ಹಾಂಕಾಂಗ್‌(ನ.14): ಭಾರ​ತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಕಳಪೆ ಆಟ ಮುಂದು​ವ​ರಿ​ದಿದೆ. ಇಲ್ಲಿ ನಡೆ​ಯು​ತ್ತಿ​ರುವ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿ​ನಲ್ಲೇ ಸೈನಾ ಸೋಲುಂಡು ಹೊರ​ಬಿ​ದ್ದಿ​ದ್ದಾರೆ. 

ಹಾಂಕಾಂಗ್ ಓಪನ್: ಪ್ರಿ ಕ್ವಾರ್ಟರ್‌ಗೆ ಸಾತ್ವಿಕ್-ಅಶ್ವಿನಿ ಪೊನ್ನಪ್ಪ!

ಬುಧ​ವಾರ ನಡೆದ ಪಂದ್ಯ​ದಲ್ಲಿ ಚೀನಾದ ಕಾಯ್‌ ಯಾನ್‌ ಯಾನ್‌ ವಿರುದ್ಧ 13-21, 20-22 ನೇರ ಗೇಮ್‌ಗಳಲ್ಲಿ ಪರಾ​ಭ​ವಗೊಂಡರು. ಇದೇ ಎದು​ರಾಳಿ ವಿರುದ್ಧ ಕಳೆದ ವಾರ ಚೀನಾ ಓಪನ್‌ನಲ್ಲೂ ಸೈನಾ ಸೋಲುಂಡಿ​ದ್ದರು. ಕಳೆದ 6 ಪಂದ್ಯಾ​ವ​ಳಿ​ಗ​ಳಲ್ಲಿ ಸೈನಾ 5ರಲ್ಲಿ ಮೊದಲ ಸುತ್ತಿ​ನಲ್ಲೇ ಸೋತಿ​ರು​ವುದು, ಅವರ ನಿವೃತ್ತಿ ದಿನ ಹತ್ತಿ​ರ​ವಾ​ಗು​ತ್ತಿ​ದೆಯೇ ಎನ್ನುವ ಅನು​ಮಾನ ಮೂಡಿ​ಸುತ್ತಿದೆ.

ಫ್ರೆಂಚ್ ಓಪನ್: ಸಾತ್ವಿಕ್‌-ಚಿರಾಗ್‌ಗೆ ರನ್ನರ್‌ಅಪ್‌ ಪ್ರಶಸ್ತಿ!

ವಿಶ್ವ ನಂ.16 ಸಮೀರ್‌ ವರ್ಮಾ, ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿ​ನಲ್ಲಿ ಚೈನೀಸ್‌ ತೈಪೆಯ ವಾಂಗ್‌ ತ್ಸು ವೀ ವಿರುದ್ಧ 11-21, 21-13, 8-21 ಗೇಮ್‌ಗಳಲ್ಲಿ ಸೋಲುಂಡರು. ಸತತ 3ನೇ ಟೂರ್ನಿ​ಯಲ್ಲಿ ಸಮೀರ್‌ ಮೊದಲ ಸುತ್ತಿ​ನಲ್ಲೇ ಹೊರ​ಬಿ​ದ್ದಿ​ದ್ದಾರೆ.

6ನೇ ಶ್ರೇಯಾಂಕಿತೆ ಪಿ.ವಿ.​ಸಿಂಧು, ಮೊದಲ ಸುತ್ತಿ​ನಲ್ಲಿ ಕೊರಿ​ಯಾದ ಕಿಮ್‌ ಗಾ ಯುನ್‌ ವಿರುದ್ಧ 21-15, 21-16 ಗೇಮ್‌ಗಳಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದರು. ಮುಂದಿನ ಪಂದ್ಯ​ದಲ್ಲಿ ಅವರು ಒಲಿಂಪಿಕ್‌ ವಿಜೇತೆ ಥಾಯ್ಲೆಂಡ್‌ನ ಬುಸಾ​ನನ್‌ ವಿರುದ್ಧ ಸೆಣ​ಸ​ಲಿ​ದ್ದಾರೆ.

ಪುರು​ಷರ ಸಿಂಗಲ್ಸ್‌ನ ಮೊದಲ ಸುತ್ತಿ​ನಲ್ಲಿ ಚೀನಾದ ಹುವಾಂಗ್‌ ಯು ವಿರುದ್ಧ 21-17, 21-17 ಗೇಮ್‌ಗಳಲ್ಲಿ ಗೆದ್ದ ಎಚ್‌.ಎಸ್‌.ಪ್ರ​ಣಯ್‌, ವಿಶ್ವ ನಂ.12 ಜಪಾನ್‌ನ ಕಿಂಟಾ ನಿಶಿ​ಮೊಟೊ ವಿರುದ್ಧ 21-18, 16-21, 21-10 ಗೇಮ್‌ಗಳಲ್ಲಿ ಗೆದ್ದ ಪಿ.ಕ​ಶ್ಯಪ್‌ 2ನೇ ಸುತ್ತಿಗೆ ಪ್ರವೇ​ಶಿ​ಸಿ​ದರು. ಮಾಜಿ ವಿಶ್ವ ನಂ.2 ಚೀನಾದ ಶೀ ಯೂಕಿ ವಿರುದ್ಧ ಮೊದಲ ಸುತ್ತಿನಲ್ಲಿ 21-11, 18-21, 12-21 ಗೇಮ್‌ಗಳಲ್ಲಿ ಸೋತ ಬಿ.ಸಾಯಿ ಪ್ರಣೀತ್‌ ಟೂರ್ನಿ​ಯಿಂದ ಹೊರ​ಬಿ​ದ್ದರು.