Asianet Suvarna News Asianet Suvarna News

ಭಜರಂಗ್‌ ಪೂನಿಯಾಗೆ ಅಮೆರಿಕದಲ್ಲಿ ತರಬೇತಿ

ದೇಶದ ನಂ.1 ಕುಸ್ತಿಪಟು ಭಜರಂಗ್ ಪೂನಿಯಾ ಒಂದು ತಿಂಗಳುಗಳ ಕಾಲ ಅಮೆರಿಕದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Indian No 1 wrestler Bajrang Punia coach Shako upbeat about upcoming US stint kvn
Author
New Delhi, First Published Nov 29, 2020, 12:01 PM IST

ನವದೆಹಲಿ(ನ.29): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿರುವ ಭಾರತದ ತಾರಾ ಕುಸ್ತಿಪಟು ಭಜರಂಗ್‌ ಪೂನಿಯಾ ಅಮೆರಿಕದಲ್ಲಿ ಒಂದು ತಿಂಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 

ಭಜರಂಗ್‌ ತರಬೇತಿಗೆ ಮಿಷನ್‌ ಒಲಿಂಪಿಕ್‌ ಘಟಕ ಅನುಮತಿ ನೀಡಿದೆ. ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆ (ಟಾಫ್ಸ್‌)ಗೆ ನೆರವಾಗಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಮಿಷನ್‌ ಒಲಿಂಪಿಕ್‌ ಘಟಕವನ್ನು ರಚಿಸಿದೆ. ಡಿಸೆಂಬರ್ 4 ರಿಂದ ಜನವರಿ 3 ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲೀಫ್‌ ಕೀನ್‌ ಕುಸ್ತಿ ಕ್ಲಬ್‌ನಲ್ಲಿ ಭಜರಂಗ್‌ ಅಭ್ಯಾಸ ನಡೆಯಲಿದೆ. ಇದಕ್ಕಾಗಿ .14 ಲಕ್ಷ ಖರ್ಚು ಮಾಡಲಾಗುತ್ತಿದೆ. 

ಪ್ರೊ ಕಬಡ್ಡಿ ಮುಂದಿನ ವರ್ಷಕ್ಕೆ ಮುಂದೂಡಿಕೆ..!

ಸದ್ಯ ಭಜರಂಗ್‌, ಸೋನೆಪತ್‌ನ ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಜರಂಗ್‌ ತಮ್ಮ ಕೋಚ್‌ ಎಮ್ಜರೀಸ್‌ ಬೆಂತಿಂಡಿಸ್‌ ಮತ್ತು ಫಿಸಿಯೊ ಧನಂಜಯ ಜೊತೆಯಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಕಲೆದ ವರ್ಷ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 26 ವರ್ಷದ ಭಜರಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಭಜರಂಗ್ ಫೂನಿಯಾ, ಸಂಗೀತಾ ಫೊಗಟ್ ಅವರನ್ನು ವಿವಾಹವಾಗಿದ್ದರು. 

Follow Us:
Download App:
  • android
  • ios