ವಿನೇಶ್‌ರ ಘಟನೆ ಬಳಿಕ ಈ ನಿಯಮವನ್ನು ಸಡಿಲಗೊಳಿಸುವಂತೆ ಅನೇಕ ಕುಸ್ತಿಪಟುಗಳು ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು)ಗೆ ಒತ್ತಾಯಿಸಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 74 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಮೆರಿಕದ ಜಾರ್ಡನ್‌ ಬರೋಸ್‌ ಕೆಲ ತಿದ್ದುಪಡಿಗಳನ್ನು ತರುವಂತೆ ಸಲಹೆ ನೀಡಿದ್ದು, ವಿನೇಶ್‌ಗೆ ಬೆಳ್ಳಿ ಪದಕ ನೀಡುವಂತೆ ಆಗ್ರಹಿಸಿದ್ದಾರೆ.

ಕುಸ್ತಿ ವಿಶ್ವಕಪ್‌ ಹಾಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಕುಸ್ತಿಪಟುಗಳಿಗೆ 2 ಕೆ.ಜಿ. ತೂಕ ವಿನಾಯಿತಿ ಇದೆ. ಅಂದರೆ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಕುಸ್ತಿಪಟು ಗರಿಷ್ಠ 52 ಕೆ.ಜಿ.ವರೆಗೂ ತೂಕ ಇರಬಹುದು. ಆದರೆ, ಒಲಿಂಪಿಕ್ಸ್‌ನಲ್ಲಿ ವಿನಾಯಿತಿ ಇಲ್ಲ. 50 ಕೆ.ಜಿ. ಅಂದರೆ 50. ಕೆ.ಜಿ. ಅಥವಾ ಅದಕ್ಕಿಂತ ಕಡಿಮೆ ಇರಬೇಕು. 

ವಿನೇಶ್‌ರ ಘಟನೆ ಬಳಿಕ ಈ ನಿಯಮವನ್ನು ಸಡಿಲಗೊಳಿಸುವಂತೆ ಅನೇಕ ಕುಸ್ತಿಪಟುಗಳು ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು)ಗೆ ಒತ್ತಾಯಿಸಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 74 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಮೆರಿಕದ ಜಾರ್ಡನ್‌ ಬರೋಸ್‌ ಕೆಲ ತಿದ್ದುಪಡಿಗಳನ್ನು ತರುವಂತೆ ಸಲಹೆ ನೀಡಿದ್ದು, ವಿನೇಶ್‌ಗೆ ಬೆಳ್ಳಿ ಪದಕ ನೀಡುವಂತೆ ಆಗ್ರಹಿಸಿದ್ದಾರೆ.

ಒಲಿಂಪಿಕ್ ಜಾವೆಲಿನ್ ಚಾಂಪಿಯನ್‌ ನೀರಜ್ ಚೋಪ್ರಾಗೆ 2ನೇ ಬಂಗಾರದ ಗುರಿ: ಇಂದು ಫೈನಲ್‌

ಜಾರ್ಡನ್‌ರ ಒತ್ತಾಯವೇನು?

- 2ನೇ ದಿನ ಗರಿಷ್ಠ 1 ಕೆ.ಜಿ. ವರೆಗೂ ತೂಕ ಹೆಚ್ಚಿರಲು ಅವಕಾಶ ನೀಡಬೇಕು.

- ತೂಕ ಪರೀಕ್ಷೆಯನ್ನು ಬೆಳಗ್ಗೆ 8.30ರ ಬದಲು ಬೆಳಗ್ಗೆ 10.30ಕ್ಕೆ ನಡೆಸಬೇಕು.

- ತೂಕ ಪರೀಕ್ಷೆಯಲ್ಲಿ ಫೇಲಾದರೆ ಪದಕ ಸುತ್ತನ್ನು ಬಿಟ್ಟುಕೊಡಲು ಅನುಮತಿ ನೀಡಬೇಕು.

- ಸೆಮಿಫೈನಲ್‌ನಲ್ಲಿ ಗೆದ್ದು ಪದಕ ಖಚಿತಪಡಿಸಿಕೊಳ್ಳುವ ಇಬ್ಬರು ಕುಸ್ತಿಪಟುಗಳಿಗೂ ಪದಕ ಸಿಗಲೇಬೇಕು. ತೂಕ ಪರೀಕ್ಷೆಯಲ್ಲಿ ಫೇಲಾದರೆ ಆ ಕುಸ್ತಿಪಟುವಿಗೆ ಬೆಳ್ಳಿ ನೀಡಬೇಕು.

- ವಿನೇಶ್‌ ಫೋಗಟ್‌ಗೆ ಈ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ನೀಡಬೇಕು.

ದಿಟ್ಟೆ ವಿನೇಶ್‌ ಮೆಡಲ್‌ ಗೆಲ್ಲದಿದ್ದರೂ ವಿನೇಶ್‌ ಭಾರತೀಯರ ಪಾಲಿಗೆ ಹೀರೋ!

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ವಿನೇಶ್‌ಗೆ ಪದಕ ಗೆಲ್ಲುವ ಅವಕಾಶ ತಪ್ಪಿರಬಹುದು. ಆದರೆ ಅವರು ಭಾರತೀಯರ ಪಾಲಿಗೆ ಹೀರೋ. ಕಳೆದ ವರ್ಷ ಭಾರತೀಯ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕುಸ್ತಿಪಟುಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿನೇಶ್‌, 40 ದಿನಕ್ಕೂ ಹೆಚ್ಚು ಕಾಲ ರಸ್ತೆಯಲ್ಲೇ ಉಳಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರನ್ನು ಪೊಲೀಸರು ರಸ್ತೆಯಲ್ಲಿ ಎಳೆದಾಡಿ, ಬಂಧಿಸಿದ ಪ್ರಸಂಗವೂ ನಡೆದಿತ್ತು.

ಹೆಚ್ಚೂ ಕಡಿಮೆ ಒಂದು ವರ್ಷ ಕಾಲ ಕುಸ್ತಿ ಸ್ಪರ್ಧೆಯಿಂದಲೇ ದೂರ ಉಳಿದಿದ್ದ ವಿನೇಶ್‌, ಕುಸ್ತಿಗೆ ಮತ್ತೆ ಮರಳುವ ಬಗ್ಗೆಯೇ ಅನುಮಾನ ಮೂಡಿತ್ತು. ಆದರೆ ಅವರು ಛಲ ಬಿಟ್ಟಿರಲಿಲ್ಲ. ಬೆಟ್ಟದಷ್ಟು ಟೀಕೆಗಳು ಎದುರಾಗುತ್ತಿದ್ದರೂ ಹೋರಾಟ ಬಿಡಲಿಲ್ಲ.

ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್‌ ಚಾನ್ಸ್‌..! ಆದ್ರೆ ಪವಾಡ ನಡಿಬೇಕು..!

ಈ ನಡುವೆ ಅವರಿಗೆ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶವೂ ಕೈತಪ್ಪಿತ್ತು. ರಸ್ತೆಯಲ್ಲಿನ ಹೋರಾಟದ ನಡುವೆ ಕುಸ್ತಿ ಮ್ಯಾಟ್‌ನಲ್ಲಿ ಮತ್ತಷ್ಟು ಶ್ರಮ ಪಡಬೇಕಾದ ಅನಿವಾರ್ಯತೆ ಎದುರಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲೇಬೇಕು ಎನ್ನುವ ಹಠದಿಂದ 50 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲು ನಿರ್ಧರಿಸಿದರು. ಆದರೆ ಅರ್ಹತೆ ಪಡೆಯುವುದು ಸಹ ಸವಾಲಾಗಿ ಪರಿಣಮಿಸಿತ್ತು.

ಕೊನೆ ಕ್ಷಣದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡ ವಿನೇಶ್‌ಗೆ ಮೊದಲ ಸುತ್ತಿನಲ್ಲೇ ಭಾರಿ ದೊಡ್ಡ ಸವಾಲು ಎದುರಾಯಿತು. ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಒಮ್ಮೆಯೂ ಸೋಲು ಕಾಣದ ಜಪಾನ್‌ನ ಸುಸಾಕಿ, ವಿನೇಶ್‌ರ ಮೊದಲ ಎದುರಾಳಿಯಾದರು. ಆದರೆ ಸುಸಾಕಿ ವಿರುದ್ಧ ಗೆದ್ದು ವಿನೇಶ್‌ ಕುಸ್ತಿ ಜಗತ್ತಿಗೇ ಅಚ್ಚರಿ ಮೂಡಿಸಿದರು.

ಬಳಿಕ ಫೈನಲ್‌ ಪ್ರವೇಶಿಸಿ, ಐತಿಹಾಸಿಕ ಪದಕದ ನಿರೀಕ್ಷೆಯಲ್ಲಿದ್ದರು. ತೂಕ ಹೆಚ್ಚಳ ಘಟನೆಯಿಂದ ವಿನೇಶ್‌ ಪದಕ ವಂಚಿತರಾಗಿರಬಹುದು, ಆದರೆ ಭಾರತೀಯ ಕುಸ್ತಿಪಟುಗಳ ಪಾಲಿಗೆ, ಅಭಿಮಾನಿಗಳ ಪಾಲಿಗೆ, ಭಾರತೀಯ ಕ್ರೀಡಾಪಟುಗಳೆಲ್ಲರ ಪಾಲಿಗೆ ವಿನೇಶ್‌ ಎಂದಿಗೂ ಸಾಧಕಿಯಾಗೇ ಉಳಿಯಲಿದ್ದಾರೆ.