ಲಾಂಗ್ ಜಂಪ್ ಅಥ್ಲೀಟ್ ಶೈಲಿ ಸಿಂಗ್ ನನ್ನ ದಾಖಲೆ ಮುರಿದ್ರೆ ಖುಷಿ: ಅಂಜು ಬಾಬಿ ಜಾರ್ಜ್
* ಅಂಡರ್20 ವಿಶ್ವ ಅಥ್ಲೆಟಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಶೈಲಿ ಸಿಂಗ್
* ಶೈಲಿ ಸಾಧನೆಯನ್ನು ಕೊಂಡಾಡಿದ ಅಂಜು ಬಾಬಿ ಜಾರ್ಜ್
* ಅಂಜು ಬಾಬಿ ಜಾರ್ಜ್ ಪತಿ ರಾಬರ್ಟ್ ಬಾಬಿ ಜಾರ್ಜ್ ಮಾರ್ಗದರ್ಶನದಲ್ಲಿ ಪದಕ ಗೆದ್ದ ಶೈಲಿ ಸಿಂಗ್
ನವದೆಹಲಿ(ಆ.24): ಅಂಡರ್20 ವಿಶ್ವ ಅಥ್ಲೆಟಿಕ್ಸ್‌ನ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಶೈಲಿ ಸಿಂಗ್ ಸಾಧನೆಯನ್ನು ಶ್ಲಾಘಿಸಿರುವ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಶೈಲಿ ನನ್ನ ದಾಖಲೆ ಮುರಿದರೆ ನನ್ನಷ್ಟು ಖುಷಿ ಪಡುವವರು ಬೇರಾರಯರೂ ಇಲ್ಲ ಎಂದಿದ್ದಾರೆ.
‘ನನ್ನ ದಾಖಲೆಯನ್ನು ಶೈಲಿ ಮುರಿಯಲಿದ್ದಾರೆ. ಒಲಿಂಪಿಕ್ಸ್‌ನಲ್ಲೂ ಆಕೆ ಪದಕ ಗೆಲ್ಲಲಿದ್ದಾಳೆ. ಒಂದು ವೇಳೆ ಆಕೆ ಪದಕ ಗೆದ್ದರೆ ಅದು ನನ್ನ ಸ್ವಂತದ್ದು ಎಂದೇ ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. 2003ರ ವಿಶ್ವ ಚಾಂಪಿಯನ್‌ಶಿಪ್ ಲಾಂಗ್‌ಜಂಪ್‌ನಲ್ಲಿ ಅಂಜು (6.59ಮೀ. ದೂರ) ಕಂಚು ಗೆದ್ದಿದ್ದರು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಅಂಜು 6.83ಮೀ. ಜಿಗಿದರೂ ಪದಕ ವಂಚಿತರಾಗಿದ್ದರು. ಆದರೆ ಇದು ರಾಷ್ಟ್ರೀಯ ದಾಖಲೆಯಾಗಿ ಈಗಲೂ ಅಂಜು ಹೆಸರಲ್ಲಿದೆ.
ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್
ಭಾನುವಾರ ಶೈಲಿ 6.59ಮೀ. ದೂರಕ್ಕೆ ಜಿಗಿದು ಕೇವಲ 1 ಸೆ.ಮೀ. ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡಿದ್ದರು. ಉತ್ತರ ಪ್ರದೇಶ ಮೂಲಕ ಶೈಲಿ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಂಜು ಬಾಬಿ ಜಾರ್ಜ್ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರು ಶೈಲಿಗೆ ತರಬೇತಿ ನೀಡುತ್ತಿದ್ದಾರೆ.