ಏಷ್ಯಾಕಪ್ ಬಾಸ್ಕೆಟ್‌ಬಾಲ್ ಅರ್ಹತಾ ಸುತ್ತು ಆಡಲು ಬಹರೈನ್‌ಗೆ ತೆರಳಿದ ಭಾರತ ತಂಡ
ಬಹರೈನ್‌ನ ಮನಾಮದಲ್ಲಿ ನಡೆಯಲಿರುವ ಫಿಭಾ ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪ್ರಯಾಣ ಬೆಳೆಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ನ.22): ನವೆಂಬರ್ 24 ರಿಂದ 30ರವರೆಗೆ ಬಹರೈನ್‌ನ ಮನಾಮದಲ್ಲಿ ನಡೆಯಲಿರುವ ಫಿಭಾ ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಅರ್ಹತಾ ಸುತ್ತಿನ (ವಿಂಡೋ-2) ಪಂದ್ಯಾವಳಿ ನಡೆಯಲಿದೆ.
ಭಾರತ ಹಿರಿಯ ಪುರುಷರ ಬಾಸ್ಕೆಟ್‌ಬಾಲ್ ತಂಡ ಶನಿವಾರ ಬಹರೈನ್‌ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಭಾರತ ಬಾಸ್ಕೆಟ್‌ಬಾಲ್ ತಂಡವನ್ನು ಬಿಳ್ಕೋಟ್ಟರು.
ಕೋವಿಡ್ ಸುರಕ್ಷತಾ ಕ್ರಮದೊಂದಿಗೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಭಾರತ ತಂಡ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಲೆಬನಾನ್, ಇರಾಕ್ ಹಾಗೂ ಸ್ಥಳೀಯ ಬಹರೈನ್ ‘ಡಿ’ ಗುಂಪಿನಲ್ಲಿನ ಇತರೆ ತಂಡಗಳಾಗಿವೆ.
ಲಾಕ್‌ಡೌನ್ ಬಳಿಕ ಬೆಂಗಳೂರಲ್ಲಿ ಮೊದಲ ಟೆನಿಸ್ ಟೂರ್ನಿ
ಬಹರೈನ್‌ನ ಮನಾಮ, ಕತಾರ್‌ನ ದೋಹಾ ಹಾಗೂ ಜೋರ್ಡನ್‌ನ ಅಮಾನ್‌ನಲ್ಲಿ ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯಾಟಗಳು ನಡೆಯಲಿವೆ. ಬಹರೈನ್‌ನ ಮನಾಮಾದಲ್ಲಿ ‘ಎ’ ಮತ್ತು ‘ಡಿ’ ಗುಂಪಿನ ಪಂದ್ಯಾವಳಿಗಳು ನಡೆಯಲಿವೆ. ‘ಎ’ ಗುಂಪಿನಲ್ಲಿ ಕೊರಿಯಾ, ಫಿಲಿಫೈನ್ಸ್, ಇಂಡೋನೇಷ್ಯಾ, ಮತ್ತು ಥೈಲ್ಯಾಂಡ್ ದೇಶಗಳು ಸ್ಥಾನ ಪಡೆದಿದ್ದರೆ, ‘ಡಿ’ಗುಂಪಿನಲ್ಲಿ ಆತಿಥೇಯ ಬಹರೈನ್, ಇರಾಕ್, ಲೆಬನಾನ್ ಮತ್ತು ಭಾರತ ತಂಡಗಳು ಸ್ಥಾನ ಪಡೆದಿವೆ