ಕೊರೋನಾ ಯುದ್ಧ ಗೆಲ್ಲಲು ಕ್ರೀಡೆ ಸಹಕಾರಿ: ಪಿ.ವಿ. ಸಿಂಧು

ಪ್ರತಿಯೊಬ್ಬರೂ ದೈಹಿಕ ಚಟುವಟಿಕೆಯನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ತುಂಬಾ ಮುಖ್ಯವಾಗಿವೆ ಎಂದು ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಹೇಳಿದ್ದಾರೆ. ಅಲ್ಲದೇ ಕೊರೋನಾ ಗೆಲ್ಲಲು ಕ್ರೀಡೆ ಸಹಕಾರಿಯಾಗಿದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India Ace Shuttler PV Sindhu Says Sports Can Help Win Battle Against COVID 19 Pandemic

ನವದೆಹಲಿ(ಜೂ.23): ಜಗತ್ತಿನಲ್ಲಿರುವ ಮಾರಕ ವೈರಸ್‌ ಕೊರೋನಾದಂತಹ ಯುದ್ಧವನ್ನು ಗೆಲ್ಲುವುದಕ್ಕೆ ಕ್ರೀಡೆ ನೆರವಾಗಲಿದೆ ಎಂದು ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಬೆಳ್ಳಿ ವಿಜೇತೆ ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು ಹೇಳಿದ್ದಾರೆ. 

ಪ್ರತಿಯೊಬ್ಬರೂ ದೈಹಿಕ ಚಟುವಟಿಕೆಯನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ತುಂಬಾ ಮುಖ್ಯವಾಗಿವೆ. ಕೊರೋನಾದಂತಹ ಮಾರಕ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿರುವ ಕಾರಣ ಕ್ರೀಡೆ ಇದನ್ನು ಗೆಲ್ಲಲು ಸಹಾಕಾರಿಯಾಗಲಿದೆ ಎಂದು ಸಿಂಧು ಹೇಳಿದ್ದಾರೆ.

ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!

ಕೊರೋನಾ ಭೀತಿಯಿಂದಾಗಿ ಕಳೆದ 4 ತಿಂಗಳಿನಿಂದ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಇದೇ ಜುಲೈನಲ್ಲಿ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಪಟ್ಟಿದೆ. ಇನ್ನು ಟಿ20 ಕ್ರಿಕೆಟ್ ವಿಶ್ವಕಪ್ ಹಣೆಬರಹ ಇನ್ನೂ ನಿರ್ಧಾರವಾಗಿಲ್ಲ. ಇದರ ನಡುವೆ ಬಿಸಿಸಿಐ ಶತಾಯಗತಾಯ 13ನೇ ಆವೃತ್ತಿಯ ಐಪಿಎಲ್ ಸರ್ವರೀತಿಯ ಪ್ರಯತ್ನ ಮಾಡುತ್ತಿದೆ. ಜುಲೈನಿಂದ ಕ್ರೀಡಾಚಟುವಟಿಕೆಗಳು ಗರಿಗೆದರಲಿವೆ. ಲಾಕ್‌ಡೌನ್ ಬಳಿಕ ಜುಲೈ 08ರಂದು ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಜರುಗಲಿದ್ದು, ಈಗಾಗಲೇ ವಿಂಡೀಸ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. 

Latest Videos
Follow Us:
Download App:
  • android
  • ios