Asianet Suvarna News Asianet Suvarna News

BWF Rankings: ಎರಡು ವರ್ಷಗಳ ಬಳಿಕ ಮತ್ತೆ ಟಾಪ್ 10ನೊಳಗೆ ಎಂಟ್ರಿ ಕೊಟ್ಟ ಶ್ರೀಕಾಂತ್

* BWF Rankings ನಲ್ಲಿ ಮತ್ತೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಕಿದಂಬಿ ಶ್ರೀಕಾಂತ್

* ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶ್ರೀಕಾಂತ್

* ಕಂಚು ಗೆದ್ದ 20 ವರ್ಷದ ಲಕ್ಷ್ಯ ಸೆನ್‌ ವೃತ್ತಿ ಬದುಕಿನ ಶ್ರೇಷ್ಠ 17ನೇ ಸ್ಥಾನಕ್ಕೆ ಜಿಗಿತ

Indian Ace Shuttler Kidambi Srikanth re enters top 10 BWF Rankings  after 2 years following BWF World Championships silver kvn
Author
Bengaluru, First Published Dec 22, 2021, 9:59 AM IST

ನವದೆಹಲಿ(ಡಿ.22): ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ (World Badminton Championship) ಬೆಳ್ಳಿ ಗೆದ್ದ ಕಿದಂಬಿ ಶ್ರೀಕಾಂತ್‌ (Kidambi Srikanth), 2 ವರ್ಷಗಳ ಬಳಿಕ ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ (BWF Rankings) ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ಪ್ರಕಟಗೊಂಡ ಪುರುಷರ ಸಿಂಗಲ್ಸ್‌ನ ನೂತನ ರ‍್ಯಾಂಕಿಂಗ್‌ನಲ್ಲಿ ಅವರು 4 ಸ್ಥಾನ ಏರಿಕೆ ಕಂಡು 10ನೇ ಸ್ಥಾನ ಪಡೆದಿದ್ದಾರೆ. 2018ರ ಏಪ್ರಿಲ್‌ನಲ್ಲಿ ಮೊದಲ ಬಾರಿ ವಿಶ್ವ ನಂ.1 ಸ್ಥಾನಕ್ಕೆ ಏರಿದ್ದರು. 

ಇನ್ನು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ 20 ವರ್ಷದ ಲಕ್ಷ್ಯ ಸೆನ್‌ ವೃತ್ತಿ ಬದುಕಿನ ಶ್ರೇಷ್ಠ 17ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆದರೆ ಸಾಯಿ ಪ್ರಣೀತ್‌ (Sai Praneeth) 19ನೇ ಸ್ಥಾನಕ್ಕೆ ಕುಸಿದಿದ್ದಾರೆ. ಎಚ್‌.ಎಸ್‌.ಪ್ರಣಯ್‌ 26ನೇ ಸ್ಥಾನ ಪಡೆದಿದ್ದು, ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) ಮಹಿಳಾ ಸಿಂಗಲ್ಸ್‌ನಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಕ್ರೀಡೆಗೆ 5 ವರ್ಷದಲ್ಲಿ 6800 ಕೋಟಿ ಬಿಡುಗಡೆ

ನವದೆಹಲಿ: ಕಳೆದ 5 ವರ್ಷಗಳಲ್ಲಿ ವಿವಿಧ ಕ್ರೀಡಾ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕ್ರೀಡಾ ಸಚಿವಾಲಯದಿಂದ 6,801 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ತಿಳಿಸಿದ್ದಾರೆ. 

ಈ ಬಗ್ಗೆ ಮಂಗಳವಾರ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ ಅವರು, ‘ಕ್ರೀಡಾ ಸಚಿವಾಲಯ ಕಳೆದ 5 ವರ್ಷಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸುಮಾರು 7,072.28 ಕೋಟಿ ರು. ಅನುದಾನ ಮೀಸಲಿಟ್ಟಿದೆ. ಈ ಪೈಕಿ 6,801 ಕೋಟಿ ರು. ಈಗಾಗಲೇ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಡೋಪಿಂಗ್‌: ಭಾರತ ವಿಶ್ವದ ಟಾಪ್‌ 3 ದೇಶ!

ನವದೆಹಲಿ: ಡೋಪಿಂಗ್‌ (Doping) ನಿಯಮ ಉಲ್ಲಂಘನೆ ಮಾಡುವ ವಿಶ್ವದ ಅಗ್ರ 3 ದೇಶಗಳಲ್ಲಿ ಭಾರತವೂ ಒಳಗೊಂಡಿದೆ ಎಂದು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(ವಾಡಾ) ವರದಿಯಲ್ಲಿ ಬಹಿರಂಗಪಡಿಸಿದೆ. 2019ರಲ್ಲಿ ಭಾರತದಲ್ಲಿ 152 ಡೋಪಿಂಗ್‌ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. 

BWF World Championships : ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಕಿದಂಬಿ ಶ್ರೀಕಾಂತ್

ಇದು ವಿಶ್ವ ಡೋಪಿಂಗ್‌ ಪ್ರಕರಣಗಳಲ್ಲಿ ಶೇ.17 ರಷ್ಟಿದ್ದು, ಅತೀ ಹೆಚ್ಚು ಪ್ರಕರಣ ದೇಹದಾಢ್ರ್ಯ(57) ಸ್ಪರ್ಧೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೇಟ್‌ಲಿಫ್ಟಿಂಗ್‌ನಲ್ಲಿ 25, ಅಥ್ಲೆಟಿಕ್ಸ್‌ 20, ಕುಸ್ತಿ 10 ಹಾಗೂ ಕ್ರಿಕೆಟ್‌ನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದೆ. ಡೋಪಿಂಗ್‌ ಪ್ರಕರಣದಲ್ಲಿ ರಷ್ಯಾ(167), ಇಟಲಿ(157) ಮೊದಲೆರಡು ಸ್ಥಾನಗಳಲ್ಲಿವೆ. 2018ರಲ್ಲಿ ಭಾರತ 4ನೇ ಸ್ಥಾನದಲ್ಲಿತ್ತು.

ಜನವರಿ 14ರಂದು ಬೆಂಗಳೂರಿಗೆ ಕಾಮನ್ವೆಲ್ತ್‌ ಕ್ರೀಡಾಜ್ಯೋತಿ

ನವದೆಹಲಿ: 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ (Birmingham Commonwealth Games) ಕ್ರೀಡಾಜ್ಯೋತಿ ಜನವರಿಯಲ್ಲಿ ಭಾರತಕ್ಕೆ ಬರಲಿದ್ದು, ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಸಂಚರಿಸಲಿದೆ. ಗೇಮ್ಸ್‌ ಜುಲೈ 28 ರಿಂದ ಆಗಸ್ಟ್ 8ರವರೆಗೆ ನಡೆಯಲಿದ್ದು, ಇದರ ಭಾಗವಾಗಿ ಗೇಮ್ಸ್‌ನ ಕ್ರೀಡಾಜ್ಯೋತಿ 269 ದಿನಗಳ ಕಾಲ 72 ರಾಷ್ಟ್ರಗಳಲ್ಲಿ ಸಂಚರಿಸಲಿದೆ. 

PKL 2021: ಲೇ.. ಪಂಗಾ..! ಇಂದಿನಿಂದ ಪ್ರೊ ಕಬಡ್ಡಿ ಕಲರವ ಶುರು

ಇದೇ ವೇಳೆ ಕ್ರೀಡಾಜ್ಯೋತಿ ಜನವರಿ 12ಕ್ಕೆ ಭಾರತಕ್ಕೆ ಆಗಮಿಸಲಿದ್ದು, ಮೊದಲ ದಿನ ದೆಹಲಿಯಲ್ಲಿ ಸಂಚರಿಸಲಿದೆ. ಬಳಿಕ ಅಹಮದಾಬಾದ್‌(ಜ.13), ಬೆಂಗಳೂರು(ಜ.14) ಹಾಗೂ ಒಡಿಶಾ(ಜ.15)ದಲ್ಲಿ ಸಂಚಾರ ನಡೆಸಲಿದೆ. ಕ್ರೀಡಾಜ್ಯೋತಿ ಸಂಚಾರದ ಸಿದ್ಧತೆಗಾಗಿ ಸಮಿತಿ ರಚಿಸಲಾಗುವುದು ಎಂದು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷ ನರೇಂದ್ರ ಬಾತ್ರಾ ತಿಳಿಸಿದ್ದಾರೆ.
 

Follow Us:
Download App:
  • android
  • ios