US Open: 2ನೇ ಸುತ್ತಿಗೇರಿದ ಸಿಮೋನಾ ಹಾಲೆಪ್
* ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸಿಮೋನಾ ಹಾಲೆಪ್
* ಇಟಲಿಯ ಕ್ಯಾಮಿಲಾಗಿಯೊರ್ಗಿ ವಿರುದ್ದ ಗೆಲುವು ಸಾಧಿಸಿದ ಹಾಲೆಪ್
* ಯುಎಸ್ ಓಪನ್‌ನಲ್ಲಿ ಸಾನಿಯಾ-ಬೋಪಣ್ಣ ಸ್ಪರ್ಧೆ
ನ್ಯೂಯಾರ್ಕ್(ಆ.31): ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಸೋಮವಾರ(ಆ.30) ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಇಟಲಿಯ ಕ್ಯಾಮಿಲಾಗಿಯೊರ್ಗಿ ವಿರುದ್ದ 6-4, 7-6(7/3), ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ ಸಿಮೋನಾ, ಎರಡನೇ ಸೆಟ್‌ನಲ್ಲಿ ಪ್ರಬಲವಾದ ಪೈಪೋಟಿ ಎದುರಿಸಿದರು. ಇಬ್ಬರು 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿದ ಕಾರಣ ಟೈ ಬ್ರೇಕರ್ ಮೊರೆ ಹೋಗಲಾಯಿತು.
US Open: 21ನೇ ಗ್ರ್ಯಾನ್ ಸ್ಲಾಂ ಮೇಲೆ ಜೋಕೋವಿಚ್ ಕಣ್ಣು..!
ಸಾನಿಯಾ-ಬೋಪಣ್ಣ ಸ್ಪರ್ಧೆ: ಯುಎಸ್ ಓಪನ್ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲು ಭಾರತೀಯರು ಅರ್ಹತೆ ಪಡೆದಿಲ್ಲ. ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ, ಕ್ರೊವೇಷಿಯಾದ ಇವಾನ್ ಡೊಡಿಗ್ ಜೊತೆ ಸ್ಪರ್ಧಿಸಲಿದ್ದಾರೆ. ಇನ್ನು ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಅಮೆರಿಕದ ಕೊಕೋ ವ್ಯಾಂಡವೀ ಜೊತೆ ಸ್ಪರ್ಧಿಸಲಿದ್ದಾರೆ. ಮಿಶ್ರ ಡಬಲ್ಸ್‌ನ ವಿವರವನ್ನು ಆಯೋಜಕರು ಇನ್ನೂ ಪ್ರಕಟಿಸಲಿಲ್ಲ.