Asianet Suvarna News Asianet Suvarna News

ಭಾರತೀಯ ಒಲಿಂಪಿಕ್‌ ಸಂಸ್ಥೆಯ ಉಪಾಧ್ಯಕ್ಷ ಜನಾರ್ಧನ್ ಗೆಹ್ಲೋಟ್‌ ನಿಧನ

ಅಂತಾರಾಷ್ಟ್ರೀಯ ಕಬ್ಬಡಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜನಾರ್ಧನ್‌ ಸಿಂಗ್‌ ಗೆಹ್ಲೋಟ್‌(70)  ಜೈಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೆಹ್ಲೋಟ್‌ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತವಾಗಿದೆ.. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Indian Olympic association vice president Janardhan Singh Gehlot passes away kvn
Author
New Delhi, First Published Apr 29, 2021, 8:54 AM IST

ನವದೆಹಲಿ(ಏ.29): ಭಾರತೀಯ ಒಲಿಂಪಿಕ್‌ ಸಂಸ್ಥೆಯ ಉಪಾಧ್ಯಕ್ಷ, ಅಂತಾರಾಷ್ಟ್ರೀಯ ಕಬ್ಬಡಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜನಾರ್ಧನ್‌ ಸಿಂಗ್‌ ಗೆಹ್ಲೋಟ್‌(70) ಬುಧವಾರ ಜೈಪುರದಲ್ಲಿ ಕೊನೆಯುಸಿರೆಳೆದರು. ಗೆಹ್ಲೋಟ್‌ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ರಾಜಸ್ಥಾನದ ಮಾಜಿ ಸಚಿವರು ಆಗಿದ್ದ ಗೆಹ್ಲೋಟ್‌, ಅಮೆಚೂರ್‌ ಫೆಡರೇಷನ್‌ ಆಫ್‌ ಇಂಡಿಯಾದ ಮುಖ್ಯಸ್ಥರಾಗಿ 2013ರ ವರೆಗೆ 28 ವರ್ಷಗಳ ಸೇವೆ ಸಲ್ಲಿಸಿದ್ದರು. ಪ್ರಸ್ತುತ ರಾಜಸ್ಥಾನ ಒಲಿಂಪಿಕ್‌ ಒಕ್ಕೂಟದ ಅಧ್ಯಕ್ಷರಾಗಿಯೂ ಗೆಹ್ಲೋಟ್‌ ಸೇವೆ ಸಲ್ಲಿಸುತ್ತಿದ್ದರು. 

ಒಲಿಂಪಿಕ್ಸ್‌ ಬಿಡ್‌ ಸಲ್ಲಿಸಲು ಮುಂದಾದ ಕೇಜ್ರಿವಾಲ್ ಸರ್ಕಾರ, ಐಒಎ ಅಸಮಾಧಾನ..!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಹಿರಿಯ ನಾಯಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶ್ರೀ ಜನಾರ್ಧನ್ ಗೆಹ್ಲೋಟ್‌ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತಿದ್ದೇನೆ. ಮಾಜಿ ಸಚಿವ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ನ ಅಧ್ಯಕ್ಷರಾಗಿ ರಾಜಕೀಯ ಹಾಗೂ ಕ್ರೀಡೆಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಅವರ ಕುಟಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಶೋಕ್ ಗೆಹ್ಲೋಟ್‌ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. 

ಗೆಹ್ಲೋಟ್‌ ಅವರ ನಿಧನಕ್ಕೆ ಭಾರತೀಯ ಒಲಿಂಪಿಕ್‌ ಒಕ್ಕೂಟದ ಅಧ್ಯಕ್ಷ ನರೇಂದ್ರ ಬಾತ್ರಾ ಸೇರಿದಂತೆ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಪ್ರೊ ಕಬಡ್ಡಿ  ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹೃದಯಸ್ಪರ್ಶಿ ಸಂತಾಪ ಸೂಚಿಸಿದೆ. 
 

Follow Us:
Download App:
  • android
  • ios