ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್: ಭಾರತದ ಸವಾಲು ಅಂತ್ಯ

ಥಾಯ್ಲೆಂಡ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳ ಹೋರಾಟ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Indian challenge ends in Thailand Open Badminton Tournament kvn

ಬ್ಯಾಂಕಾಕ್(ಜ.15)‌: ಕೋವಿಡ್‌ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ವಾಪಸಾದ ಭಾರತೀಯ ಶಟ್ಲರ್‌ಗಳಿಗೆ ನಿರಾಸೆಯಾಗಿದೆ. ಥಾಯ್ಲೆಂಡ್‌ ಓಪನ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ.

ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೈನಾ ನೆಹ್ವಾಲ್‌, ಸ್ಥಳೀಯ ಆಟಗಾರ್ತಿ ಬುಸನಾನ್‌ ವಿರುದ್ಧ 23-21, 14-21, 16-21 ಗೇಮ್‌ಗಳಲ್ಲಿ ಸೋಲುಂಡರು. ವಿಶ್ವ ನಂ.12 ಬುಸಾನನ್‌ ವಿರುದ್ಧ ಸೈನಾಗಿದು ಸತತ 4ನೇ ಸೋಲು.

ಸೈನಾ, ಪ್ರಣಯ್‌ ಕೋವಿಡ್‌ ಪರೀಕ್ಷಾ ವರದಿ ಗೊಂದಲ!

ಇನ್ನು ಕಿದಂಬಿ ಶ್ರೀಕಾಂತ್‌ ಮೀನಖಂಡದ ಗಾಯಕ್ಕೆ ತುತ್ತಾದ ಕಾರಣ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಿಂದ ನಿವೃತ್ತಿ ಪಡೆದು ಟೂರ್ನಿಯಿಂದ ಹೊರಬಿದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ 19-21, 17-21ರಲ್ಲಿ ಸೋಲುಂಡರೆ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್‌ ಜೋಡಿ ಪರಾಭವಗೊಂಡು ಹೊರಬಿತ್ತು. ಜ.19ರಿಂದ ಥಾಯ್ಲೆಂಡ್‌ ಓಪನ್‌ನ ಮತ್ತೊಂದು ಆವೃತ್ತಿಯಲ್ಲಿ ಭಾರತೀಯ ಶಟ್ಲರ್‌ಗಳು ಕಣಕ್ಕಿಳಿಯಲಿದ್ದಾರೆ.

Latest Videos
Follow Us:
Download App:
  • android
  • ios