಗೇರಿ​ದ್ದಾರೆ. ಈ ವರ್ಷ ಇಂಡಿಯಾ ಓಪನ್‌ನಲ್ಲಿ ಶ್ರೀಕಾಂತ್‌ ರನ್ನರ್‌-ಅಪ್‌ ಆಗಿ​ದ್ದರು. ಈ ಟೂರ್ನಿ​ಯಲ್ಲಿ ವಿಶ್ವ ಚಾಂಪಿ​ಯನ್‌ ಕೆಂಟೊ ಮೊಮೊಟಾ ಹಿಂದೆ ಸರಿದ ಕಾರಣ ಶ್ರೀಕಾಂತ್‌ಗೆ ಮೊದಲ ಸುತ್ತಿ​ನಲ್ಲಿ ಬೈ ಸಿಕ್ಕಿತ್ತು. ಇದೀಗ ಚೆನ್‌ ಲಾಂಗ್‌ ಗಾಯ​ಗೊಂಡು ಪಂದ್ಯ ಬಿಟ್ಟು​ಕೊ​ಟ್ಟಿದ್ದು, ಶ್ರೀಕಾಂತ್‌ ಅದೃಷ್ಟದ ಓಟ ಮುಂದು​ವ​ರಿ​ಸಲು ನೆರ​ವಾ​ಗಿ​ದೆ. ಶುಕ್ರ​ವಾರದ ಗೆಲುವು, ಚೆನ್‌ ಲಾಂಗ್‌ ವಿರುದ್ಧ ಶ್ರೀಕಾಂತ್‌ ಗಳಿ​ಸಿದ 2ನೇ ಗೆಲು​ವಾ​ಗಿದೆ. ಇದ​ರೊಂದಿಗೆ ಅವರ ವಿರು​ದ್ಧದ ಗೆಲುವು-ಸೋಲಿನ ಅಂತರವನ್ನು 2-6ಕ್ಕೆ ತಗ್ಗಿ​ಸಿ​ಕೊಂಡರು.

ಕಠಿಣ ಎದುರಾ​ಳಿ: ಶನಿ​ವಾರ ನಡೆ​ಯ​ಲಿ​ರುವ ಸೆಮಿ​ಫೈ​ನಲ್‌ನಲ್ಲಿ ಶ್ರೀಕಾಂತ್‌, ಸ್ಥಳೀಯ ಆಟ​ಗಾರ ಲೀ ಚೆಯುಕ್‌ ಯೀ ವಿರುದ್ಧ ಸೆಣ​ಸ​ಲಿ​ದ್ದಾರೆ. ಲೀ, ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿ​ಯನ್‌ ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆ​ಲ್ಸನ್‌ ವಿರುದ್ಧ 21-14, 21-19 ಗೇಮ್‌ಗಳ​ಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಭಾರ​ತೀಯ ಆಟ​ಗಾ​ರನಿಗೆ ಕಠಿಣ ಸ್ಪರ್ಧೆ ಎದು​ರಾ​ಗುವ ನಿರೀಕ್ಷೆ ಇದೆ.

Follow Us:
Download App:
  • android
  • ios