ಎಫ್1 ರೇಸ್: ಪ್ರಾಣಾಪಾಯದಿಂದ ಪಾರಾದ ಹ್ಯಾಮಿಲ್ಟನ್..!
* ಇಟಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ತಪ್ಪಿತು ಭಾರೀ ಅವಘಡ
* 7 ಬಾರಿ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಾಣಾಪಾಯದಿಂದ ಪಾರು
* ಹಾಲೋ’ ಸುರಕ್ಷತೆ ವ್ಯವಸ್ಥೆಯಿಂದಾಗಿ ಬಚಾವಾದ ಹ್ಯಾಮಿಲ್ಟನ್
ಮೊನ್ಜಾ(ಸೆ.13): ಇಟಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ವೇಳೆ ಭಾರೀ ಅಪಘಾತ ನಡೆದಿದ್ದು, ‘ಹಾಲೋ’ ಸುರಕ್ಷತೆ ವ್ಯವಸ್ಥೆಯಿಂದಾಗಿ 7 ಬಾರಿ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೆಡ್‌ಬುಲ್ ರೇಸಿಂಗ್ ತಂಡದ, ನೆದರ್‌ಲೆಂಡ್ಸ್‌ನ ಚಾಲಕ ಮ್ಯಾಕ್ಸ್ ವಸ್ರ್ಟಾಪೆನ್ ಅಪಾಯಕಾರಿಯಾರಿ ಚಾಲನೆ ಮಾಡಿದ ಕಾರಣ, ತಿರುವೊಂದರಲ್ಲಿ ಅವರ ಕಾರು ಮರ್ಸಿಡೀಸ್ ತಂಡದ ಹ್ಯಾಮಿಲ್ಟನ್‌ರ ಕಾರಿನ ಮೇಲೆ ಬಿತ್ತು. ಇದರಿಂದಾಗಿ ಇಬ್ಬರೂ ರೇಸ್‌ನಿಂದ ಹೊರಬಿದ್ದರು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವಸ್ರ್ಟಾಪೆನ್ ಕಾರಿನ ಚಕ್ರ ಹ್ಯಾಮಿಲ್ಟನ್ ತಲೆ ಮೇಲೆ ಹರಿಯುತ್ತಿತ್ತು.
ಆಕ್ರೋಶದಿಂದ ಬಿಯರ್ ಎಸೆದ ಫ್ಯಾನ್ಸ್, ಕ್ಯಾಚ್ ಹಿಡಿದು ಮೈದಾನದಲ್ಲೇ ಕುಡಿದ ಫುಟ್ಬಾಲ್ ಪಟು!
ಏನಿದು ‘ಹಾಲೋ’ ವ್ಯವಸ್ಥೆ?
‘ಹಾಲೋ’ ವ್ಯವಸ್ಥೆಯನ್ನು ಎಫ್1 ಕಾರಿನಲ್ಲಿ ಚಾಲಕನ ಸುರಕ್ಷತೆಗೆ ಬಳಸಲಾಗುತ್ತದೆ. ಕಾಕ್‌ಪಿಟ್ ಮೇಲೆ ಟೈಟಾನಿಯಂನಿಂದ ತಯಾರಿಸಿದ 3 ಪಟ್ಟಿಗಳನ್ನು ಅವಳಡಿಸಲಾಗಿರುತ್ತದೆ. ಇವು ಒಂದು ಕಾರು ಮತ್ತೊಂದು ಕಾರಿನ ಮೇಲೆ ಬಿದ್ದಾಗ, ಇಲ್ಲವೇ ಬೇರೆ ಯಾವುದಾದರೂ ವಸ್ತುಗಳು ಕಾರಿನ ಮೇಲೆ ಬಿದ್ದಾಗ ಕಾಕ್‌ಪಿಟ್‌ನೊಳಗಿರುವ ಚಾಲಕನ ತಲೆಗೆ ತಗುವುದನ್ನು ತಡೆಯುತ್ತವೆ. ‘ಹಾಲೋ’ ಪಟ್ಟಿಗಳು 12,000 ಕೆ.ಜಿ. ತೂಕವನ್ನು ತಡೆಯಬಲ್ಲವು. 2018ರಿಂದ ‘ಹಾಲೋ’ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.