Asianet Suvarna News Asianet Suvarna News

ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕ ಗೆದ್ದು ಹೊಸ ಮೈಲಿಗಲ್ಲು ನೆಟ್ಟ ಭಾರತ..! ನೆರೆಯ ಚೀನಾ, ಪಾಕಿಸ್ತಾನ ಗೆದ್ದ ಪದಕಗಳೆಷ್ಟು?

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

India Ends Paris Paralympics 2024 With 29 Medals China Got no 1 and Pakistan rock bottom kvn
Author
First Published Sep 8, 2024, 3:59 PM IST | Last Updated Sep 8, 2024, 3:59 PM IST

ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಭಾನುವಾರ ಅಂತ್ಯವಾಗಿದ್ದು, ದೇಶದ ಪ್ಯಾರಾ ಅಥ್ಲೀಟ್‌ಗಳ ಸರ್ವಶ್ರೇಷ್ಠ ಪ್ರದರ್ಶನ ತೋರಿವೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟಾರೆ 29 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎನಿಸಿಕೊಂಡಿವೆ.

ಹೌದು, ಭಾರತದ ಪ್ಯಾರಾ ಅಥ್ಲೀಟ್‌ಗಳು 29 ಪದಕಗಳನ್ನು ಜಯಿಸುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ಇನ್ನು ಭಾರತದಂತೆ ನೆರೆಯ ಪಾಕಿಸ್ತಾನ ಕೂಡಾ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ತಮ್ಮ ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿತ್ತು. ಆದರೆ ಪಾಕಿಸ್ತಾನ  ಕೇವಲ ಒಂದು ಕಂಚಿನ ಪದಕ ಜಯಿಸುವ ಮೂಲಕ ಜಂಟಿ 79ನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಸಚಿನ್, ಕೊಹ್ಲಿ ಕ್ಲಬ್‌ಗೆ ಸೇರಲು ರೋಹಿತ್ ಶರ್ಮಾ ರೆಡಿ; ಬಾಂಗ್ಲಾ ಎದುರು ಅಬ್ಬರಿಸ್ತಾರಾ ಹಿಟ್‌ಮ್ಯಾನ್..?

ಇನ್ನು ಭಾರತಕ್ಕೆ ಹೋಲಿಸಿದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾ, ಗ್ರೇಟ್‌ ಬ್ರಿಟನ್, ಯುಎಸ್‌ಎ, ಇಟಲಿ ಇನ್ನಿತರ ದೇಶಗಳ ಪದಕ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಚೀನಾ 94 ಚಿನ್ನ ಸಹಿತ 217 ಪದಕಗಳನ್ನು ಗಳಿಸಿ ನಂ.1 ಸ್ಥಾನದಲ್ಲಿ ಭದ್ರವಾದರೆ, ಗ್ರೇಟ್ ಬ್ರಿಟನ್ 47 ಚಿನ್ನದ ಪದಕ ಸಹಿತ 120 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಯುಎಸ್‌ಎ 36 ಚಿನ್ನ ಸಹಿತ 103 ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿವೆ. ಈ ಮೂರು ದೇಶಗಳನ್ನು ಹೊರತುಪಡಿಸಿ ಬೇರೆ ಯಾವ ದೇಶವೂ ಮೂರಂಕಿ ಪದಕ ಬೇಟೆಯಾಡಲು ಯಶಸ್ವಿಯಾಗಿಲ್ಲ.
 

Latest Videos
Follow Us:
Download App:
  • android
  • ios