ಅಕಪುಲ್ಕೊ(ಮಾ.18): 6 ವರ್ಷಗಳ ಬಳಿಕ ಒಂದಾಗಿದ್ದ ‘ಇಂಡೋ-ಪಾಕ್‌ ಎಕ್ಸ್‌ಪ್ರೆಸ್‌’ ಖ್ಯಾತಿಯ ರೋಹನ್‌ ಬೋಪಣ್ಣ ಹಾಗೂ ಖುರೇಷಿ ಜೋಡಿ ಅಕಪುಲ್ಕೊ ಎಟಿಪಿ 500 ಟೆನಿಸ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಆರಂಭಿಕ ಆಘಾತಕ್ಕೆ ಒಳಗಾಗಿದ್ದಾರೆ.

ಬ್ರುನೋ ಸೊರೆಸ್‌ ಹಾಗೂ ಜೇಮಿ ಮುರ್ರೆ ಜೋಡಿಯ ವಿರುದ್ಧ ಇಂಡೋ-ಪಾಕ್‌ ತಂಡದ ಆಟಗಾರರು 7-6, 2-6, 1-10 ಅಂತರದಿಂದ ಸೋಲುಂಡರು. ಮೊದಲ ಸೆಟ್‌ನಲ್ಲಿ 7-6 ಅಂತರದಿಂದ ಗೆದ್ದ ಬೋಪಣ್ಣ ಜೋಡಿಗೆ, ಸೊರೆಸ್‌ ಮತ್ತು ಮುರ್ರೆ ಜೋಡಿ 2 ಮತ್ತು 3ನೇ ಸೆಟ್‌ನಲ್ಲಿ ತಿರುಗೇಟು ನೀಡಿತು. ಇದರೊಂದಿಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಬೋಪಣ್ಣ-ಖುರೇಷಿ ಜೋಡಿ ನಿರಾಸೆಯನ್ನುಂಟು ಮಾಡಿತು.

ಎಟಿಪಿ ವಿಶ್ವ ರ‍್ಯಾಂಕಿಂಗ್‌: ಜೋಕೋವಿಚ್‌ ನಂ.1 ದಾಖಲೆ..!

ಈಕ್ವೆಸ್ಟ್ರಿಯನ್‌: ಭಾರತ ತಂಡಕ್ಕೆ 2 ಚಿನ್ನದ ಪದಕ

ಗ್ರೇಟರ್‌ ನೋಯ್ಡಾ: ಈಕ್ವೆಸ್ಟ್ರಿಯನ್‌ ಐಟಿಪಿಎಫ್‌ ವರ್ಲ್ಡ್‌ ಕಪ್‌ ಕ್ವಾಲಿಫೈಯ​ರ್ಸ್ ಟೆಂಟ್‌ ಪೆಗ್ಗಿಂಗ್‌ ವಿಭಾಗದಲ್ಲಿ ಭಾರತ ತಂಡ 2 ಚಿನ್ನದ ಪದಕ ಗಳಿಸಿದೆ. ಸ್ವಾರ್ಡ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ 111 ಅಂಕ ಗಳಿಸಿದ ಭಾರತ ಚಿನ್ನ ಜಯಿಸಿತು. ವೈಯಕ್ತಿಕ ವಿಭಾಗದಲ್ಲಿ ಭಾರತದ ದಿನೇಶ್‌ ಜಿ ಕಾರ್ಲೇಕರ್‌ ಚಿನ್ನ ಗೆದ್ದರೆ, ಸಂದೀಪ್‌ ಕುಮಾರ್‌ ಬೆಳ್ಳಿ ಪದಕಕ್ಕೆ ಕೊರಲೊಡ್ಡಿದರು.