ಅಂತಾರಾಷ್ಟ್ರೀಯ ಟೆನಿಸ್ ಫಿಕ್ಸಿಂಗ್ ಕಿಂಗ್‌ಪಿನ್ ಭಾರತೀಯ!
ಟೆನಿಸ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ರೂವಾರಿ ಭಾರತೀಯ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.30): ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್‌ಗೆ ಭಾರತೀಯ ಫಿಕ್ಸರ್‌ಗಳೇ ಕಾರಣ ಎನ್ನುವ ಆಘಾತಕಾರಿ ವಿಚಾರವನ್ನು ಆಸ್ಪ್ರೇಲಿಯಾದ ವಿಕ್ಟೋರಿಯಾ ಪೊಲೀಸರು ಬಹಿರಂಗಪಡಿಸಿದ್ದಾರೆ.
2018ರಲ್ಲಿ ನಡೆದಿದ್ದ ಬ್ರೆಜಿಲ್ ಹಾಗೂ ಈಜಿಪ್ಟ್‌ಗಳಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಕೆಳ ಹಂತದ ಶ್ರೇಯಾಂಕ ಹೊಂದಿರುವ ಆಟಗಾರರಿಗೆ ಬಲೆ ಬೀಸಿ, ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಮಾಡಿದ ಆರೋಪದ ಮೇಲೆ ಅದೇ ವರ್ಷ ಮೇ ತಿಂಗಳಲ್ಲಿ ರಾಜೇಶ್ ಕುಮಾರ್ ಹಾಗೂ ಹರ್ಸಿಮ್ರತ್ ಸಿಂಗ್ ಎನ್ನುವ ಭಾರತೀಯ ಮೂಲದ ವ್ಯಕ್ತಿಗಳನ್ನು ಮೆಲ್ಬರ್ನ್‌ನಲ್ಲಿ ಬಂಧಿಸಲಾಗಿತ್ತು. ವಿಚಾರಣೆ ಮುಂದುವರಿದಂತೆ, ಈ ಫಿಕ್ಸಿಂಗ್‌ನ ಕಿಂಗ್‌ಪಿನ್ ಮೊಹಾಲಿಯ ನಿವಾಸಿ ರವೀಂದರ್ ದಂಡಿವಾಲ್ ಎನ್ನುವುದು ತಿಳಿದುಬಂದಿದೆ.
ಬಿಸಿಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!
ದಂಡಿವಾಲ್, ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ ಎನ್ನುವ ಅನಧಿಕೃತ ಕ್ರಿಕೆಟ್ ಸಂಸ್ಥೆಯನ್ನೂ ನಡೆಸುತ್ತಿದ್ದು ಭಾರತ, ನೇಪಾಳ ಸೇರಿದಂತೆ ಹಲವೆಡೆ ಟಿ20 ಲೀಗ್‌ಗಳನ್ನು ನಡೆಸಿದ್ದಾನೆ. ಈ ಲೀಗ್‌ಗಳಲ್ಲಿ ಅಕ್ರಮ ನಡೆದಿರುವ ವರದಿ ಆಗಿದೆ. ಈ ವ್ಯಕ್ತಿಯ ಮೇಲೆ ಬಿಸಿಸಿಐ ಕಳೆದ 3-4 ವರ್ಷಗಳಿಂದ ಕಣ್ಣಿಟ್ಟಿದ್ದು, ಆಟಗಾರರಿಗೆ ಈತನಿಂದ ದೂರವಿರಲು ಸೂಚಿಸಲಾಗಿದೆ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರದಳದ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.