ಅಂತಾರಾಷ್ಟ್ರೀಯ UIAA ಕಾರ್ಯಕಾರಿಣಿ ಮಂಡಳಿಗೆ ಭಾರತದ ಅಮಿತ್ ಚೌಧುರಿ ಆಯ್ಕೆ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮಹತ್ತರ ಗೌರವ ಸಲ್ಲಿಕೆಯಾಗಿದೆ. ಅಂತಾರಾಷ್ಟ್ರೀಯ ಪರ್ವತಾರೋಹಣ ಒಕ್ಕೂಟ ಇದೇ ಮೊದಲ ಬಾರಿಗೆ ಭಾರತದ ಅಮಿತ್ ಚೌಧರಿ ಆಯ್ಕೆಯಾಗಿದ್ದಾರೆ.
ಸ್ವಿಟ್ಜರ್‌ಲೆಂಡ್ (ಅ.25): ಅಂತಾರಾಷ್ಟ್ರೀಯ ಕ್ಲೈಬಿಂಗ್ ಮತ್ತು ಪರ್ವತಾರೋಹಣ ಒಕ್ಕೂಟದ (UIAA) ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆಯಾಗಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪರ್ವತಾರೋಹಣ ಒಕ್ಕೂಟಕ್ಕೆ ಭಾರತೀಯ ಆಯ್ಕೆಯಾಗಿದ್ದಾರೆ. UIAA ಕಾರ್ಯಕಾರಣಿ ಮಂಡಳಿಗೆ ಭಾರತೀಯ ಪರ್ವತಾರೋಹಣ ಪ್ರತಿಷ್ಠಾನದ ಮುಖ್ಯಸ್ಥ ಅಮಿತ್ ಚೌಧರಿ ಆಯ್ಕೆಯಾಗಿದ್ದಾರೆ.
ಕ್ಯಾನ್ಸರ್‌ನಿಂದ ಬದುಕುಳಿದವಳು ಇಂದು ನ್ಯಾಷನಲ್ ಚಾಂಪಿಯನ್!
UIAA ಕಾರ್ಯಕಾರಣಿ ಮಂಡಳಿಯಲ್ಲಿ ಭಾರತದ ಅಮಿತ್ ಚೌಧರಿ ಸೇರಿದಂತೆ ಬೆಲ್ಜಿಯಂ, ಮಂಗೊಲಿಯಾ, ಇರಾನ್, ಅರ್ಜೆಂಟೇನಾ ಹಾಗೂ ಸ್ವಿಟ್ಜರ್‌ಲೆಂಡ್‌ನ ಪರ್ವತಾರೋಹಣ ಕ್ಲಬ್‌ನಿಂದ ಒಟ್ಟು 6 ಮಂದಿ ಆಯ್ಕೆಯಾಗಿದ್ದಾರೆ. ಭಾರತೀಯ ಪರ್ವತಾರೋಹಣ ಪ್ರತಿಷ್ಠಾನಕ್ಕೆ ಹೊಸ ಗಾಂಭೀರ್ಯ ತಂದುಕೊಟ್ಟ ಕೀರ್ತಿ ಅಮಿತ್ ಚೌಧರಿಗಿದೆ.
ಅಮಿತ್ ಚೌಧರಿ ಪರಿಚಯ:
1992ರಿಂದ 1996ರ ವರೆಗೆ ಗುಲ್ಮಾರ್ಗ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕೀಯಿಂಗ್ ಹಾಗೂ ಪರ್ವತಾರೋಹಣದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
2005 ರ ಎವರೆಸ್ಟ್ ಪರ್ವತಾರೋಹಣದ 1 ನೇ IAF ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
2001ರಿಂಗ 2006ರ ವರೆಗೆ ವಾಯುಪಡೆಯ ಅಡ್ವೆಂಚರ್ ವಿಂಗ್ ನಿರ್ದೇಶಕ
2013ರಿಂದ 2017ರ ವರೆಗೆ ಭಾರತೀಯ ಪರ್ವತಾರೋಹಣ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷ
2014ರಲ್ಲಿ ಜೀವಮಾನ ಶ್ರೇಷ್ಠ ತೆನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ (ಅರ್ಜುನ ಪ್ರಶಸ್ತಿ ಸರಣಿ)ಗೆ ಭಾಜನರಾಗಿದ್ದಾರೆ.
ಪ್ರಸ್ತುತ ಜವಾಬ್ದಾರಿ
2017ರಿಂದ UIAA ಸುರಕ್ಷತಾ ಆಯೋಗದ ಅಧ್ಯಕ್ಷ
ಭಾರತೀಯ ಪರ್ವತಾರೋಹಣ ಪ್ರತಿಷ್ಠಾನದಲ್ಲಿ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ
ಅಂತಾರಾಷ್ಟ್ರೀಯ ಕ್ಲೈಬಿಂಗ್ ಮತ್ತು ಪರ್ವತಾರೋಹಣ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆನಾಡದ ಆಲ್ಪೈನ್ ಕ್ಲಬ್ ಆಫ್‌ನ ಪೀಟರ್ ಮುಯಿರ್ ಆಯ್ಕೆಯಾಗಿದ್ದಾರೆ.