ಚೀನಾ ತಯಾರಿಸಿದ ಯಾವ ಉತ್ಪನ್ನ ಬಳಸಲ್ಲ: ವೇಟ್‌ಲಿಫ್ಟಿಂಗ್‌ ಸಂಸ್ಥೆಯ ದೃಢ ಸಂಕಲ್ಪ

ಬಾಯ್ಕಾಟ್ ಚೀನಾ ಉತ್ಪನ್ನ ಅಭಿಯಾನಕ್ಕೆ ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಕೈ ಜೋಡಿಸಿದೆ. ಚೀನಾ ನಿರ್ಮಿತ ಸಲಕರಣೆಗಳನ್ನು ನಿಷೇಧಿಸಿದ ಮೊದಲ ಭಾರತೀಯ ಕ್ರೀಡಾ ಸಂಸ್ಥೆ ಎನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. .

Indian weightlifting federation Join Hands Boycott China Products Campaign

ನವದೆಹಲಿ(ಜೂ.23): ಲಡಾಖ್‌ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಿಂದಾಗಿ ದೇಶದಲ್ಲಿ ಚೀನಾ ಉತ್ಪನ್ನಗಳ ನಿಷೇಧದ ಕೂಗು ಎದ್ದಿದೆ. ಇದರ ಬೆನ್ನಲ್ಲೇ ಭಾರತ ವೇಟ್‌ ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯೂಎಲ್‌ಎಫ್‌) ಚೀನಾ ನಿರ್ಮಿತ ಸಲಕರಣೆಗಳನ್ನು ಬಳಸುವುದಿಲ್ಲ ಎಂದು ಪ್ರಧಾನ ಕಾರ‍್ಯದರ್ಶಿ ಸಹದೇವ್‌ ಯಾದವ್‌ ಹೇಳಿದ್ದಾರೆ. 

ಹೀಗೆ ಚೀನಾ ನಿರ್ಮಿತ ಸಲಕರಣೆಗಳನ್ನು ನಿಷೇಧಿಸಿದ ಮೊದಲ ಕ್ರೀಡಾ ಸಂಸ್ಥೆ ಎನಿಸಿದೆ. ಚೀನಾ ಮೂಲದ ಜೆಕೆಸಿ ಕಂಪನಿಯಿಂದ ಕಳೆದ ವರ್ಷವಷ್ಟೇ ವೇಟ್‌ಲಿಫ್ಟಿಂಗ್‌ ಸಲಕರಣೆಗಳನ್ನು ಖರೀದಿಸಲಾಗಿತ್ತು. ಇದೀಗ ಚೀನಾ ಉತ್ಪನ್ನವನ್ನು ಬಳಸದಿರುವ ಅಭಿಯಾನ ಆರಂಭಿಸಿದ್ದರಿಂದ ವೇಟ್‌ ಲಿಫ್ಟಿಂಗ್‌ ಸಂಸ್ಥೆಯ ಕ್ರೀಡಾಪಟುಗಳು ಅದನ್ನು ಬಳಸದಿರಲು ನಿರ್ಧರಿಸಿದ್ದಾರೆ.

ಸದ್ಯಕ್ಕೆ ಮಾತ್ರವಲ್ಲ, ಇನ್ನು ಮುಂದೆಯೂ ಚೀನಾ ಉತ್ಫನ್ನಗಳನ್ನು ನಾವು ಬಳಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ. ಇನ್ನು ಭಾರತದಲ್ಲಿ ತಯಾರಿಸಿದ ಇಲ್ಲವೇ ಬೇರೆ ದೇಶಗಳ ಕಂಪನಿಗಳು ತಯಾರಿಸಿದ ಕ್ರೀಡಾಪರಿಕರಗಳನ್ನು ಬಳಸುತ್ತೇವೆ. ಆದರೆ ಚೀನಾ ಉತ್ಫನ್ನಗಳನ್ನು ಮಾತ್ರ ಖರೀದಿಸುವುದಿಲ್ಲ ಎಂದು ಸಹದೇವ್‌ ಯಾದವ್‌ ಹೇಳಿದ್ದಾರೆ.  

ವೈದ್ಯಕೀಯ ಪರೀಕ್ಷೆಗೆ ಒಳಗಾದ ಕರ್ನಾಟಕ ಕ್ರಿಕೆಟರ್ಸ್

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ತರಬೇತಿ ಶಿಬಿರಗಳು ಆರಂಭವಾಗಿವೆ. ನಮ್ಮ ತರಬೇತಿ ಶಿಬಿರದಲ್ಲಿರುವವರೆಲ್ಲರೂ ಚೀನಾ ವಿರುದ್ಧವಾಗಿದ್ದಾರೆ. ನಮ್ಮ ವೇಟ್‌ಲಿಫ್ಟರ್‌ಗಳು ಚೀನಾ ಅಪ್ಲಿಕೇಷನ್ ಟಿಕ್ ಟಾಕ್ ಬಳಸುವುದನ್ನು ನಿಲ್ಲಿಸಿದ್ದಾರೆ. ಆನ್‌ಲೈನ್‌ನಲ್ಲಿ ಉತ್ಫನ್ನಗಳನ್ನು ಬುಕ್ ಮಾಡುವಾಗ ಯಾವ ದೇಶದಲ್ಲಿ ತಯಾರಾಗಿದ್ದು ಎನ್ನುವುದನ್ನು ಎಚ್ಚರಿಕೆಯಿಂದಲೇ ಗಮನಿಸಿ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಕೋಚ್ ವಿಜಯ್ ಶರ್ಮಾ ಹೇಳಿದ್ದಾರೆ.

ಇನ್ನು ಭಾರತೀಯ ಓಲಿಂಪಿಕ್ ಅಸೋಸಿಯೇಷನ್ ಕೂಡಾ ಚೀನಾ ಉತ್ಫನ್ನ ಹಾಗೂ ಪ್ರಾಯೋಜಕತ್ವ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಕುತಂತ್ರಿ ಚೀನಾ ಬಗ್ಗುಬಡಿಯಲು ಪ್ರಧಾನಿ ಮೋದಿಗೆ ಸಿಕ್ತು ದಿವ್ಯಾಸ್ತ್ರ..!

ಈ ಮೊದಲು BSNL 4Gಗೆ ಉನ್ನತೀಕರಿಸುವ ಪ್ರಕ್ರಿಯೆಗೆ ಚೀನಾ ಸಲಕರಣೆಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಜೂನ್ 15ರ ತಡರಾತ್ರಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದರು. ಇದೀಗ ಉಭಯ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದೆ.

Latest Videos
Follow Us:
Download App:
  • android
  • ios