ಹೈದರಾಬಾದ್(ಮೇ.14): ಭಾರತದ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಪುತ್ರ ಇಜಾನ್ ಮಿರ್ಜಾ ಮುದ್ದಾದ ತಾಯಿ ಮಗನ ಜೋಡಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಎಲ್ಲರ ಆಕರ್ಷಣೆಯ ಕೇಂದ್ರವೆನಿಸುತ್ತಾರೆ.

ಇದೀಗ ಈದ್ ಹಬ್ಬದ ಶುಭ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ತಮ್ಮ ಪುತ್ರ ಇಜಾನ್ ಮಿರ್ಜಾ ಜತೆ ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಸಾನಿಯಾ ಹಸಿರು ಬಣ್ಣದ ಸಲ್ವಾರ್ ಸೂಟ್‌ ಹಾಗೂ ಕಿವಿಗೆ ಚಾಂದ್‌ಬಲಿ ಕಿವಿಯೋಲೆ ಹಾಗೂ ಕಾಲಿಗೆ ಸ್ಲೈಡರ್ ಚಪ್ಪಲಿ ಧರಿಸಿ ಫೋಸ್‌ ಕೊಟ್ಟಿದ್ದಾರೆ. ತಾಯಿಯಂತೆ ಮಗ ಇಜಾನ್ ಸಹಾ ತಾನೇನು ಕಮ್ಮಿಯಿಲ್ಲ ಎನ್ನುವಂತೆ ಹಸಿರು ಬಣ್ಣದ ಕುರ್ತಾ ಹಾಗೂ ಬಿಳಿ ಫೈಜಾಮದ ಜತೆಗೆ ಸ್ಪೈಡರ್‌ಮನ್‌ ಗ್ಲಾಸ್‌ ಕೈಯಲ್ಲಿ ಹಿಡಿದು ಪೋಸ್ ಕೊಟ್ಟಿದ್ದಾನೆ.

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!

 
 
 
 
 
 
 
 
 
 
 
 
 
 
 

A post shared by Sania Mirza (@mirzasaniar)

ಸಾಮಾನ್ಯವಾಗಿ ಸಾನಿಯಾ ಮಿರ್ಜಾ ಹಾಗೂ ಇಜಾನ್ ಮಿರ್ಜಾ ಸಾರ್ವಜನಿಕವಾಗಿ ಬಂದಾಗಲೆಲ್ಲಾ ಸ್ಟ್ರೈಲೀಷ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಈ ಫೋಟೋದಲ್ಲಿ ನೋಡಿ ಸಾನಿಯಾ ಲೆಪೋರ್ಡ್‌ ಪ್ರಿಂಟ್‌ ಶರ್ಟ್‌, ಕಪ್ಪು ಬಣ್ಣದ ಲೆದರ್ ಲೆಗ್ಗಿನ್ಸ್‌ನಲ್ಲಿ ಮಗನ ಜತೆ ಪೋಸ್ ಕೊಟ್ಟಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sania Mirza (@mirzasaniar)

ಸಾನಿಯಾ ತನ್ನ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಮಗ ಇಜಾನ್ ಜತೆ ಸೀನಿಕ್‌ ಮರುಭೂಮಿಯಲ್ಲಿ ಫೋಸ್ ಕೊಟ್ಟ ಕ್ಷಣ
 

 
 
 
 
 
 
 
 
 
 
 
 
 
 
 

A post shared by Sania Mirza (@mirzasaniar)