ಪುಣೆ(ಮೇ.13): ಭಾರತದ ತಾರಾ ಬಾಕ್ಸರ್‌ಗಳಾದ ಮೇರಿ ಕೋಮ್‌ ಹಾಗೂ ಲೊವ್ಲಿನಾ ಬೊರ್ಗೊಹೇನ್‌ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡರು. 

ಈ ಇಬ್ಬರು ಇಲ್ಲಿನ ಸೇನಾ ಕ್ರೀಡಾ ಸಂಸ್ಥೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈವರೆಗೂ ಇಲ್ಲಿಯೇ ಅಭ್ಯಾಸ ಮುಂದುವರಿಸಲಿದ್ದು, ಟೋಕಿಯೋಗೆ ಹೊರಡುವ ಮುನ್ನ 2ನೇ ಡೋಸ್‌ ಲಸಿಕೆಯನ್ನು ಇಲ್ಲಿಯೇ ಹಾಕಿಸಿಕೊಳ್ಳಲಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತ ಟಿಟಿ ಪಟು ಚಂದ್ರ ನಿಧನ

ಚೆನ್ನೈ: ಕೊರೋನಾ ಸೋಂಕಿಗೆ ತುತ್ತಾಗಿದ್ದ ಅರ್ಜುನ ಪ್ರಶಸ್ತಿ ವಿಜೇತ ಭಾರತದ ಮಾಜಿ ಟೇಬಲ್‌ ಟೆನಿಸ್‌ ಆಟಗಾರ, ಮಾಜಿ ಕೋಚ್‌ ವಿ.ಚಂದ್ರಶೇಖರ್‌ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. 3 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಅವರು, 1982ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದರು. ಟೇಬಲ್‌ ಟೆನಿಸ್‌ ವಲಯದಲ್ಲಿ ಚಂದ್ರ ಎಂದೇ ಖ್ಯಾತಿ ಪಡೆದಿದ್ದ ಅವರು, ಭಾರತದ ಅಗ್ರ ಟಿಟಿ ಆಟಗಾರ ಜಿ. ಸತ್ಯನ್‌ರ ಬಾಲ್ಯದ ಕೋಚ್‌ ಆಗಿದ್ದರು.