ಏಷ್ಯಾ ಬಾಸ್ಕೆಟ್‌ಬಾಲ್: ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರು ಆಯ್ಕೆ
* ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿಗೆ ಭಾರತ ತಂಡ ಪ್ರಕಟ
* ರಾಜ್ಯದ ಇಬ್ಬರು ಆಟಗಾರ್ತಿಯರಿಗೆ ಭಾರತ ತಂಡದಲ್ಲಿ ಸ್ಥಾನ
* ಭಾರತ ತಂಡಕ್ಕೆ ‘ಎ’ ಗುಂಪಿನಲ್ಲಿ ಸ್ಥಾನ
ಬೆಂಗಳೂರು(ಸೆ.15): ಇದೇ ಸೆಪ್ಟೆಂಬರ್ 27ರಿಂದ ಅಕ್ಟೊಬರ್ 3ರ ವರೆಗೂ ಜೊರ್ಡನ್‌ನ ಅಮ್ಮಾನ್‌ನಲ್ಲಿ ನಡೆಯಲಿರುವ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿಗೆ ಮಂಗಳವಾರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಇಬ್ಬರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ರಾಷ್ಟ್ರೀಯ ಟೂರ್ನಿಗಳಲ್ಲಿ ರೈಲ್ವೇಸ್ ಪರ ಆಡುವ ಮೈಸೂರು ಆಟಗಾರ್ತಿ ಪಿ.ಯು.ನವನೀತ ಹಾಗೂ ರಾಜ್ಯ ತಂಡವನ್ನೇ ಪ್ರತಿನಿಧಿಸುವ ಎಂ.ಸಹನಾ 12 ಆಟಗಾರ್ತಿಯರ ತಂಡದಲ್ಲಿದ್ದಾರೆ. ಭಾರತ ಮಹಿಳಾ ಬಾಕ್ಸಿಂಗ್ ತಂಡವನ್ನು ಶಿರೀನ್ ಲಿಮಾಯೆ ಮುನ್ನಡೆಸಲಿದ್ದಾರೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್, ಕೊರಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
US Open ಅನುಚಿತ ವರ್ತನೆ ತೋರಿದ ಜೋಕೋಗೆ 7 ಲಕ್ಷ ರೂ ದಂಡ!
ಡುರಾಂಡ್ ಕಪ್: ಎಫ್‌ಸಿ ಬೆಂಗಳೂರಿಗೆ ಗೆಲುವು
ಕಲ್ಯಾಣಿ: ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಎಫ್‌ಸಿ ಬೆಂಗಳೂರು ತಂಡ, ಮಂಗಳವಾರ ನಡೆದ ಪಂದ್ಯದಲ್ಲಿ ಮೊಹಮಡೆನ್ ಸ್ಪೋರ್ಟಿಂಗ್ ಕ್ಲಬ್ ತಂಡದ ವಿರುದ್ಧ 2-0 ಗೋಲುಗಳ ಗೆಲುವು ಸಾಧಿಸಿ, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಎರಡೂ ತಂಡಗಳು ಈ ಪಂದ್ಯಕ್ಕೂ ಮೊದಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದವು.
ಏಷ್ಯನ್ ವಾಲಿಬಾಲ್: ಭಾರತಕ್ಕೆ ಹ್ಯಾಟ್ರಿಕ್ ಸೋಲು
ಚಿಬಾ(ಜಪಾನ್): ಏಷ್ಯನ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಮಂಗಳವಾರ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ವಿಶ್ವ ನಂ.10, ಆತಿಥೇಯ ಜಪಾನ್ ವಿರುದ್ಧ 15-25, 15-25, 18-25 ನೇರ ಗೇಮ್‌ಗಳಲ್ಲಿ ಪರಾಭವಗೊಂಡಿತು.ಗುಂಪು ಹಂತದ ಮೂರು ಪಂದ್ಯಗಳಲ್ಲಿ ಭಾರತ ನೇರ ಗೇಮ್‌ಗಳಲ್ಲಿ ಸೋತು, ಅಂತಿಮ ಸ್ಥಾನ ಪಡೆಯಿತು. 9ರಿಂದ 12ನೇ ಸ್ಥಾನಕ್ಕಾಗಿ ಭಾರತ ತಂಡ ಆಡಲಿದೆ.