Asianet Suvarna News Asianet Suvarna News

ಬಾಕ್ಸಿಂಗ್‌: ಸೆಮಿಫೈನಲ್‌ಗೆ ಅಮಿತ್‌ ಪಂಗಲ್‌ ಲಗ್ಗೆ

ಭಾರತದ ತಾರಾ ಬಾಕ್ಸರ್‌ ಅಮಿತ್‌ ಪಂಗಲ್ ಗೌರ್ನರ್‌ ಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Indian Boxer Amit Panghal Reaches Semis Of Governor Cup In Russia kvn
Author
New Delhi, First Published Apr 23, 2021, 9:27 AM IST

ನವದೆಹಲಿ(ಏ.23): ಭಾರತದ ತಾರಾ ಬಾಕ್ಸಿಂಗ್‌ ಪಟು ಅಮಿತ್‌ ಪಂಗಲ್‌(52 ಕೆ.ಜಿ.) ರಷ್ಯಾದ ಸೇಂಟ್‌ ಪಿಟರ್‌ಬರ್ಗ್‌ನಲ್ಲಿ ನಡೆಯುತ್ತಿರುವ ಗೌರ್ನರ್‌ ಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ರಷ್ಯಾದ ತಮೀರ್‌ ಗಾಲನೋವ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಮಿತ್‌ 5-0 ಅಂತರದಿಂದ ಜಯ ಸಾಧಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು. ಆದರೆ, ಸುಮಿತ್‌ ಸಾಂಗ್ವಾನ್‌(81 ಕೆ.ಜಿ.), ಮೊಹಮ್ಮದ್‌ ಹುಸಾಮುದ್ದೀನ್‌(57 ಕೆ.ಜಿ.), ನಮನ್‌ ತನ್ವಾರ್‌(91 ಕೆ.ಜಿ.), ಆಶಿಶ್‌ ಕುಮಾರ್‌(75 ಕೆ.ಜಿ.), ವಿನೋದ್‌ ತನ್ವಾರ್‌(49 ಕೆ.ಜಿ.) ಮೊದಲ ಸುತ್ತಿನಲ್ಲೇ ನಿರ್ಗಮಿಸಿ, ನಿರಾಸೆ ಅನುಭವಿಸಿದರು.

ವಿಶ್ವ ಯುವ ಬಾಕ್ಸಿಂಗ್ : ಭಾರತಕ್ಕೆ 7 ಚಿನ್ನದ ಪದಕ

ನವದೆಹಲಿ: ಪೊಲಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೀತಿಕಾ(48 ಕೆ.ಜಿ.) ಹಾಗೂ ಬಾಬಿರೋಜಿಸಾನ ಚಾನು(51 ಕೆ.ಜಿ.) ಚಿನ್ನದ ಪದಕಕ್ಕೆ ಕೊರಲೊಡ್ಡಿದ್ದಾರೆ.

905 ಕೋಟಿ ರುಪಾಯಿಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಸ್ಟಾರ್ ಸ್ಪೋರ್ಟ್ಸ್‌ ಪಾಲು..!

ಗುರುವಾರ ನಡೆದ ಮಹಿಳೆಯ ವಿಭಾಗದ ಫೈನಲ್‌ನಲ್ಲಿ ಪೋಲಾಂಡ್‌ನ ನಟಾಲಿಯಾ ಕುಕ್ಜೆವಾಸ್ಕ ವಿರುದ್ಧ ಗೀತಿಕಾ 5-0 ಅಂತರದಿಂದ ಜಯ ಸಾಧಿಸಿದರೆ, ರಷ್ಯಾದ ವಲೇರಿಯಾ ಲಿಂಕೋವಾ ವಿರುದ್ಧ ಬಾಬಿರೋಜಿಸಾನ ಚಾನು 3-2 ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡರು.

ವಿಶ್ವ ಯೂತ್‌ ಚಾಂಪಿಯನ್‌ಶಿಪ್‌ನಲ್ಲಿ 7 ಮಹಿಳೆಯರು ಸೇರಿದಂತೆ ಒಟ್ಟು 8 ಮಂದಿ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿರುವ ಏಕೈಕ ಬಾಕ್ಸಿಂಗ್‌ಪಟು ಸಚಿನ್‌(56 ಕೆ.ಜಿ.) ಚಿನ್ನದ ಪದಕಕ್ಕಾಗಿ ಶುಕ್ರವಾರ ಸೆಣಸಾಟ ನಡೆಸಲಿದ್ದಾರೆ.
 

Follow Us:
Download App:
  • android
  • ios