Asianet Suvarna News Asianet Suvarna News

ಫ್ರೆಂಚ್ ಓಪನ್: ಹಾಲೆಪ್ ಹೋರಾಟ ಅಂತ್ಯ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ರೋಮೇನಿಯಾದ ಸಿಮೊನಾ ಹಾಲೆಪ್ ಆಘಾತಕಾರಿಯಾದ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

French Open 2020 Polish teenager Iga Swiatek Stuns Top Seed Simona Halep To Reach Quarters kvn
Author
paris, First Published Oct 5, 2020, 12:18 PM IST
  • Facebook
  • Twitter
  • Whatsapp

ಪ್ಯಾರಿಸ್: 2018ರ ಚಾಂಪಿಯನ್, ವಿಶ್ವ ನಂ.2 ರೋಮೇನಿಯಾದ ಸಿಮೊನಾ ಹಾಲೆಪ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ನಿಂದ ಹೊರಬಿದ್ದಿದ್ದಾರೆ. 

ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಹಾಲೆಪ್, ಶ್ರೇಯಾಂಕ ರಹಿತೆ ಪೋಲೆಂಡ್‌ನ ಇಗಾ ಸ್ವಿಟೆಕ್ ವಿರುದ್ಧ 1-6, 2-6 ನೇರ ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಸ್ವಿಟೆಕ್, ಗ್ರ್ಯಾನ್‌ಸ್ಲಾಮ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಪ್ರವೇಶಿಸಿದರು. ಉಕ್ರೇನ್‌ನ ಎಲಿನಾ ಸ್ವಿಟೊಲಿನಾ, ಇಟಲಿಯ ಮಾರ್ಟಿನಾ, ಅರ್ಜೆಂಟೀನಾದ ನದಿಯಾ ಕ್ವಾರ್ಟರ್ ಗೇರಿದರು. 

ಫ್ರೆಂಚ್ ಓಪನ್: ನಡಾಲ್, ಜ್ವರೆವ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ

ನಡಾಲ್ ಕ್ವಾರ್ಟರ್‌ಗೆ: ದಾಖಲೆ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕದ ಸೆಬಾಸ್ಟಿಯನ್ ವಿರುದ್ಧ 6-1, 6-1, 6-2 ರಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. ಮತ್ತೊಂದು ಪ್ರಿಕ್ವಾರ್ಟರ್‌ನಲ್ಲಿ ಜರ್ಮನಿಯ ಜ್ವೆರೆವ್, ಇಟಲಿಯ ಸಿನ್ನೆರ್ ವಿರುದ್ಧ ಸೋತು ಹೊರಬಿದ್ದರು. 

ಪ್ರಿಕ್ವಾರ್ಟರ್‌ಗೆ ಜೋಕೋ: ವಿಶ್ವ ನಂ.1 ಸರ್ಬಿಯಾದ ಟೆನಿಸಿಗ ನೊವಾಕ್ ಜೋಕೋವಿಚ್, 3ನೇ ಸುತ್ತಲ್ಲಿ ಕೊಲಂಬಿಯಾದ ಡೆನಿಲ್ ಗಲನ್ ವಿರುದ್ಧ 6-0, 6-3, 6-2ರಲ್ಲಿ ಗೆದ್ದರು.
 

Follow Us:
Download App:
  • android
  • ios