ನವ​ದೆ​ಹ​ಲಿ(ನ.20): ಭಾರತ-ಪಾಕಿ​ಸ್ತಾನ ನಡುವೆ ನ.29, 30ರಂದು ನಡೆ​ಯ​ಲಿ​ರುವ ಏಷ್ಯಾ/ಓಷಿ​ಯಾ​ನಿಯಾ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಕ್ಕೆ ಕಜ​ಕ​ಸ್ತಾ​ನದ ನೂರ್‌-ಸುಲ್ತಾನ್‌ ಆತಿಥ್ಯ ವಹಿ​ಸ​ಲಿದೆ ಎಂದು ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ನ್‌ (ಐಟಿಎಫ್‌) ಖಚಿತಪಡಿ​ಸಿದೆ. 

ಇದನ್ನೂ ಓದಿ: ಡೇವಿಸ್ ಕಪ್: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ.

ವಿಪ​ರೀತ ಚಳಿ ಇರುವ ಕಾರಣ, ಪಂದ್ಯವನ್ನು ಒಳಾಂಗಣ ಕೋರ್ಟ್‌ನಲ್ಲಿ ನಡೆಸಲು ನಿರ್ಧ​ರಿ​ಸಲಾಗಿದೆ. ಇದು ಭಾರತಕ್ಕೆ ನೆರ​ವಾಗವಾಗ​ಲಿದೆ. ‘ಒ​ಳಾಂಗಣದಲ್ಲಿ ಆಡುವ ಟೆನಿಸ್‌ನ ಗುಣ​ಮಟ್ಟಹೆಚ್ಚಿರ​ಲಿದೆ. ಗಾಳಿ, ಬಿಸಿ​ಲಿನ ಸಮ​ಸ್ಯೆ ಇರು​ವು​ದಿಲ್ಲ. ನಮ್ಮ ಆಟ​ಗಾ​ರ​ರ ಆಟದ ಶೈಲಿಗೆ ಒಳಾಂಗಣ ಟೆನಿಸ್‌ ಸೂಕ್ತ. 

ಇದನ್ನೂ ಓದಿ: ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ

ಹೀಗಾಗಿ ನಮಗೆ ಲಾಭ​ವಾ​ಗ​ಲಿದೆ’ ಎಂದು ಭಾರತ ತಂಡದ ಕೋಚ್‌ ಝೀಶಾನ್‌ ಅಲಿ ಹೇಳಿ​ದ್ದಾರೆ. ರೋಹನ್‌ ಬೋಪಣ್ಣ ಭುಜದ ಗಾಯಕ್ಕೆ ತುತ್ತಾ​ಗಿದ್ದು, ಪಂದ್ಯ​ದಿಂದ ಹೊರ​ಬಿ​ದ್ದಿ​ದ್ದಾರೆ. ಆದರೆ ಭಾರತ ತಂಡ​ದಲ್ಲಿ ಡಬಲ್ಸ್‌ನಲ್ಲಿ ಅನು​ಭವಿ ಆಟ​ಗಾ​ರ​ರಾದ ಲಿಯಾಂಡರ್‌ ಪೇಸ್‌ ಹಾಗೂ ಜೀವನ್‌ ಮುನ್ನಡೆಸಲಿ​ದ್ದಾರೆ.