ಫ್ರೆಂಚ್ ಓಪನ್ನಿಂದ ವಿಶ್ವ ನಂ.1 ಆಶ್ಲೆ ಬಾರ್ಟಿ ಔಟ್
* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೆ ಅಚ್ಚರಿಯ ಫಲಿತಾಂಶ
* ವಿಶ್ವ ನಂ.1 ಆಟಗಾರ್ತಿ, ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಟೂರ್ನಿಯಿಂದ ಔಟ್
* ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ನಡೆದ ಬಾರ್ಟಿ
ಪ್ಯಾರಿಸ್(ಜೂ.04): ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಮತ್ತೆ ಅಚ್ಚರಿಯ ಫಲಿತಾಂಶ ಎದುರಾಗಿದೆ. ವಿಶ್ವ ನಂ.1 ಆಟಗಾರ್ತಿ, ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪೋಲೆಂಡ್‌ನ ಮಾಗ್ಡ ಲಿನೆಟಿ ವಿರುದ್ಧದ ಪಂದ್ಯದಲ್ಲಿ ಬಾರ್ಟಿ ಮೊದಲ ಸೆಟ್ 1-6 ಗೇಮ್‌ಗಳಲ್ಲಿ ಸೋತು, 2ನೇ ಸೆಟ್‌ನಲ್ಲಿ 2-2ರಲ್ಲಿ ಸಮಬಲ ಸಾಧಿಸಿದ್ದರು. ಇದೇ ವೇಳೆ 9ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 2ನೇ ಸುತ್ತಿನಲ್ಲೇ ಸೋಲುಂಡಿದ್ದಾರೆ. 2017ರ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಸ್ಲೋನ್ ಸ್ಟೀಫನ್ಸ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋಲು ಕಂಡರು.
ಫ್ರೆಂಚ್ ಓಪನ್ ಟೆನಿಸ್: ಜೋಕೋವಿಚ್, ನಡಾಲ್ ಶುಭಾರಂಭ
ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಪ್ರಯಾಸದ ಗೆಲುವು ಸಾಧಿಸಿದ ವಿಶ್ವ ನಂ.2 ರಷ್ಯಾದ ಡೇನಿಲ್ ಮೆಡ್ವೆಡೆವ್ 3ನೇ ಸುತ್ತಿಗೇರಿದ್ದಾರೆ. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಕ್ರೊವೇಷಿಯಾದ ಫ್ರಾಂಕೊ ಸ್ಕುಗರ್ ಜೋಡಿ ಪ್ರಿ ಕ್ವಾರ್ಟರ್ ಪ್ರವೇಶಿಸಿದೆ.