ಭಾರತವು ತನ್ನ ಮೊದಲ MotoGP ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿರುವ ಬುದ್ಧ್ ಇಂಟರ್‌ನ್ಯಾಷನಲ್‌ ಸರ್ಕ್ಯೂಟ್‌ನಲ್ಲಿ ಆಯೋಜಿಸಲಿದೆ.

ಗ್ರೇಟರ್‌ ನೋಯ್ಡಾ (ಉತ್ತರ ಪ್ರದೇಶ) (ಸೆಪ್ಟೆಂಬರ್ 19, 2023): ಭಾರತವು ತನ್ನ ಮೊಟ್ಟ ಮೊದಲ ಮೋಟೋಜಿಪಿ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿರುವ ಬುದ್ಧ್ ಇಂಟರ್‌ನ್ಯಾಷನಲ್‌ ಸರ್ಕ್ಯೂಟ್‌ನಲ್ಲಿ ಆಯೋಜಿಸಲು ಸಿದ್ಧವಾಗಿದೆ. ಈ ಐತಿಹಾಸಿಕ ಘಟನೆಯು ಇದೇ ವೀಕೆಂಡ್‌ನಲ್ಲಿ ನಡೆಯಲಿದ್ದು, ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ 11 ತಂಡಗಳ 22 ರೈಡರ್‌ಗಳು ಭಾಗಿಯಾಗಲಿದ್ದಾರೆ. ಹಾಗೂ Moto2 (30) ಮತ್ತು Moto3 (30) ಸೇರಿದಂತೆ ಒಟ್ಟು 44 ರೈಡರ್‌ಗಳು ಭಾಗಿಯಾಗ್ತಾರೆ.

ಈ ಹಿಂದೆ 2011, 2012 ಮತ್ತು 2013 ರಲ್ಲಿ ಫಾರ್ಮುಲಾ 1 ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಆಯೋಜಿಸಿದ್ದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಈಗ Moto GP ಜಗತ್ತನ್ನು ಸ್ವಾಗತಿಸುತ್ತದೆ. ವಾರಾಂತ್ಯ ನಡೆಯಲಿರೋ ಈ ರೇಸ್‌ ಅಭ್ಯಾಸ ಅವಧಿಗಳು, ಎರಡು ಅರ್ಹತಾ ಅವಧಿಗಳು, 12-ಲ್ಯಾಪ್ ಸ್ಪ್ರಿಂಟ್ ರೇಸ್‌ ಮತ್ತು ಮುಖ್ಯ ರೇಸ್‌ ಅನ್ನು ಒಳಗೊಂಡಿರುತ್ತದೆ.

ಇದನ್ನು ಓದಿ: ಗಣೇಶ ಚತುರ್ಥಿಗೆ ಬಂಪರ್‌ ಆಫರ್‌: ಯಮಾಹಾ ಬೈಕ್‌ಗೆ ಸಖತ್‌ ಕ್ಯಾಶ್‌ಬ್ಯಾಕ್‌; 7999 ರೂ. ನಿಂದ ಡೌನ್‌ ಪೇಮೆಂಟ್‌!

ವೇಳಾಪಟ್ಟಿ ಇಲ್ಲಿದೆ:

ಶುಕ್ರವಾರ: ಉಚಿತ ಅಭ್ಯಾಸ ಅವಧಿಗಳು - ಸಂಜೆ 4 ರಿಂದ 5 ರವರೆಗೆ IST.

ಶನಿವಾರ: ಅಭ್ಯಾಸ ಅವಧಿಗಳು 10:40 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಂತಿಮ ಅಭ್ಯಾಸವು 11:10 ರಿಂದ. ಎರಡು ಅರ್ಹತಾ ಅವಧಿಗಳು ಬೆಳಿಗ್ಗೆ 11:20 ರಿಂದ 11:35 ರವರೆಗೆ ಮತ್ತು 11:45 ರಿಂದ ಮಧ್ಯಾಹ್ನ 12 ರವರೆಗೆ ನಡೆಯುತ್ತವೆ. ಮಧ್ಯಾಹ್ನ 3:30ಕ್ಕೆ ಸ್ಪ್ರಿಂಟ್ ರೇಸ್ ನಡೆಯಲಿದೆ.

ಇದನ್ನೂ ಓದಿ: ಟೆಸ್ಲಾದ ಐಷಾರಾಮಿ ಟ್ರಕ್‌ನಲ್ಲಿ ಎಲಾನ್‌ ಮಸ್ಕ್‌ ಜತೆ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಪತ್ನಿ ಸವಾರಿ

ಭಾನುವಾರ: ವಾರ್ಮ್-ಅಪ್ ಸೆಷನ್‌ಗಳು 11:20 ಕ್ಕೆ ಪ್ರಾರಂಭವಾಗುತ್ತವೆ, ನಂತರ 11:30 ರಿಂದ 12:05 ರವರೆಗೆ ಫ್ಯಾನ್‌ ಪರೇಡ್‌ ನಡೆಯುತ್ತದೆ. 24 ಲ್ಯಾಪ್‌ಗಳನ್ನು ವ್ಯಾಪಿಸಿರುವ ಮುಖ್ಯ ರೇಸ್‌ ಮಧ್ಯಾಹ್ನ 3:30 ರಿಂದ 4:20 ರವರೆಗೆ ನಡೆಯುತ್ತದೆ. ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್, ನವದೆಹಲಿಯಿಂದ ಸರಿಸುಮಾರು 50 ಕಿ.ಮೀ ದೂರದಲ್ಲಿದ್ದು, ಇದನ್ನು ಪ್ರಸಿದ್ಧ ಜರ್ಮನ್ ಎಂಜಿನಿಯರ್ ಹರ್ಮನ್ ಟಿಲ್ಕೆ ವಿನ್ಯಾಸಗೊಳಿಸಿದ್ದಾರೆ. ಇದು ಐದು ಎಡ ತಿರುವುಗಳು ಮತ್ತು ಎಂಟು ಬಲ ತಿರುವುಗಳನ್ನು ಒಳಗೊಂಡಂತೆ 13 ಮೂಲೆಗಳೊಂದಿಗೆ 4.96 ಕಿಮೀ ಉದ್ದದ ಟ್ರ್ಯಾಕ್ ಅನ್ನು ಹೊಂದಿದೆ. 3 ಮತ್ತು 4 ನೇ ತಿರುವುಗಳ ನಡುವೆ 1.0006 ಕಿ.ಮೀ ನೇರ ಸ್ಟ್ರೆಚ್‌ಗಳನ್ನು ಹೊಂದಿದೆ.

ಇನ್ನು, ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ನ ಸಂಘಟಕರು ರೆಡ್ ಬುಲ್ KTM ನ ಬ್ರಾಡ್ ಬೈಂಡರ್ ಸ್ಥಾಪಿಸಿದ 366.1 kmph ನ ವಿಶ್ವ ದಾಖಲೆಯನ್ನು ಮೀರಿದ ಟಾಪ್‌ಸ್ಪೀಡ್‌ ಅನ್ನು ಈ ರೇಸ್‌ನಲ್ಲಿ ನಿರೀಕ್ಷಿಸುತ್ತಾರೆ. MotoGP ಸರ್ಕ್ಯೂಟ್‌ನಲ್ಲಿ ಭಾರತವು ತನ್ನ ಛಾಪು ಮೂಡಿಸುತ್ತಿರುವುದರಿಂದ ವೀಕೆಂಡ್‌ನಲ್ಲಿ ನಡೆಯಲಿರೋ ರೋಮಾಂಚನಕಾರಿ ರೇಸ್‌ಗೆ ಸಿದ್ದರಾಗಿ. 

ಇದನ್ನೂ ಓದಿ: ಐಷಾರಾಮಿ ಮರ್ಸಿಡಿಸ್‌ ಕಾರು ಖರೀದಿಸಿದ ಖ್ಯಾತ ಬಾಲಿವುಡ್‌ ಬೆಡಗಿಯರು: ಕೋಟಿ ಕೋಟಿ ಕಾರಿನ ವೈಶಿಷ್ಟ್ಯತೆ ಹೀಗಿದೆ..