ಕಬಡ್ಡಿ ಟೂರ್ನಿಯಲ್ಲಿನ ಮರಾಮಾರಿಯಿಂದ ಆಟಗಾರರಿಗೆ ಗಾಯ, 2 ತಂಡ ಅಮಾನತು!
ಕಬಡ್ಡಿ ಟೂರ್ನಿಯಲ್ಲಿ ರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಕಬಡ್ಡಿ ಪಂದ್ಯದ ಬದಲು ಎರಡು ತಂಡಗಳು ಕುರ್ಚಿ ಹಿಡಿದು ಹೊಡೆದಾಡಿಕೊಂಡಿದೆ. ಪರಿಣಾಮ ಹಲವು ಕಬಡ್ಡಿ ಪಟಗಳು ಗಾಯಗೊಂಡಿದ್ದಾರೆ. ಇತ್ತ ಎರಡೂ ತಂಡವನ್ನು ಅಮಾನತು ಮಾಡಲಾಗಿದೆ.
ಕಾನ್ಪುರ(ಅ.10) ಕಬಡ್ಡಿ ಟೂರ್ನಿಯಲ್ಲಿ ರೋಚಕತೆ ಹೆಚ್ಚು. ಈ ರೋಚಕ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಸೇರಿದಂತೆ ಹಲವರು ಜಮಾಯಿಸಿದ್ದರು. ಆದರೆ ಎರಡು ತಂಡದ ಕಬಡ್ಡಿ ಪಟುಗಳು ಕಬಡ್ಡಿ ಆಡುವ ಬದಲು ಕುರ್ಚಿ, ಮೇಜು ಹಿಡಿದು ಬಡಿದಾಡಿಕೊಂಡಿದ್ದಾರೆ. ಭೀಕರ ಮಾರಾಮಾರಿ ನಡೆದಿದೆ. ಉಭಯ ತಂಡದ ಆಟಗಾರರು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಎರಡು ತಂಡವನ್ನು ಅಮಾನತು ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಐಐಟಿ ಕಾನ್ಪುರ ಕಾಲೇಜಿನಲ್ಲಿ ನಡೆದ ಈ ಕಬಡ್ಡಿ ಟೂರ್ನಿ ರಣಾಂಗಣವಾಗಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಐಐಟಿ ಕಾನ್ಪುರ ಕಾಲೇಜಿನ ವಿದ್ಯಾರ್ಥಿಗಳ ಕಬಡ್ಡಿ ಟೂರ್ನಿಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ವಿದ್ಯಾರ್ಥಿಗಳ ತಂಡಗಳು ಟೂರ್ನಿಗೆ ಸಜ್ಜಾಗಿತ್ತು. ಜರ್ಸಿ ಧರಿಸಿ ಆಟಕ್ಕೆ ಸಜ್ಜಾಗಿದ್ದರು. ಆದರೆ ಪಂದ್ಯ ಆಡುವ ಬದಲು ವಿದ್ಯಾರ್ಥಿಗಳು ಹೊಡೆದಾಡಿದ್ದಾರೆ. ಒಳಾಂಗಣ ಕ್ರೀಂಡಾಗಣದಲ್ಲಿ ಪ್ರೇಕ್ಷಕರಿಗೆ ಇಟ್ಟಿದ್ದ ಕುರ್ಚಿಯನ್ನು ತೆಗೆದು ಬಡಿದಾಡಿಕೊಂಡಿದ್ದಾರೆ.
ಕಬಡ್ಡಿ ಆಟಗಾರನ ಬರ್ಬರ ಹತ್ಯೆ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆ ಮುಂದೆ ಬೀಸಾಡಿದ ದುಷ್ಕರ್ಮಿಗಳು..!
ಉಭಯ ತಂಡಗಳ ಆಟಾಗಾರರು ತೀವ್ರವಾಗಿ ಬಡಿದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇತ್ತ ಕಾಲೇಜು ಆಡಳಿತ ಮಂಡಳಿ ಬಡಿದಾಡಿಕೊಂಡ ಎರಡು ತಂಡಗಳನ್ನು ಅಮಾನತು ಮಾಡಲಾಗಿದೆ. ಇನ್ನು ಉಭಯ ತಂಡದಲ್ಲಿನ ವಿದ್ಯಾರ್ಥಿಗಳ ವಿವರ ಬಹಿರಂಗಪಡಿಸಿಲ್ಲ.
ಕಾನ್ಪುರ ಐಐಟಿ ಕಾಲೇಜಿನಲ್ಲಿ ನಡೆದ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ತಮ್ಮ ಎಲ್ಲೆ ಮೀರುತ್ತಿದ್ದಾರೆ. ಶಿಸ್ತು ಕಲಿಯಬೇಕಾದ ಸಮಯದಲ್ಲಿ ವಿದ್ಯಾರ್ಥಿಗಳು ಈ ರೀತಿ ವರ್ತನೆ ತೋರುವುದು ಸರಿಯಲ್ಲ. ವಿದ್ಯಾರ್ಥಿಗಳನ್ನೂ ಕಾಲೇಜಿನಿಂದಲೇ ಅಮಾನತು ಮಾಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.