ಇಂದು ಲೊಪ್ಸನ್‌ ವಿರುದ್ಧ ಬಾಕ್ಸರ್‌ ವಿಜೇಂದರ್‌ ಕಣಕ್ಕೆ

ಭಾರತದ ಸ್ಟಾರ್ ಬಾಕ್ಸರ್‌ ವಿಜೇಂದರ್ ಸಿಂಗ್ ತಮ್ಮ ಅಜೇಯ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸವನ್ನು ಹೊಂದಿದ್ದು, ರಷ್ಯಾದ ಆರ್ಟಿಶ್‌ ಲೊಪ್ಸನ್‌ ವಿರುದ್ದ ಕಾದಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Indian Star Boxer Vijender Singh aims to extend unbeaten run against Artysh Lopsan kvn

ಪಣಜಿ(ಮಾ.19): ಭಾರತದ ವೃತ್ತಿಪರ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಮ್ಮ ಅಜೇಯ ಓಟ ಮುಂದುವರಿಸುವ ಉತ್ಸಾಹದಲ್ಲಿದ್ದು, ಶುಕ್ರವಾರ ಇಲ್ಲಿನ ಹಡಗೊಂದರಲ್ಲಿರುವ ಕ್ಯಾಸಿನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಷ್ಯಾದ ಆರ್ಟಿಶ್‌ ಲೊಪ್ಸನ್‌ ವಿರುದ್ಧ ಸೆಣಸಲಿದ್ದಾರೆ. 

ವೃತ್ತಿಪರ ಬಾಕ್ಸಿಂಗ್‌ನಲ್ಲಿ 12-0 ಗೆಲುವು-ಸೋಲಿನ ದಾಖಲೆ ಹೊಂದಿರುವ ವಿಜೇಂದರ್‌ಗೆ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. 26 ವರ್ಷದ ಲೊಪ್ಸನ್‌ ತಮ್ಮ ವೃತ್ತಿಬದುಕಿನಲ್ಲಿ 6 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಜಯ, ತಲಾ 1 ಸೋಲು, ಡ್ರಾ ಕಂಡಿದ್ದಾರೆ.

ಬಾಕ್ಸರ್‌ ವಿಜೇಂದರ್‌ ಸಿಂಗ್ ಮಾರ್ಚ್‌ನಲ್ಲಿ ಅಖಾಡಕ್ಕೆ

ಪಂದ್ಯ: ರಾತ್ರಿ 8ಕ್ಕೆ, 
ನೇರ ಪ್ರಸಾರ: ಫ್ಯಾನ್‌ಕೋಡ್‌.ಕಾಮ್‌

ಹಾಲಿ ವಿಶ್ವ ಚಾಂಪಿಯನ್‌ ವಿರುದ್ಧ ಗೆದ್ದ ಜರೀನ್‌

ನವದೆಹಲಿ: ಭಾರತದ ಬಾಕ್ಸರ್‌ ನಿಖತ್‌ ಜರೀನ್‌ ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್‌ ರಷ್ಯಾದ ಪಾಲ್ಟೆಸವಾ ಎಕಟೆರಿನಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಅಚ್ಚರಿ ಮೂಡಿಸಿದ್ದಾರೆ. 

ಕ್ವಾರ್ಟರ್‌ ಫೈನಲ್‌ ಪ್ರವೇಶಿರುವ ಜರೀನ್‌, 2 ಬಾರಿ ವಿಶ್ವ ಚಾಂಪಿಯನ್‌ ಕಜಕಸ್ತಾನದ ಕಿಜೈಬೇ ನಾಜಿಮ್‌ ವಿರುದ್ಧ ಸೆಣಸಲಿದ್ದಾರೆ. ಭಾರತದ ಶಿವ ಥಾಪ, ಸೋನಿಯಾ ಲಾಥೆರ್‌, ಪವೀರ್ನ್ ಸಹ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ.

Latest Videos
Follow Us:
Download App:
  • android
  • ios