Asianet Suvarna News Asianet Suvarna News

World Chess: ಟಾಪ್‌ 100ರಲ್ಲಿ ಭಾರತದ 7 ಆಟಗಾರರು!

*ಇದೇ ಮೊದಲ ಬಾರಿಗೆ 7 ಆಟಗಾರರು ವಿಶ್ವ ರ‍್ಯಾಂಕಿಂಗ್‌ನ ಪಟ್ಟಿಯಲ್ಲಿ ಸ್ಥಾನ
*ಸ್ವಿಸ್‌ ಚೆಸ್‌ ಚಾಂಪಿಯನ್‌ಶಿಪ್‌ನ 5ನೇ ಸುತ್ತಿನಲ್ಲಿ ಗೆದ್ದ ಕೆ.ಶಶಿಕಿರಣ್‌ 
*ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ : AICF ಅಧ್ಯಕ್ಷ ಡಾ. ಸಂಜಯ್ ಕಪೂರ್

including Vishwanathan Anand Seven Indian players in top 100 of world chess
Author
Bengaluru, First Published Nov 3, 2021, 8:35 AM IST
  • Facebook
  • Twitter
  • Whatsapp

ರಿಗಾ(ಲಾತ್ವಿಯಾ) (ನ.2) : ಭಾರತೀಯ ಚೆಸ್‌ (Chess) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 7 ಆಟಗಾರರು ವಿಶ್ವ ರ‍್ಯಾಂಕಿಂಗ್‌ನ ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ವಿಸ್‌ ಚೆಸ್‌ ಚಾಂಪಿಯನ್‌ಶಿಪ್‌ನ 5ನೇ ಸುತ್ತಿನಲ್ಲಿ ಕೆ.ಶಶಿಕಿರಣ್‌ (K Sasikiran) ಗೆದ್ದಿದ್ದರಿಂದ ಈ ಮೈಲಿಗಲ್ಲು ಸಾಧ್ಯವಾಯಿತು. ವಿಶ್ವನಾಥನ್‌ ಆನಂದ್‌ (Vishwanathan Anand), ವಿದಿತ್‌ ಗುಜರಾತಿ (Vidit Gujrathi), ಪಿ.ಹರಿಕೃಷ್ಣ (P Harikrishna), ನಿಹಾನ್‌ ಸರಿನ್‌ (Nihal Sarin), ಎಸ್‌.ಎಲ್‌.ನಾರಾಯಣನ್‌ (SL Narayanan), ಬಿ.ಅಧಿಬನ್‌ (B Adhiban) ಅಗ್ರ 100ರಲ್ಲಿರುವ ಉಳಿದ 6 ಆಟಗಾರರು. ಅಗ್ರ 100ರಲ್ಲಿ ರಷ್ಯಾದ 23, ಅಮೆರಿಕದ 10, ಚೀನಾದ 9, ಉಕ್ರೇನ್‌ ಹಾಗೂ ಭಾರತದ ತಲಾ 7 ಆಟಗಾರರಿದ್ದಾರೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

"ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಾವು ಚೆಸ್ ವಿಶ್ವ ರಾರ‍ಯಂಕಿಂಗ್‌ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿ ನಮ್ಮ ಸ್ಥಾನವನ್ನು ಸ್ಥಿರವಾಗಿ ಭದ್ರಪಡಿಸುತ್ತಿದ್ದೇವೆ" ಎಂದು ಎಐಸಿಎಫ್ (All India Chess Federation) ಅಧ್ಯಕ್ಷ ಡಾ. ಸಂಜಯ್ ಕಪೂರ್ (Sanjay Kapoor) ಹೇಳಿದ್ದಾರೆ. FIDE ಗ್ರ್ಯಾಂಡ್ ಸ್ವಿಸ್ 2021 ರ ಓಪನ್ ವಿಭಾಗದಲ್ಲಿ ಹತ್ತು ಭಾರತೀಯ ಆಟಗಾರರು ಪ್ರಸ್ತುತ ಆಟವಾಡುತ್ತಿದ್ದಾರೆ.

 

 

Boxing World Championships: ಭಾರತಕ್ಕೆ ಮೊದಲ ಪದಕ ಖಚಿತ!

ಭಾರತದ ಯುವ ಬಾಕ್ಸಿಂಗ್‌ ತಾರೆ ಆಕಾಶ್‌ ಕುಮಾರ್‌ (Akash Kumar) (54 ಕೆ.ಜಿ.) ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Boxing World Championship) ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದಾರೆ. ಮೊದಲ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಆಕಾಶ್‌ ಮಂಗಳವಾರ ವೆನೆಜುವೆಲಾದ ಯೋಲ್‌ ರಿವಾಸ್‌ (Yoel Finol of Venezuela) ವಿರುದ್ಧ 5-0 ಅಂತರದಲ್ಲಿ ಗೆದ್ದರು. ಸೆಮೀಸ್‌ನಲ್ಲಿ ಕಜಕಸ್ತಾನದ ಮಖ್‌ಮುದ್‌ ವಿರುದ್ಧ ಸೆಣಸಲಿದ್ದಾರೆ. ಇನ್ನು, ಐದು ಬಾರಿ ಏಷ್ಯನ್‌ ಚಾಂಪಿಯನ್‌ ಶಿವ ಥಾಪ (63.5 ಕೆ.ಜಿ.) ಫ್ರಾನ್ಸ್‌ನ ಲೌನೆಸ್‌ ಹಾಮ್ರೋಯಿ ವಿರುದ್ಧ 4-1 ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

Ind vs NZ T20I ಕ್ರಿಕೆಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ..?

ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್ ಕಜಕಿಸ್ತಾನದ ( Kazakhstan) ಮಖ್ಮುದ್ ಸಬಿರ್ಖಾನ್ (Makhmud Sabyrkhan) ಅವರನ್ನು ಎದುರಿಸಲಿದ್ದಾರೆ. ಸಂಜೆ, ಐದು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪಾ (63.5 ಕೆಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಇತರ ಮೂವರು ಭಾರತೀಯರೊಂದಿಗೆ ಟರ್ಕಿಯ ಕೆರೆಮ್ ಓಜ್ಮೆನ್ (Turkey's Kerem Oezmen) ವಿರುದ್ಧ ಸೆಣಸಲಿದ್ದಾರೆ.

ಆಫ್ಘನ್‌ ವಿರುದ್ಧವಾದ್ರೂ ಗೆಲ್ಲುತ್ತಾ ಭಾರತ?

ಪಾಕಿಸ್ತಾನ (Pakistan)ಹಾಗೂ ನ್ಯೂಜಿಲೆಂಡ್‌ (New Zealand) ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ, ಬುಧವಾರ ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಾದರೂ ತಂಡ ಗೆಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸೆಣಸಾಟದಲ್ಲಿ ಭಾರತ ಗೆದ್ದರೆ ಹೆಚ್ಚೇನೂ ಹೊಗಳಿಕೆ ಸಿಗುವುದಿಲ್ಲ, ಆದರೆ ಸೋತರೆ ಅಭಿಮಾನಿಗಳ ಕೆಂಗಣ್ಣಿಗೆ ವಿರಾಟ್‌ ಕೊಹ್ಲಿ (Virat Kohli) ಪಡೆ ಗುರಿಯಾಗಬಹುದು.

 ಸ್ಕಾಟ್ಲೆಂಡ್‌ ಸವಾಲಿಗೆ ರೆಡಿಯಾದ ಕಿವೀಸ್‌!

ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿರುವ ನ್ಯೂಜಿಲೆಂಡ್‌ (New Zealand) ಸೆಮಿಫೈನಲ್‌ ರೇಸ್‌ನಲ್ಲಿ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದ್ದು, ಬುಧವಾರ ಸ್ಕಾಟ್ಲೆಂಡ್‌ (Scotland) ವಿರುದ್ಧ ಆಡಲಿದೆ. ಎರಡೂ ಪಂದ್ಯಗಳಲ್ಲಿ ಸೋತಿರುವ ಸ್ಕಾಟ್ಲೆಂಡ್‌, ಸೆಮೀಸ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿದ್ದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. 

ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ಕಿವೀಸ್‌ ಸೂಪರ್‌-12ರ ಹಂತದಲ್ಲಿ ತಾನಾಡಿದ 2 ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಗುಂಪು 2ರಲ್ಲಿ 3ನೇ ಸ್ಥಾನದಲ್ಲಿದ್ದರೆ, ಸ್ಕಾಟ್ಲೆಂಡ್‌ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳು ಟಿ20 ಮಾದರಿಯಲ್ಲಿ 2ನೇ ಬಾರಿ ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಜಯಗಳಿಸಿತ್ತು.ದೊಡ್ಡ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ನೆಟ್‌ ರನ್‌ರೇಟ್‌ (Run Rate) ಉತ್ತಮಗೊಳಿಸಿಕೊಳ್ಳುವ ಗುರಿಯನ್ನು ಕೇನ್‌ ವಿಲಿಯಮ್ಸನ್‌ ಪಡೆ ಹೊಂದಿದೆ.

Follow Us:
Download App:
  • android
  • ios